ದಾವಣಗೆರೆ: ಏಳು ವರ್ಷದ ಮುಗ್ದ ಬಾಲಕಿ  ಕನ್ನಡದ ಧಾರಾವಾಹಿ 'ನಂದಿನಿ'ಯಲ್ಲಿ ಬರುವ ಬೆಂಕಿಯ  ನೃತ್ಯವನ್ನು ಅನುಸರಿಸಲು ಹೋಗಿ ಬೆಂಕಿಯ ಬಲೆಗೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದಿದೆ,ಮೃತ ಬಾಲಕಿಯನ್ನು ಪ್ರಾರ್ಥನಾ ಎಂದು ಗುರುತಿಸಲಾಗಿದೆ.ಈ ಬಾಲಕಿಯು ಸ್ಥಳೀಯ  ಸೆಂಟ್ ಮೇರಿ ಕಾನ್ವೆಂಟ್ ನಲ್ಲಿ  ಎರಡನೆಯ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದಳು ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಮೃತ ಬಾಲಕಿಯ ತಾಯಿ ಚೈತ್ರಾ ಹೇಳುವಂತೆ ಪ್ರಾರ್ಥನಾ ಪ್ರತಿದಿನ ಎರಡು ಧಾರಾವಾಹಿಗಳನ್ನು ನೋಡುತ್ತಿದ್ದಳು ಅದರಲ್ಲಿ  ಹಾರ್ರರ್ ಧಾರಾವಾಹಿಯಾದ 'ನಂದಿನಿ'ಯಲ್ಲಿನ ಪ್ರಮುಖ ಪಾತ್ರವು ಬೆಂಕಿಯೊಂದಿಗೆ ಕುಣಿಯುವ ದೃಶ್ಯವನ್ನು ಅನುಕರಿಸಲು ಹೋಗಿ ತನ್ನ ಸುತ್ತಲು ಕೆಲವು ಕಾಗದಕ್ಕೆ ಬೆಂಕಿ ಹಚ್ಚಿ ತೂರಲು ಹೋಗಿದ್ದಾಳೆ ಆಗ ತಕ್ಷಣ ಬೆಂಕಿ ಇಡಿ ದೇಹವನ್ನು ಆಕ್ರಮಿಸಿಕೊಂಡು ಸಾವನ್ನಪ್ಪಿದ್ದಾಳೆ. ಈ ಹಿಂದೆ ಹಲವಾರು ಬಾರಿ ಟಿವಿಯ ಹತ್ತಿರ ಕುಳಿತುಕೊಳ್ಳಬೇಡ ಎಂದು ಎಚ್ಚರಿಕೆ ನೀಡಿದ್ದರು ಸಹಿತ ಅದನ್ನು ಅಲಕ್ಷಿಸಿ ಸಂಬಂಧಿಕರ ಮನೆಗೆ ಹೋಗಿ ಟಿವಿ ನೋಡುತ್ತಿದ್ದಳು ಎಂದು ತಾಯಿ ಚೈತ್ರಾ ಕಣ್ಣೀರಿಟ್ಟಿದ್ದಾಳೆ. 


ಇಲ್ಲಿನ ಪೊಲೀಸರು ಇದು ಆಕೆ ಧಾರಾವಾಹಿ ಅನುಕರಿಸಲು ಹೋಗಿ ಮಾಡಿಕೊಂಡ ಕೃತ್ಯವೋ ಅಥವಾ ಬೇರೆ ಯಾವುದಾದರು ಕಾರಣವಿದೆಯೇ ಎನ್ನುವುದರ ಕುರಿತಾಗಿ ತನಿಖೆ ಕೈಗೊಂಡಿದ್ದಾರೆ.