ಯುಗಾದಿ ಶಾಪಿಂಗ್ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ ಬೆಂಗಳೂರು ಉತ್ಸವ
ಯುಗಾದಿ ಹಬ್ಬದ ಪ್ರಯುಕ್ತ ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ‘ಬೆಂಗಳೂರು ಉತ್ಸವವನ್ನು’ ಅದ್ಧೂರಿಯಾಗಿ ಆಯೋಜಿಸಿದೆ. ಮಾರ್ಚ್ 10 ರಿಂದ ಮಾರ್ಚ್ 19ರವರೆಗೆ 10 ದಿನಗಳ ಕಾಲ ಈ ಉತ್ಸವ ನಡೆಯಲಿದೆ.
ಬೆಂಗಳೂರು : ಯುಗಾದಿ ಹಬ್ಬದ ಪ್ರಯುಕ್ತ ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ‘ಬೆಂಗಳೂರು ಉತ್ಸವವನ್ನು’ ಅದ್ಧೂರಿಯಾಗಿ ಆಯೋಜಿಸಿದೆ. ಮಾರ್ಚ್ 10 ರಿಂದ ಮಾರ್ಚ್ 19ರವರೆಗೆ 10 ದಿನಗಳ ಕಾಲ ಈ ಉತ್ಸವ ನಡೆಯಲಿದೆ. ಈ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ನಟಿಯರಾದ ಸುಷ್ಮಾ ಶೆಟ್ಟಿ ಹಾಗೂ ಭೂಮಿ ಶೆಟ್ಟಿ ಶುಕ್ರವಾರ ಚಾಲನೆ ನೀಡಿದ್ದಾರೆ.
ಶಾಪಿಂಗ್ ಪ್ರಿಯರು ಚಿತ್ರಕಲಾ ಪರಿಷತ್ ನಲ್ಲಿ ನಡೆಯಲಿರುವ ಬೆಂಗಳೂರು ಉತ್ಸವಕ್ಕೆ ಭೇಟಿ ನೀಡಿದರೆ ವೈವಿಧ್ಯಮಯ ಉಡುಪು, ಆಭರಣ, ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡಬಹುದು. ಇಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಇಲ್ಲಿ ತೆರೆಯಲಾಗಿದೆ. ಒಂದೇ ಸೂರಿನಡಿ ನಿಮಗೆ ಬೇಕು ಎನಿಸುವ ವಸ್ತುಗಳನ್ನು ಖರೀದಿಸುವುದು ಕೂಡಾ ಸಾಧ್ಯವಾಗುತ್ತದೆ. ದೇಶದ ವಿವಿಧ ಭಾಗಗಳ ಕರಕುಶಲಕರ್ಮಿಗಳು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಎಲ್ಲವೂ ಇಲ್ಲಿ ಲಭ್ಯವಿದೆ.
ಇದನ್ನೂ ಓದಿ : ಕಾರ್ಮಿಕರ ಮುಷ್ಕರ: ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗಳು ಸ್ಥಗಿತ
ಭಾರತದ ಮೂಲೆ ಮೂಲೆಗಳಿಂದ ಬಂದಿರುವ ಕರಕುಶಲ ಕರ್ಮಿಗಳ ಅಂಗಡಿ ಇಲ್ಲಿದೆ. ನಾನಾ ರೀತಿಯ ಬಟ್ಟೆ, ಕರಕುಶಲ ವಸ್ತುಗಳು, ಬೆಡ್‌ಶೀಟ್ ಸೇರಿದಂತೆ ದಿನಬಳಕೆಯ ಎಲ್ಲ ವಸ್ತುಗಳು ಇಲ್ಲಿ ಲಭ್ಯವಿದೆ.
ʼಚಿತ್ರಕಲಾ ಪರಿಷತ್‌ನಲ್ಲಿ ನಡೆಯುತ್ತಿರುವ ಈ ʼಬೆಂಗಳೂರು ಉತ್ಸವʼ ನನ್ನ ಮೆಚ್ಚಿನ ಹಬ್ಬ ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಭೂಮಿ ಶೆಟ್ಟಿ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಸುಷ್ಮಾ ಶೆಟ್ಟಿ ʼನಿತ್ಯದ ಲೈಫ್‌ಸ್ಟೈಲ್‌ಗೆ ಅಗತ್ಯವಾಗಿರುವ ಎಲ್ಲ ಬಗೆಯ ವಸ್ತುಗಳನ್ನು ಹೊಂದಿದ ಈ ಮೇಳ ತುಂಬಾ ಚೆನ್ನಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ : ಶಾಸಕ ಮಾಡಳ್ ವಿರೂಪಾಕ್ಷಪ್ಪ ಪುತ್ರನ ವಿರುದ್ಧ ಮತ್ತೆ ಎರಡು ಎಪ್ಐಆರ್ ದಾಖಲಿಸಿದ ಲೋಕಾಯುಕ್ತ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.