ಗುಲ್ಬರ್ಗಾ: ಗುಲ್ಬರ್ಗಾ ವಿದ್ಯುತ್ ಪೂರೈಕೆ ಕಂಪನಿ (ಜೆಸ್ಕಾಂ)ನಲ್ಲಿ 205 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಫೆ. 27ರಂದು ಈ ಸಂಬಂಧ ನೋಟಿಫಿಕೇಶನ್ ಹೊರಡಿಸಲಾಗಿದೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಇದು Online ಪ್ರಕ್ರಿಯೆ ಅಲ್ಲ. ಹಾಗಾಗಿ ಅಭ್ಯರ್ಥಿಗಳು ಸಾಮಾನ್ಯ ಲಕೋಟೆಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ವಿವರಗಳು ಹೀಗಿವೆ:
1. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್18, 2021. 
2. ವಯೋಮಿತಿ: (ಫೆ.26, 2021ಕ್ಕೆ ಅನ್ವಯವಾಗುವಂತೆ)ಕನಿಷ್ಠ ವಯೋಮಿತಿ : 16 ವರ್ಷ, ಗರಿಷ್ಠ ವಯೋಮಿತಿ 25 ವರ್ಷ
3. ವಿದ್ಯಾರ್ಹತೆ : SSLC ಪಾಸ್ ಮತ್ತು ತತ್ಸಮಾನ ಐಟಿಐ ಸರ್ಟಿಫಿಕೇಟ್


 ಇದನ್ನೂ ಓದಿ : JOBS: ಮೌಲಾನಾ ಆಜಾದ್ ಆಂಗ್ಲ ಮಾದರಿ ಶಾಲೆ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ


ಇತರ ಅರ್ಹತೆಗಳು :
1. ಕನ್ನಡ (Kannada)ಓದಲು, ಬರೆಯಲು ಗೊತ್ತಿರಬೇಕು
2. ಕನ್ನಡಿಗರಿಗೆ ಮೊದಲ ಆದ್ಯತೆ
3. ದೃಢಕಾಯರಾಗಿರಬೇಕು


ಅರ್ಜಿಸಲ್ಲಿಸುವ ವಿಧಾನ:
ಆಸಕ್ತ ಆಭ್ಯರ್ಥಿಗಳು gescom.karnataka.gov.inಈ websiteಗೆ ವಿಸಿಟ್ ಕೊಟ್ಟು ಅರ್ಜಿ ಫಾರಂ download ಮಾಡಿ. ಪೂರ್ಣ ವಿವರ ಇರುವ ಅರ್ಜಿಯನ್ನು ಎಲ್ಲಾ ದಾಖಲೆಯೊಂದಿಗೆ ``ಪ್ರಧಾನ ವ್ಯವಸ್ಥಾಪಕರು, (ಆ ಮತ್ತು ಮಾಸಂಅ), ನಿಗಮ ಕಚೇರಿ, ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಕಲಬುರಗಿ'' ಇವರಿಗೆ ಸಲ್ಲಿಸಬೇಕು. ಲಕೋಟೆ ಮೇಲೆ 2021-22ನೇ ಸಾಲಿನ ಶಿಶಿಕ್ಷು ಆಯ್ಕೆಗೆ ಅರ್ಜಿ ಎಂದು ಸ್ಪಷ್ಟವಾಗಿ ಬರೆದಿರಬೇಕು. 


 ಇದನ್ನೂ ಓದಿ : NHM MP Recruitment 2021: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ


ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು :
1. ಎಸ್ ಎಸ್ ಎಲ್ ಸಿ ಅಂಕಪಟ್ಟಿ
2. ವರ್ಗಾವಣೆ ಪ್ರಮಾಣಪತ್ರ
3. ಐಟಿಐ (ITI) ಪ್ರಮಾಣಪತ್ರ
4. ಜಾತಿ ಪ್ರಮಾಣಪತ್ರ (cast certificate)
5. ವೈದ್ಯಕೀಯ ಯೋಗ್ಯತಾ ಪತ್ರ
6. ಗಣ್ಯ ವ್ಯಕ್ತಿಗಳಿಂದ ಪಡೆದ ನಡತೆ ಪ್ರಮಾಣ ಪತ್ರ
6. ಎರಡು ಭಾವಚಿತ್ರ
7. ಸ್ವವಿಳಾಸ ಇರುವ 4X9 ಇಂಚು ಅಳತೆಯ ಒಂದು ಲಕೋಟೆ
ಎಲ್ಲಾ ದಾಖಲೆಗಳು ಗಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟಿರಬೇಕು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.