ಮಂಗಳೂರು : ಗೋವಾದಲ್ಲಿ ಅತಂತ್ರ ಫಲಿತಾಂಶ ಬಂದರೆ ಏನಾದರೂ ಮಾಡಬೇಕೆಂಬ ಯೋಚನೆ ಕಾಂಗ್ರೆಸ್ ಗೆ ಇದೆ. ಯಾಕೆಂದರೆ ಈಗ ಅವರಿಗೆ ಎಲ್ಲಿಯೂ ಅಧಿಕಾರ ಇಲ್ಲ. ಕಾಂಗ್ರೆಸ್ ಗೆ ಎಲ್ಲಿಯೂ ಅಸ್ತಿತ್ವ ಇಲ್ಲ. ಬೇರೆಯವರ ಜೊತೆ ಸೇರಿ ಗಾಳ ಹಾಕುತ್ತಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿ ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡಿಕೆಶಿ(DK Shivakumar) ಕೂಡಾ ಗೋವಾದಲ್ಲಿ ಗಾಳ ಹಾಕೋಕೆ ಹೋಗಿದ್ದಾರೆ. ಆದರೆ ಗಾಳ ಹಾಕುವ ಕನಸು ಯಶಸ್ವಿಯಾಗೋದಿಲ್ಲ. ರೈತ ಮಸೂದೆಯನ್ನು ಹೋರಾಟಕ್ಕೆ ಮಣಿದು ಹಿಂದೆ ತೆಗೆದಿರೋದು ಅಲ್ಲ. ರೈತ ರಲ್ಲಿ ವಿಭಜನೆ ಆಗಬಾರೆಂದು ಅವರ ವಿಶ್ವಾಸ ಪಡೆದು ಮಸೂದೆ ಹಿಂಪಡೆದಿದ್ದೇವೆ. ಯುಪಿಯಲ್ಲಿ ರೈತ ಹೋರಾಟದ ಜಾಗಗಳಲ್ಲಿ ಅತೀ ಹೆಚ್ಚು ಮತಗಳು ಬಿಜೆಪಿ ಬಂದಿದೆ ಎಂದರು.


ಇದನ್ನೂ ಓದಿ : Nalin Kumar Kateel : ಪಂಚರಾಜ್ಯಗಳ ಚುನಾವಣೆ : ರೈತರ ಕಾಯಿದೆ ಬಿಜೆಪಿಗೆ ಮುಳುವಾಯ್ತಾ? ನಳಿನ್ ಕುಮಾರ್ ಪ್ರಶ್ನೆ


ಪಂಚರಾಜ್ಯ ಚುನಾವಣಾ ಫಲಿತಾಂಶ ವಿಚಾರವಾಗಿ ಮಾತನಾಡಿದ ಅವರು(DV Sadanand gowda), ನಿರೀಕ್ಷೆಯಂತೇ ಫಲಿತಾಂಶ ಬರುತ್ತಿದೆ. ಸರ್ಕಾರ ಮಾಡಿದ ಕೆಲಸ ಕಾರ್ಯದ ಆಧಾರವಾಗಿ ಜನ ಮತ ನೀಡಿದ್ದಾರೆ. ಪಂಜಾಬ್ ನಲ್ಲಿ ಬಿಜೆಪಿ ನೆಲೆ ಇರಲಿಲ್ಲ. ಅಕಾಲಿದಳ ಕಾಂಗ್ರೆಸ್ ಜಂಟಿಯಾಗಿ ಬಿಜೆಪಿ ವಿರುದ್ಧ ಗೂಬೆ ಕೂರಿಸಿದೆ. ಬಿಜೆಪಿ ಪಂಜಾಬ್ ನಲ್ಲಿ ವಿಸ್ತರಣೆ ಮಾಡದಂತೆ ಷಡ್ಯಂತ್ರ ರೂಪಿಸಿದ್ದರು. ಹೀಗಾಗಿ ಬಿಜೆಪಿ ಗೆ ಪಂಜಾಬ್ ನಲ್ಲಿ ಸ್ವಲ್ಪ ಹಿನ್ನಡೆ ಯಾಗಿದೆ. ಆದರೂ ಕಳೆದ ಬಾರಿಗಿಂತ ಪಂಜಾಬ್ ನಲ್ಲಿ ಬಿಜೆಪಿ ಸೀಟು ಅಧಿಕವಾಗಿದೆ. ಉಳಿದ ನಾಲ್ಕು ಕಡೆ ನಿರೀಕ್ಷೆ ಯಂತೆ ಫಲಿತಾಂಶ ಬರುತ್ತಿದೆ ಎಂದರು. 


ಇದನ್ನೂ ಓದಿ : ಪಂಚರಾಜ್ಯಗಳ ಚುನಾವಣೆ: ಪಂಜಾಬ್ ನಲ್ಲೂ ಸಿದ್ದು-ಕರ್ನಾಟಕದಲ್ಲೂ ಸಿದ್ದು; ಕಾಂಗ್ರೆಸ್ ನಾಶ!: ಶೆಟ್ಟರ್


ಯುಪಿಯಲ್ಲಿ ಯೋಗಿ(Yogi Adityanath) ಗೂಂಡಾ ರಾಜ್ಯವನ್ನು ಜನಸಾಮಾನ್ಯರ ರಾಜ್ಯವಾಗಿ ಪರಿವರ್ತನೆ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯೂ ಆಗಿದೆ. ಉತ್ತರ ಪ್ರದೇಶದಲ್ಲಿ ರಸ್ತೆಗಳು ಮೂಲಸೌಕರ್ಯಗಳ ಅಭಿವೃದ್ಧಿಯಾಗಿದೆ. ಈ ಚುನಾವಣಾ ಫಲಿತಾಂಶ ಕರ್ನಾಟಕ ಚುನಾವಣೆ ಮೇಲೂ ಪರಿಣಾಮ ಬೀರಲಿದೆ. ಕರ್ನಾಟಕದಲ್ಲಿ ಮೂರು ಮುಖ್ಯಮಂತ್ರಿ ಗಳನ್ನು ಬದಲಾವಣೆ ಮಾಡಿದರೂ ಬಿಜೆಪಿ ಕರ್ನಾಟಕದಲ್ಲಿ ಅತೀ ದೊಡ್ಡ ಪಾರ್ಟಿ. ಉತ್ತರಾಖಾಂಡ್ ನಲ್ಲಿ ಮೂರು ಮುಖ್ಯಮಂತ್ರಿ ಬಗ್ಗೆ ಅಪಪ್ರಚಾರ ಮಾಡಿದರು. ಆದರೆ ಈಗ ಉತ್ತರಾಖಾಂಡ್ ಫಲಿತಾಂಶ ಏನಾಗಿದೆ. ಬಿಜೆಪಿಗೆ ಬೇರೆ ಬೇರೆ ಪಾರ್ಟಿಗಳಿಂದ ಜನ ಬರುತ್ತಿದ್ದಾರೆ ಎಂದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.