ಬೆಂಗಳೂರು: ನಾಲ್ಕನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್ ಯಡಿಯೂರಪ್ಪ ಈಗ ನೂತನ ಸರ್ಕಾರದ ಆಡಳಿತಕ್ಕಾಗಿ ನಾಲ್ಕು ಸೂತ್ರಗಳನ್ನು ಮುಂದಿಟ್ಟಿದ್ದಾರೆ.



COMMERCIAL BREAK
SCROLL TO CONTINUE READING

14 ತಿಂಗಳ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾದ ಹಿನ್ನಲೆಯಲ್ಲಿ ಈಗ ಅಧಿಕಾರದ ಚುಕ್ಕಾನೆ ಹಿಡಿದಿರುವ ಯಡಿಯೂರಪ್ಪ ಅವರಿಗೆ ಬರೋಬ್ಬರಿ ನಾಲ್ಕನೇ ಬಾರಿ ಸಿಎಂ ಪದವಿ ಹುದ್ದೆಯ ಅವಕಾಶ ದೊರೆತಿದೆ. ಮುಖ್ಯಮಂತ್ರಿಯಾಗಿ  ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಯಡಿಯೂರಪ್ಪ ಜೆಪಿ ನಡ್ದಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.



 ಇನ್ನು ಹೆಚ್ಚು ಕಡಿಮೆ ನಾಲ್ಕು ವರ್ಷಗಳ ಕಾಲ ಈ ವಿಧಾನಸಭೆಯ ಕಾಲಾವಧಿ ಇರುವ ಹಿನ್ನಲೆಯಲ್ಲಿ ಮತ್ತೊಮ್ಮೆ ನೂತನ ಸರ್ಕಾರ ಸಾಗಬೇಕಾಗಿರುವ ಕುರಿತಾಗಿ ನಾಲ್ಕು ಅಂಶಗಳನ್ನು ಅವರು ಮುಂದಿಟ್ಟಿದ್ದಾರೆ.' ನನ್ನ ಮೇಲಿಟ್ಟಿರುವ ನಂಬಿಕೆ ಅಭೂಪೂರ್ವವಾದದ್ದು. ಬೆಳವವಣಿಗೆ, ಸಮೃದ್ಧಿ, ಒಳಗೊಳ್ಳುವಿಕೆ ಮತ್ತು ಅಭಿವೃದ್ದಿ ಇವುಗಳನ್ನು ಆಡಳಿತದ ಆಧಾರ ಸ್ಥಂಭವಾಗಿಟ್ಟುಕೊಂಡು ಕರ್ನಾಟಕದ ಜನರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತೇನೆ. ನನ್ನ ಎಲ್ಲ ಶಾಸಕರಿಗೆ ಹಾಗೂ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ನಿರಂತರ ಶ್ರಮ ಹಾಗೂ ತಮ್ಮ ಸಮರ್ಪಿಸಿಕೊಂಡಿರುವುದಕ್ಕೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ' ಎಂದು ಅವರು ಟ್ವೀಟ್ ಮಾಡಿದ್ದಾರೆ. 



ಈ ಹಿಂದೆ ಅವರು 2007 ರಲ್ಲಿ ಏಳು ದಿನಗಳ ಕಾಲ, 2008 ರಲ್ಲಿ ಮೂರು ವರ್ಷಗಳ ಕಾಲ, ಹಾಗೂ 2018 ರಲ್ಲಿ ಕೇವಲ ಮೂರು ದಿನಗಳ ಅವಧಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.