ಕೊಪ್ಪಳ : ನಡೆದಾಡೋ ದೇವರು ಸಿದ್ಧೇಶ್ವರ ಶ್ರೀಗಳ ಅಗಲಿಕೆ ಹಿನ್ನಲೆಯಲ್ಲಿ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಸಂತಾಪ ಸೂಚಕ ಪತ್ರ ಬರೆದಿದ್ದಾರೆ.


COMMERCIAL BREAK
SCROLL TO CONTINUE READING

ಪತ್ರದಲ್ಲಿ ಗವಿಸಿದ್ದೇಶ್ವರ ಶ್ರೀಗಳು, ಯಾವುದೇ ಪಂಥಗಳಿಲ್ಲದ ಗ್ರಂಥಕ್ಕೆ ಅಂಟಿಕೊಳ್ಳದ ಜನರ ಹೃದಯ ಗ್ರಂಥಿಗಳಲ್ಲಿ ಉಳಿದ ಸಂತ-ವಸಂತ, ಮಾಯ ಮುಟ್ಟದ ಕಾಯ ಭ್ರಮೆಯಿಲ್ಲದ ಭಾವ ಲೋಕಾಂತವನ್ನ ಪ್ರೀತಿಸಿ ತಾವು ಏಕಾಂತವಾಗಿ ಉಳಿದವರು ಎಂದು ಸಿದ್ದೇಶ್ವರ ಶ್ರೀಗಳ ಬಗ್ಗೆ ಅದ್ಬುತ ಸಾಲುಗಳನ್ನ ಬರೆದಿದ್ದಾರೆ.


ಇದನ್ನೂ ಓದಿ : Siddheshwar swamiji Death : ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ಕಲಾವಿದನಿಂದ ವಿಶೇಷ ಗೌರವ ಶ್ರದ್ಧಾಂಜಲಿ!


ಸಿದ್ದೇಶ್ವರ ಅಪ್ಪಾಜಿಯವರ ದೇಹ ನಮ್ಮ ಕಣ್ಣಿನಿಂದ ಈ ಮಣ್ಣನಿಂದ ದೂರ ಆಗಿರಬಹುದು. ಆದ್ರೆ ಅವರು ಈ ನಾಡಿನ ಜನರ ಅಂತರಗಂದಲ್ಲಿ ಹಚ್ಚಿದ ದೀಪ ಎಂದ ಆರದ ದೀಪವಾಗಿದ್ದರೆ. 


ನಾವು ವರ್ಷಕೊಮ್ಮೆ ಲಕ್ಷ ದೀಪೋತ್ಸವ ಮಾಡ್ತೆವೆ. ಅವರ ಪ್ರತಿದಿನವೂ ಲಕ್ಷ ಲಕ್ಷ ಜನರಿಗೆ ಜ್ಞಾನದ ಆರತಿ ಮಾಡುತ್ತಿದ್ದರು. ಜಗದ ಜಾತ್ರೆಗೆ ದೇವರು ನಮಗೆ ಆಮಂತ್ರಣ ನೀಡಿದ್ದ ಎನ್ನುತ್ತಿದ್ದರು. ಹಲವು ಭಾರಿ ಗವಿಮಠಕ್ಕೂ ಭೇಟಿ ನೀಡಿದ್ದರು ಎಂದು ಸಿದ್ದೇಶ್ವರ ಶ್ರೀಗಳ ಒಡನಾಟವನ್ನ ಗವಿಸಿದ್ದೇಶ್ವರ ಶ್ರೀಗಳು ಮೆಲುಕು ಹಾಕಿದ್ದಾರೆ.


ಇದನ್ನೂ ಓದಿ : ಶಾಂತಿ ಸುವ್ಯವಸ್ಥೆಯಿಂದ ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ಯಾತ್ರೆ ಮಾಡೋಣ : ಸಿಎಂ ಬೊಮ್ಮಾಯಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.