ನವದೆಹಲಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಇದೆ ಮೊದಲ ಬಾರಿಗೆ ಸದನದಲ್ಲಿ ಭಾಷಣ ಮಾಡುವ ಮೂಲಕ ಪ್ರಿಯಾಂಕಾ ಜಾರಕಿಹೊಳಿ ಗಮನ ಸೆಳೆದರು.


COMMERCIAL BREAK
SCROLL TO CONTINUE READING

ಸಂಸದೆಯಾಗಿ ಸದನದಲ್ಲಿ ಪ್ರಿಯಾಂಕಾ ಜಾರಕಿಹೊಳಿ ಮಾಡಿದ ಭಾಷಣದ ಮುಖ್ಯಾಂಶಗಳು:


ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ವಾದಿಸಿದ್ದ ಚಿಕ್ಕೋಡಿ  ಕ್ಷೇತ್ರದಿಂದ ಈ ಸದನವನ್ನು ಪ್ರವೇಶಿಸಿದ್ದಕ್ಕೆ ನಾನು ಹೆಮ್ಮೆ ಪಡುತ್ತಿದ್ದು, ಈ ಅವಕಾಶವನ್ನು ನೀಡಿದ ಚಿಕ್ಕೋಡಿಯ ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ 


ಒಂದು ದೇಶದ ಪ್ರಗತಿಯನ್ನು ಆ ದೇಶದ ಶಿಕ್ಷಣದ ಗುಣಮಟ್ಟದಿಂದ ಅಳೆಯಬೇಕು ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಆ ಹಿನ್ನೆಲೆಯಲ್ಲಿ ನಾನು ಕೆಲವು ವಿಷಯಗಳನ್ನು ಸದನದ ಮುಂದೆ ಇಡುತ್ತಿದ್ದೇನೆ. ನಮ್ಮ ದೇಶದಲ್ಲಿ ಶಿಕ್ಷಣ ಮಟ್ಟ ಕುಸಿಯುತ್ತಿದೆ. ಇದು ಈ ದೇಶದ ಮುಂದೆ ಇರುವ ಅನೇಕ  ಸವಾಲುಗಳಲ್ಲಿ ಒಂದು. ಇದಕ್ಕೆ ಅನೇಕ ಕಾರಣಗಳು ಇವೆ. ಇವುಗಳಲ್ಲಿ ಕೆಲವು - ಕೇಂದ್ರ ಸರಕಾರ ತನ್ನ ವಾರ್ಷಿಕ ಆಯವ್ಯಯದಲ್ಲಿ ಶಿಕ್ಷಣಕ್ಕೆ ನೀಡುವ ಅನುದಾನ ವರ್ಷದಿಂದ ವರ್ಷಕ್ಕೆ ಕಮ್ಮಿಯಾಗುತ್ತಿರುವ ಕುರಿತು ಸದನದ ಗಮನಕ್ಕೆ ತರಲಾಯಿತು.


ಇದನ್ನೂ ಓದಿ: ಸಿಎಂಗೆ ನೀಡಿರುವ ಶೋಕಾಸ್ ನೋಟೀಸ್ ಹಿಂಪಡೆಯುವಂತೆ ಸಚಿವ ಸಂಪುಟದಿಂದ ರಾಜ್ಯಪಾಲರಿಗೆ ಸಲಹೆ: ಡಿಸಿಎಂ ಡಿಕೆ ಶಿವಕುಮಾರ್


ಉದಾಹರಣೆಗೆ ಕಳೆದ ವರ್ಷದ ಅನುದಾನ ಹಾಗೂ ಈ ವರ್ಷದ ಪರಿಷ್ಕೃತ ಅಂದಾಜು ಪಟ್ಟಿಗೆ ಹೋಲಿಸಿದರೆ, ಕೇಂದ್ರೀಯ ವಿಶ್ವ ವಿದ್ಯಾಲಯ ಅನುದಾನ ಆಯೋಗಕ್ಕೆ ನೀಡುವ ಅನುದಾನ ಶೇ. 53 ಕ್ಕಿಂತ ಕಮ್ಮಿಯಾಗಿದೆ. ಇದರಿಂದ ಸರ್ಕಾರಿ ಸಂಸ್ಥೆ ಗಳ ಮೇಲೆ ಅವಲಂಬನ ಆಗಿರುವ ಬಡವರ ಬದುಕು ದುರ್ಬರ ವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಖಾಸಗಿಕರಣ ನಡೆಯುತ್ತಿದೆ. ಇದರಿಂದ ಬಡವರು, ಪರಿಶಿಷ್ಟ ಜಾತಿ ಮತ್ತು ವರ್ಗ, ಗ್ರಾಮೀಣ ಪ್ರದೇಶದ ಯುವಕ, ಯುವತಿಯರು ಹಾಗೂ ಹಿಂದುಳಿದ, ಅವಕಾಶ ವಂಚಿತ ಜಾತಿಯ ಯುವಕರಿಗೆ ಅನ್ಯಾಯ ವಾಗುತ್ತಿದೆ. ಇದಕ್ಕೆ ಪರಿಹಾರ ಏನು ? ಎಂದು ನಾನು ನಿಮ್ಮ ಮೂಲಕ ಕೇಂದ್ರ ಶಿಕ್ಷಣ ಸಚಿವರನ್ನು ಕೇಳಲು ಬಯಸುತ್ತೇನೆ ಎಂದು ಹೇಳಿದರು.



ಇನ್ನು ಕಳೆದ ಕೆಲ ವರ್ಷಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆ ಗಳಲ್ಲಿ ವಿದ್ಯಾರ್ಥಿ ಗಳ ಸೇರ್ಪಡೆ ಹಾಗೂ ಉದ್ಯೋಗಕ್ಕಾಗಿ ನಡೆಸುವ ಪರೀಕ್ಷೆ ಗಳಲ್ಲಿ ಅನೇಕ ಅವ್ಯವಹಾರ ನಡೆದು, ಯುವ ಜನರ ಭವಿಷ್ಯ ಡೋಲಾಯಮಾನವಾಗಿದೆ. 15 ರಾಜ್ಯ ಗಳಲ್ಲಿ ನೀಟ ಹಾಗೂ ಇತರ ಪರೀಕ್ಷೆ ಗಳು ಸರಿಯಾಗಿ ನಡೆದಿಲ್ಲ. ಅದರಲ್ಲಿ ಅನೇಕ ತಪ್ಪುಗಳು ನಡೆದಿವೆ.ಯುವ ಜನರು ವ್ಯವಸ್ಥೆ ಯನ್ನು ನಂಬಬಾರದು ಎನ್ನುವಂತೆ ಆಗಿದೆ.ಇದಕ್ಕೆ ಪರಿಹಾರ ಏನು ಎಂದು ನಾನು ನಿಮ್ಮ ಮೂಲಕ ಕೇಂದ್ರ ಶಿಕ್ಷಣ ಸಚಿವ ರನ್ನು ಕೇಳಲು ಬಯಸುತ್ತೇನೆ. ಇನ್ನು ನನ್ನ ಜಿಲ್ಲೆಯ ಗೋಕಾಕ ಹಾಗೂ ಅಥಣಿ ಗಳಿಗೆ ಹೊಸ ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡುವಂತೆ ನಾವು ಕೇಂದ್ರವನ್ನು ಕೇಳಿಕೊಂಡಿದ್ದೇವೆ. ಆದರೆ ಕೇಂದ್ರದಿಂದ ಉತ್ತರ ದೊರೆತಿಲ್ಲ. ಅವುಗಳನ್ನು ಬೇಗ ಆರಂಭ ಮಾಡುವಂತೆ ನಾನು ನಿಮ್ಮ ಮೂಲಕ ಕೇಂದ್ರ ಶಿಕ್ಷಣ ಸಚಿವರನ್ನು ಕೇಳಲು ಬಯಸುತ್ತೇನೆ ಎಂದರು.


ಇದನ್ನೂ ಓದಿ: ಎಸ್‌ʼಸಿ ಸಮುದಾಯಗಳಿಗೆ ಒಳಮೀಸಲಾತಿ ನೀಡಲು ಸುಪ್ರೀಂ ಆದೇಶ; ನಮ್ಮ ಸರ್ಕಾರದ ನಿರ್ಣಯಕ್ಕೆ ಸಿಕ್ಕ ಜಯ ಎಂದ ಬೊಮ್ಮಾಯಿ


ಮಾನ್ಯರೇ, ನನ್ನ ಕ್ಷೇತ್ರ ದಲ್ಲಿ ಪ್ರವಾಹ ಬಂದಿದೆ.ಅನೇಕ ಶಾಲೆ ಕಟ್ಟಡ ಗಳು ಬಿದ್ದು ಹೋಗಿವೆ ಅಥವಾ ಶಿಥಿಲ ಅವಸ್ಥೆ ಗೆ ಬಂದಿವೆ. ಇವನ್ನೂ ಮರು ನಿರ್ಮಾಣ ಮಾಡಲು ಕೇಂದ್ರ ಪ್ರತಿ ಶಾಲೆಗೆ ರು. 2 ಲಕ್ಷ ಧನ ಸಹಾಯ ಮಾಡುತ್ತದೆ. ಆದರೆ ನನ್ನ ಕ್ಷೇತ್ರಕ್ಕೆ ಈ ಹಣ ಬಂದಿಲ್ಲ. ಆದಷ್ಟು ಬೇಗ ಅದನ್ನು ಬಿಡುಗಡೆ ಮಾಡಬೇಕು. ಅಲ್ಲದೆ, ಈ ಧನ ರಾಶಿ ಯನ್ನು ಹೆಚ್ಚು ಮಾಡಿ ಎಂದು ನಾನು ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.