ಬೆಂಗಳೂರು: "ಸರ್ಕಾರಿ ಶಾಲಾ-ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗಷ್ಟೇ ಉಚಿತ ಬಸ್ ಪಾಸ್ ನೀಡುವ ಚಿಂತನೆ ನಡೆದಿದೆ" ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

'ಸಾವಿರಾರು ರೂ. ಶುಲ್ಕ ಕೊಟ್ಟು ವ್ಯಾಸಂಗ ಮಾಡುವವರಿಗೆ ಉಚಿತ ಬಸ್‌ ಪಾಸ್‌ ಅಗತ್ಯವಿಲ್ಲ'. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ ಪಾಸ್‌ ನೀಡುವ ಚಿಂತನೆ ಸರ್ಕಾರದ ಮುಂದಿದೆ ಎಂದು ಸೋಮವಾರ ಚನ್ನಪಟ್ಟಣದಲ್ಲಿ ಸಿಎಂ ತಿಳಿಸಿದರು.


ಹಿಂದಿನ ಸರ್ಕಾರದ ಘೋಷಣೆಯಂತೆ ಉಚಿತ ಪಾಸ್ ನೀಡಬೇಕಾದರೆ ಸರ್ಕಾರಕ್ಕೆ 900 ಕೋಟಿ ರೂ. ಹೊರೆ ಬೀಳಲಿದೆ. ಜು.24ರಂದು ಅಧಿಕಾರಿಗಳ ಸಭೆಯಲ್ಲಿ ರ್ಚಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಬಿಜೆಪಿಯವರು ಎಬಿವಿಪಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಬೇಡ. ನನಗೂ ರಾಜಕೀಯ ಚೆನ್ನಾಗಿ ತಿಳಿದಿದೆ ಎಂದ ಕುಮಾರಸ್ವಾಮಿ, 50 ಸಾವಿರದಿಂದ ಲಕ್ಷ ರೂಪಾಯಿವರೆಗೆ ಡೊನೇಷನ್ ಕೊಟ್ಟು ಖಾಸಗಿ ಶಾಲೆಗೆ ಸೇರಿರುವ ಮಕ್ಕಳಿಗೆ ಉಚಿತ ಪಾಸ್ ಏಕೆ ಬೇಕು ಎಂದು ಪ್ರಶ್ನಿಸಿದರು.