30 ದಿನ ರಜೆ ಕೊಡಿ, ಇಲ್ಲಂದ್ರೆ ಒತ್ತಡದಲ್ಲಿ ಏನಾದ್ರು ಆದ್ರೆ ನೀವೇ ಜವಾಬ್ದಾರಿ!
Leave Letter: ಒಂದು ತಿಂಗಳು ರಜೆಗಾಗಿ ಮನವಿ ಸಲ್ಲಿಸಿದರೆ ಬಳ್ಳಾರಿ ಎಸ್ಪಿ ರಂಜಿತ್ ಕುಮಾರ್ ಕೇವಲ 5 ದಿನ ರಜೆ ನೀಡಿದ್ದಾರೆ. ಇದರಿಂದ ಮನನೊಂದು ಹಿರಿಯ ಅಧಿಕಾರಿಗಳಿಗೆ ಡಿವೈಎಸ್ಪಿ ಕಾಶಿ ದೂರಿನ ಪ್ರತಿ ಕಳುಹಿಸಿದ್ದಾರೆ. ಈ ಮೂಲಕ ಬಳ್ಳಾರಿ ಪೊಲೀಸ್ ಅಧಿಕಾರಿಗಳಿಬ್ಬರ ನಡುವಣ ರಜೆ ಸಮರ ಈಗ ಬಹಿರಂಗವಾದಂತಾಗಿದೆ.
Leave Letter Went Viral: ನನಗೆ ಒಂದು ತಿಂಗಳು ರಜೆ ಬೇಕು ಅಂತ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಡಿವೈಎಸ್ಪಿ ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರ ಕೊಟ್ಟಿದ್ದಾರೆ. ಇಷ್ಟೇ ಆಗಿದ್ದರೆ ಇದು ಸುದ್ದಿಯೋ ಆಗುತ್ತಿರಲಿಲ್ಲ. ಆದರೆ ರಜೆಯಲ್ಲಿ ಅವರು ಕೊಟ್ಟಿರುವ ಕಾರಣ ಇದೀಗ ತೀವ್ರ ಸುದ್ದಿಗೆ ಕಾರಣವಾಗಿದೆ.
ಮಾನಸಿಕ ನೆಮ್ಮದಿಗಾಗಿ ಧ್ಯಾನ, ಯೋಗ ಮಾಡಬೇಕು. ಹೀಗಾಗಿ ನನಗೆ ಒಂದು ತಿಂಗಳು ರಜೆ ಬೇಕು ಅಂತ ತೋರಣಗಲ್ಲು ಡಿವೈಎಸ್ಪಿ ಎಸ್ಎಸ್ ಕಾಶಿ ಎಂಬುವರು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಒಂದು ತಿಂಗಳು ರಜೆ ಕೇಳಿದರೆ ಬಳ್ಳಾರಿ ಎಸ್ಪಿ ಕೇವಲ 5 ದಿನ ರಜೆ ಸ್ಯಾಂಕ್ಷನ್ ಮಾಡಿದ್ದಾರಂತೆ. ಹೀಗಾಗಿ ಎಸ್ಪಿ ಬಳಿಕ ಇದೀಗ ರಜೆಗಾಗಿ ಡಿವೈಎಸ್ಪಿ ಕಾಶಿ ಅವರು ಡಿಜಿಪಿ, ಎಡಿಜಿಪಿಗೆ ಪತ್ರ ಬರೆದಿದ್ದಾರೆ.
ಇಯನ್ನೂ ಓದಿ- ಯೋಗೀಶ್ ಗೌಡ ಕೊಲೆ ಪ್ರಕರಣ: ಧಾರವಾಡ ಪ್ರವೇಶಕ್ಕೆ ವಿನಯ ಕುಲಕರ್ಣಿಗಿಲ್ಲ ಅನುಮತಿ
ಒತ್ತಡದಲ್ಲಿ ಏನಾದ್ರು ಆದ್ರೆ ನೀವೇ ಜವಾಬ್ದಾರಿ!
ಒಂದು ತಿಂಗಳು ರಜೆಗಾಗಿ ಮನವಿ ಸಲ್ಲಿಸಿದರೆ ಬಳ್ಳಾರಿ ಎಸ್ಪಿ ರಂಜಿತ್ ಕುಮಾರ್ ಕೇವಲ 5 ದಿನ ರಜೆ ನೀಡಿದ್ದಾರೆ. ಇದರಿಂದ ಮನನೊಂದು ಹಿರಿಯ ಅಧಿಕಾರಿಗಳಿಗೆ ಡಿವೈಎಸ್ಪಿ ಕಾಶಿ ದೂರಿನ ಪ್ರತಿ ಕಳುಹಿಸಿದ್ದಾರೆ. ಈ ಮೂಲಕ ಬಳ್ಳಾರಿ ಪೊಲೀಸ್ ಅಧಿಕಾರಿಗಳಿಬ್ಬರ ನಡುವಣ ರಜೆ ಸಮರ ಈಗ ಬಹಿರಂಗವಾದಂತಾಗಿದೆ. ಒಂದು ತಿಂಗಳು ರಜೆ ಕೇಳಿದರೆ ಕೇವಲ 5 ದಿನ ರಜೆ ನೀಡಲಾಗಿದೆ. ಮಾನಸಿಕ ನೆಮ್ಮದಿ ಇಲ್ಲದೆ ಕರ್ತವ್ಯದ ವೇಳೆ ಲೋಪವಾದರೆ ಇಲಾಖೆಯೇ ಹೊಣೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಜೆ ನೀಡದೆ ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಬಳ್ಳಾರಿ ಎಸ್ಪಿ ರಂಜಿತ್ ಕುಮಾರ್ ವಿರುದ್ಧ ಕಾಶಿ ಆರೋಪಿಸಿದ್ದಾರೆ. ಮಾತ್ರವಲ್ಲದೆ, ತನಗೆ ರಜೆ ಬೇಕೆ ಬೇಕೆಂದು ಹಿರಿಯ ಅಧಿಕಾರಿಗಳಿಗೆ ಅವರು ಮನವಿ ಮಾಡಿದ್ದಾರೆ.
ರಜೆ ಮನವಿ ಪತ್ರದಲ್ಲಿ ಡಿವೈಎಸ್ಪಿ ಕಾಶಿ ಈ ರೀತಿ ಉಲ್ಲೇಖಿಸಿದ್ದಾರೆ!
ಒಂದು ವೇಳೆ ತಾವು ರಜೆ ಮಂಜೂರು ಮಾಡದೆ 5 ದಿನಕ್ಕೆ ಹ್ಜಿಂದಿರುಗಿ ಬ್ನದು ಕೆಲಸ ಮಾಡಬೇಕು ಎಂಬ ಆಶಾ ಮತ್ತು ಉದ್ದೇಶವೂ ನಿಮ್ಮದಾಗಿದ್ದರೆ ಈ ಪತ್ರ ತಲುಪಿದ ಮೂರು ದಿನಗಳ ಒಳಗಾಗಿ ತಾವು ನನಗೆ ಜ್ಞಾಪನೆ ನೀಡಲು ಕೋರಲಾಗಿದೆ.
ಅಂತಹ ಒತ್ತಡ ಪರಿಸ್ಥಿತಿಯಲ್ಲಿ ನಾನು ಕರ್ತವ್ಯ ಮಾಡುವುದು ಅನಿವಾರ್ಯವಾಗಿದ್ದಲ್ಲಿ ನನ್ನ ಒತ್ತಡ ನಿಭಾಯಿಸುವಿಕೆಯು ಮಿತಿ ಮೀರಿಹೋದಲ್ಲಿ ಅದರಿಂದ ಸಾರ್ವಜನಿಕರಿಗಾಗಲಿ ಅಥವಾ ಆದೀನ ಸಿಬ್ಬಂದಿಗಳಿಗಾಗಲಿ ಅಥವಾ ನಿಮ್ಮೊಂದಿಗಾಗಲಿ ಅವಗಡಗಳು, ಅಚಾತುರ್ಯಗಳು ನಡೆದಲ್ಲಿ ಸಂಪೂರ್ಣವಾಗಿ ತಮ್ಮದೇ ಜವಾಬ್ದಾರಿ ಎಂದು ಭಾವಿಸಿ ಆ ಎಲ್ಲಾ ಜವಾಬ್ದಾರಿಗಳನ್ನು ತಾವು ಹೊತ್ತುಕೊಳ್ಳುವುದಾದಲ್ಲಿ ನಾನು ನಿಮ್ಮ ಒತ್ತಡದ ನಡುವೆಯೂ ಕೆಲಸ ಮಾಡಬಲ್ಲೆ. ಯಾವುದೇ ಆಚಾರುತ್ಯಕ್ಕೆ ಅವಗಡಗಳಿಗೆ ನಾನು ಹೊಣೆಗಾರಣಾಗಲಾರೆ. ಆದ್ದರಿಂದ ತಮ್ಮ ನಿರ್ಧಾರವನ್ನು ದಿನಾಂಕ: 22.06.203ರ ಒಳಗಾಗಿ ತಿಳಿಸಿದಲ್ಲಿ ಆ ಪ್ರಕಾರ ಕರ್ತವ್ಯಕ್ಕೆ ಬರುತ್ತೇನೆ. ಇಲ್ಲವಾದಲ್ಲಿ ನಾನು ದಿನಾಂಕ: 19.06.2023 ರಿಂದ ರಜೆಯ ಮೇಲೆ ತೆರಳುತ್ತಿದ್ದು ನನ್ನ ಉಲ್ಲೇಖಿತ-1 ರ ಮನವಿಯಂತೆ ನನಗೆ 30 ದಿನಗಳ ರಜಾ ಮಂಜೂರು ಮಾಡುತ್ತಿರೀ ಎಂಬ ನಂಬಿಕೆಯ ಮೇಲೆ ಹೊರಡುತ್ತಿದ್ದೇನೆ.
ಒಂದು ತಿಂಗಳ ನಂತರ ಸದೃಢ ಮನಸ್ಸಿನೊಂದಿಗೆ ನಿಮ್ಮ ಒತ್ತಡ, ಕಿರುಕುಲವನ್ನು ನಿಭಾಯಿಸುವ ಶಾಂತಿ ಮಂತ್ರ ಕಲಿತು ಬರುವ ವಿಶ್ವಾಸದಲ್ಲಿದ್ದೇನೆ. ಮತ್ತೊಮ್ಮೆ ಕಷ್ಟವಾದಲ್ಲಿ ಮುಂದಿನ ಕಾರ್ಯಕ್ರಮ ಕಾಲಾಯ ತಸ್ಮೈ ನಮಃ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ
ಪೊಲೀಸ್ ಉಪ-ಅಧೀಕ್ಷಕರು
ತೋರಣಗಲ್ಲು ಉಪ-ವಿಭಾಗ
ರೋರಣಗಲ್ಲು, ಬಳ್ಳಾರಿ (ಜಿ)
ಎಂದು ಬರೆದಿದ್ದಾರೆ.
ಇಯನ್ನೂ ಓದಿ- ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ: ಬಿಜೆಪಿ ಘಟಾನುಘಟಿಗಳ ವಿರುದ್ಧ ದೂರು
ಈ ಹಿಂದೆ ಇಲಾಖೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಮೂಲಕ ಡಿವೈಎಸ್ಪಿ ಕಾಶಿ ಸುದ್ದಿಯಾಗಿದ್ದರು. ಐಜಿಪಿ ವಿರುದ್ಧ ಸಮರ ಸಾರಿ ರಾಜೀನಾಮೆಯನ್ನೂ ನೀಡಿದ್ದರು. ಇದೀಗ ರಜೆಗಾಗಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಸುದ್ದಿಯಾಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ