ಬೆಂಗಳೂರು : ರೈತರ ಹೆಸರಿನಲ್ಲಿ ನಕಲಿ ಖಾತೆ (fake accounts) ತೆರೆದು ಕಿಸಾನ್ ಸಮ್ಮಾನ್ (Kissan Samman Yojna) ಯೋಜನೆಯಲ್ಲಿ ಅಕ್ರಮ ನಡೆಸಿರುವುದನ್ನು ರಾಜ್ಯ ಕೃಷಿ ಇಲಾಖೆ ಪತ್ತೆ ಹಚ್ಚಿದೆ. ಕಿಸಾನ್ ಸಮ್ಮಾನ್ (Kisan Samman) ಯೋಜನೆಯ ಲಾಭ ಪಡೆಯಲು ವಂಚಕರು ಹೂಡಿರುವ ಜಾಲ ಇದೀಗ ಬಹಿರಂಗವಾಗಿದೆ. ಹೊರರಾಜ್ಯದ ಖದೀಮರು ಈ ಯೋಜನೆಯ ದುಡ್ಡು ಲಪಟಾಯಿಸಲು ಮಾಡಿರುವ ಸಂಚು ಕೃಷಿ ಇಲಾಖೆಗೆ ಗೊತ್ತಾಗಿದೆ.


COMMERCIAL BREAK
SCROLL TO CONTINUE READING

ಅಕ್ರಮ ಗೊತ್ತಾಗಿದ್ದು ಹೇಗೆ..?
ಚಿತ್ರದುರ್ಗ, ಬೀದರ್ ವ್ಯಾಪ್ತಿಯಲ್ಲಿ ರುಬಿಯಾ ಖಾತುನ್ ಎಂಬ ಹೆಸರಿನಲ್ಲಿ ಖಾತೆ ತೆರೆದು, ಕಿಸಾನ್ ಸಮ್ಮಾನ್ (Kisan Samman) ದುಡ್ಡಿಗಾಗಿ ಹಲವಾರು ಸಲ ಹಣಕ್ಕಾಗಿ ಕೃಷಿ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿತ್ತು. ಈ ಅಸಹಜ ವರ್ತನೆ ಬಗ್ಗೆ ಕೃಷಿ (Agriculture) ಇಲಾಖೆ ಅಧಿಕಾರಿಗಳಿಗೆ ಅನುಮಾನ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಖಾತೆ ಪರಿಶೀಲಿಸಿದಾಗ ಹೊರ ರಾಜ್ಯದ ಬ್ಯಾಂಕ್ (bank) ಖಾತೆ ಪತ್ತೆಯಾಗಿದೆ.  ಪಶ್ಚಿಮ ಬಂಗಾಳದ ದಿನಾಜ್ಪುಗರದ ಖಾತೆ, IFSC code, ಬಿಹಾರದ ಪೂರ್ನಿಯಾದ ಖಾತೆ, ಐಎಫ್ ಎಸ್ ಸಿ ಕೋಡ್ ಪತ್ತೆಯಾಗಿದೆ. 


ಇದನ್ನೂ ಓದಿ : BPL Card: 'ಮನೆಯಲ್ಲಿ ಬೈಕ್‌, ಟಿ.ವಿ ಇದ್ದರೆ ಬಿಪಿಎಲ್‌ ಕಾರ್ಡ್‌ ರದ್ದು'


85 ಸಾವಿರ ಶಂಕಿತ ಖಾತೆಗಳು ಬ್ಲಾಕ್.!
ಕೃಷಿ ಅಧಿಕಾರಿಗಳು ಈ ವಂಚನೆಯನ್ನು ಮತ್ತಷ್ಟು ಕೆದಕಿದಾಗ ಗಾಬರಿಗೊಳಿಸುವ ಮಾಹಿತಿಗಳು ಮೇಲ್ನೋಟಕ್ಕೆ ಲಭ್ಯವಾಗಿವೆ. ಇದೇ ರೀತಿಯ ವಂಚನೆ, ಒಂದಲ್ಲ ಎರಡಲ್ಲ ಸರಿಸುಮಾರು 85 ಸಾವಿರ ಖಾತೆಗಳಲ್ಲಿ ಮಾಡಿರಬಹುದು ಎಂಬ ಅನುಮಾನ ಬಲವಾಗಿದೆ. ಈ ಬಗ್ಗೆ ಬೆಂಗಳೂರಿನ ಸೈಬರ್ ಠಾಣೆಗೆ  (Cyber Cell)  ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿಯೇ 85 ಸಾವಿರ ಅನುಮಾನಾಸ್ಪದ ಖಾತೆಗಳನ್ನು ಸಂಪೂರ್ಣ ಬ್ಲಾಕ್ ಮಾಡಲಾಗಿದೆ. ಅಕ್ರಮಗಳು ಹೆಚ್ಚಾಗಿ ಬಿಹಾರ, ಉತ್ತರಪ್ರದೇಶ ಮತ್ತು ಪಶ್ಚಿಮಬಂಗಾಳ ಮೂಲದಿಂದಲೇ ನಡೆದಿದೆ. ಸದ್ಯ ಪ್ರಕರಣ ತನಿಖಾ ಹಂತದಲ್ಲಿದೆ. 


ಏನಿದು ಕಿಸಾನ್ ಸಮ್ಮಾನ್ ?
ಕಿಸಾನ್ ಸಮ್ಮಾನ್ ನಿಧಿ, ಇದು ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಇದರಡಿ ಸರ್ಕಾರ ಅರ್ಹ ರೈತರ (Farmers) ಖಾತೆಗೆ ವರ್ಷಕ್ಕೆ 6000 ರೂಪಾಯಿ ನೆರವು ವರ್ಗಾಯಿಸುತ್ತದೆ. ಇದು ಅರ್ಹ ಬಡ ರೈತರನ್ನು ತಲುಪುತ್ತಿದೆ. ಈಗ ನಕಲಿ ಖಾತೆ (Fake account) ಸೃಷ್ಟಿಸಿ ಈ ಯೋಜನೆಯ ದುಡ್ಡು  ಹೊಡೆಯಲು ವಂಚಕರು ಪ್ಲಾನ್ ಮಾಡಿದ್ದಾರೆ.


ಇದನ್ನೂ ಓದಿ : Ration Card: ರಾಜ್ಯದ 'ಪಡಿತರ ಚೀಟಿದಾರ'ರಿಗೆ ಸರ್ಕಾರದಿಂದ ಬಿಗ್ ಶಾಕ್..! 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.