ಬೆಂಗಳೂರು: ಆಕ್ಸ್‌ಫರ್ಡ್‌ ಡಿಬೇಟ ಕ್ಲಬ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಎಂಬ ಹೆಗ್ಗಳಿಕೆ ಪಾತ್ರರಾಗಿರುವ ಗಿರೀಶ್ ಕಾರ್ನಾಡ್, ಕನ್ನಡ, ಹಿಂದಿ, ಪಂಜಾಬಿ, ಮರಾಠಿ ಭಾಷೆಗಳಲ್ಲಿ ಪರಿಣತಿ ಹೊಂದಿದ್ದರು. ಕಸ್ತೂರಿ ಕನ್ನಡವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ್ದ ಕಾರ್ನಾಡರು ಹಲವು ನಾಟಕಗಳನ್ನೂ ರಚಿಸಿದ್ದಾರೆ.


COMMERCIAL BREAK
SCROLL TO CONTINUE READING

ಗಿರೀಶ್ ಕಾರ್ನಾಡ್ ಇಂಗ್ಲೆಂಡಿಗೆ ತೆರಳುವ ಮೊದಲೇ ಅವರ ಮೊದಲ ಸಾಹಿತ್ಯ ಕೃತಿ 'ಯಯಾತಿ' ನಾಯಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. ಇಂಗ್ಲೆಂಡಿನಿಂದ ಮರಳಿದ ಬಳಿಕ ತುಘಲಕ್ ಹಾಗೂ ಹಯವದನ ಪ್ರಕಟವಾದವು.


ಗಿರೀಶ್ ಕಾರ್ನಾಡರ ಪ್ರಮುಖ ನಾಟಕ ಕೃತಿಗಳು:


  • ಮಾ ನಿಷಾಧ – ಏಕಾಂಕ ನಾಟಕ

  • ಯಯಾತಿ – 1961

  • ತುಘಲಕ್ – 1964

  • ಹಯವದನ – 1972

  • ಅಂಜುಮಲ್ಲಿಗೆ – 1977

  • ಹಿಟ್ಟಿನ ಹುಂಜ ಅಥವಾ ಬಲಿ – 1980

  • ನಾಗಮಂಡಲ – 1990

  • ತಲೆದಂಡ – 1990

  • ಅಗ್ನಿ ಮತ್ತು ಮಳೆ – 1995

  • ಟಿಪ್ಪುವಿನ ಕನಸುಗಳು – 1997 [ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಶನ್‍ಗಾಗಿ ಭಾರತದ ಸ್ವಾತಂತ್ರ್ಯೋತ್ಸವದ 50ನೇ ವರ್ಷದ ನೆನಪಿನ ಕಾರ್ಯಕ್ರಮಕ್ಕಾಗಿ ಬರೆದುಕೊಟ್ಟ ನಾಟಕ– ಟಿಪ್ಪುವಿನ ಕನಸುಗಳು]

  • ಒಡಕಲು ಬಿಂಬ – 2005

  • ಮದುವೆ ಅಲ್ಬಮ್

  • ಫ್ಲಾವರ್ಸ – 2012

  • ಬೆಂದ ಕಾಳು ಆನ್ ಟೋಸ್ಟ – 2012