ಇಂದಿನಿಂದ ಚಾಲನೆಗೊಳ್ಳಲಿರುವ ಬಿಜೆಪಿ ಪರಿವರ್ತನಾ ಯಾತ್ರೆಗೆ ಬಿಜೆಪಿಯ ಘಟಾನು ಘಟಿ ನಾಯಕರು ಹಾಜರಾಗಲಿದ್ದಾರೆ.


COMMERCIAL BREAK
SCROLL TO CONTINUE READING

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ಪ್ರ ಷಾರಿಂದ ಉದ್ಘಾಟನೆಗೊಳ್ಳಲಿರುವ ಯಾತ್ರೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಜೊತೆ ಪ್ರತಿ ವಾರ ಪ್ರತಿಯೊಬ್ಬ ನಾಯಕರೂ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. 


ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಪರಿವರ್ತನ ಯಾತ್ರೆಗೆ ಹಾಜರಾಗುವ ಸಾಧ್ಯತೆ ಇದೇ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಲ್ಲಿ ಯೋಗಿ ಭಾಗಿಯಾಗಲಿದ್ದಾರೆ.


ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಗೆಲ್ಹೋಟ್, ಸುಷ್ಮಾ ಸ್ವರಾಜ್, ಉಮಾ ಭಾರತಿ, ರಾಮ್ ವಿಲಾಸ್ ಪಾಸ್ವಾನ್, ರವಿಶಂಕರ್ ಪ್ರಸಾದ್, ನರೇಂದ್ರ ಸಿಂಗ್ ಥೋಮರ್, ರಾಧಾ ಮೋಹನ್ ಸಿಂಗ್, ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್, ಸುದರ್ಶನ್ ಭಗತ್  ಜೊತೆಗೆ ರಾಜ್ಯ ಚುನಾವಣೆ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಸಹ ಉಸ್ತುವಾರಿ ಪಿಯುಶ್ ಗೋಯೆಲ್, ಕೇಂದ್ರ ಸಚಿವರಾದ ಸದಾನಂದಗೌಡ, ಅನಂತ್ ಕುಮಾರ್, ರಮೇಶ್ ಜಿಗಜಿಣಗಿ ಕೂಡ ಪರಿವರ್ತನಾ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. 


ಬಿಜೆಪಿಯ ಈ ಪರಿವರ್ತನಾ ಯಾತ್ರೆ ಹಾಗೂ ಘಟಾನು ಘಟಿ ನಾಯಕರ ಪ್ರಭಾವ ಮಿಶನ್ 150 ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.