Ramesh Jarkiholi: ಕಳೆದೆರಡು ತಿಂಗಳಿಂದ ಸೈಲೆಂಟ್ ಆಗಿದ್ದ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ರಾಜಕೀಯ ಬದ್ಧವೈರಿ ಲಕ್ಷ್ಮಣ್ ಸವದಿ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದು ಬಿಜೆಪಿ ಸಮಾವೇಶಕ್ಕೂ ಸಿದ್ಧತೆ ನಡೆಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಸರ್ಕಾರದಲ್ಲಿ ಸತೀಶ್ ಜಾರಕಿಹೊಳಿ ವೈಮನಸ್ಸಿಗೆ ಕಾರಣ ಏನು ಎಂಬುದನ್ನು ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ರಿವೀಲ್ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಬಗ್ಗೆ ಸಾಫ್ಟ್ ಕಾರ್ನರ್ ತೋರುತ್ತಾ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ  ಡಿಚ್ಚಿ ಕೊಟ್ಟಿದ್ದಾರೆ. ಅಷ್ಟಕ್ಕೂ ರಮೇಶ್ ಜಾರಕಿಹೊಳಿ ಹೇಳಿದ್ದೇನು? ಈ ಸ್ಟೋರಿ ಓದಿ... 


COMMERCIAL BREAK
SCROLL TO CONTINUE READING

ಹೌದು, ಕಳೆದ ಎರಡ್ಮೂರು ತಿಂಗಳಿಂದ ಸೈಲೆಂಟ್ ಆಗಿದ್ದ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ರಾಜಕೀಯ ಬದ್ಧವೈರಿ ಲಕ್ಷ್ಮಣ್ ಸವದಿ ಕ್ಷೇತ್ರವಾದ ಬೆಳಗಾವಿ ಜಿಲ್ಲೆ ಅಥಣಿ ವಿಧಾನಸಭಾ ಕ್ಷೇತ್ರದ ನಂದಗಾಂವ ಗ್ರಾಮಕ್ಕೆ ರಮೇಶ್ ಜಾರಕಿಹೊಳಿ ಭೇಟಿ ನೀಡಿದ್ದರು. ನಂದಗಾಂವ ಗ್ರಾಮದಲ್ಲಿ ದಸರಾ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಮೇಶ್ ಜಾರಕಿಹೊಳಿಗೆ ಬೆಂಬಲಿಗರು ಅದ್ಧೂರಿ ಸ್ವಾಗತ ಕೋರಿದರು. ಎರಡು ಜೆಸಿಬಿಗಳ ಮೇಲೆ ಬೆಂಬಲಿಗರು ನಿಂತು ರಮೇಶ್ ಜಾರಕಿಹೊಳಿಗೆ ಹೂವಿನ ಮಳೆಗೈದು ಗ್ರ್ಯಾಂಡ್ ವೆಲ್ಕಮ್ ನೀಡಿದ್ರು. ತೆರೆದ ವಾಹನದಲ್ಲಿ ರಮೇಶ್ ಜಾರಕಿಹೊಳಿ ಅದ್ಧೂರಿ ಮೆರವಣಿಗೆ ನಡೆಸಿದ್ರು. ಈ ವೇಳೆ ಮಾಜಿ ಸಚಿವ ಶ್ರೀಮಂತ್ ಪಾಟೀಲ್ ಸೇರಿ ಹಲವರು ಉಪಸ್ಥಿತರಿದ್ದರು. 


ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಮೇಶ್ ಜಾರಕಿಹೊಳಿ ಸತತ ಎರಡು ತಿಂಗಳಿಂದ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದೇನೆ. ಬಿಜೆಪಿಯ ತಪ್ಪು ನಿರ್ಣಯದಿಂದ ನಾನು ಸೋತಿದ್ದೆ. ಸರ್ಕಾರ ಒಳ್ಳೆಯ ಕೆಲಸ ಮಾಡಲಿ. ಸರ್ಕಾರದ ಭವಿಷ್ಯ ಎಷ್ಟಿದೆ ದೇವರಿಗೆ ಗೊತ್ತು. ಮುಂದಿನ ದಿನಗಳಲ್ಲಿ ದುರ್ಗಾಮಾತೆ ತಿಳಿಸುತ್ತಾಳೆ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು. 


ಇದನ್ನೂ ಓದಿ- ಜೆಡಿಎಸ್ ಸರ್ಕಾರ ಉರುಳಿದ್ದಕ್ಕೆ ಬೇರೆಯವರ ಮೇಲೆ ಆರೋಪ ನಿರರ್ಥಕ : ಮುಖ್ಯಮಂತ್ರಿ ಸಿದ್ದರಾಮಯ್ಯ


ಇದಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳ್ಕರ್ ಕೋಲ್ಡ್ ವಾರ್ ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿ ಸತೀಶ್ ಜಾರಕಿಹೊಳಿ ವೈಮನಸ್ಸಿನ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸತೀಶ್ ಜಾರಕಿಹೊಳಿ ಪರಿಸ್ಥಿತಿ ಈ ರೀತಿ ಇದೆ. ಬೇರೆಯವರು ಮುಖ್ಯಮಂತ್ರಿ ಆದ್ರೆ ಪರಿಸ್ಥಿತಿ ಏನು. ಹಿಂದೆ ನಾನು ಬಂಡೆದ್ದಾಗ ಮಂತ್ರಿ ಇದ್ದಾರೆ ಇವರಿಗೇಕೆ ಬೇಕು ಸುಮ್ಮನಿರಬೇಕಲ್ಲ ಅಂತಾ ತಿಳಿದುಕೊಂಡಿದ್ರು. ಆದ್ರೆ ಸತೀಶ್ ಜಾರಕಿಹೊಳಿಗೆ ಆಗುತ್ತಿರುವ ಹಿಂಸೆಯಿಂದ ಜನರಿಗೆ ಇವತ್ತು ಉತ್ತರ ಸಿಕ್ಕಿದೆ ಎಂದರು. 


ಇನ್ನು ಇದೇ ವೇಳೆ ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳುತ್ತಾ ತಮ್ಮ ಮತ್ತೋರ್ವ ರಾಜಕೀಯ ಬದ್ಧವೈರಿ ಡಿಸಿಎಂ ಡಿ.ಕೆ.ಶಿವಕುಮಾರ್ ಗೂ ಟಾಂಗ್ ನೀಡಿದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ ಇದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, ಡಿ.ಕೆ.ಶಿವಕುಮಾರ್ ಇರೋವರೆಗೂ ನಮಗೆ ವರದಾನ, ಅವರು ಎಷ್ಟು ದಿನ ಇರ್ತಾರೆ ನಮಗೆ ವಿಪಕ್ಷದಲ್ಲಿ ಅಷ್ಟು ದಿನ ವರದಾನ ಎಂದರು. 


ಇನ್ನು ಅತಿ ಶೀಘ್ರದಲ್ಲಿಯೇ ಅಥಣಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಮಾಡೋದಾಗಿ ತಿಳಿಸಿದ ರಮೇಶ್ ಜಾರಕಿಹೊಳಿ, ಆ ವೇದಿಕೆಯಲ್ಲಿ ಎಲ್ಲಾ ವಿಷಯಗಳನ್ನು ಹೇಳುತ್ತೇನೆ ಎಂದರು.  ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಬಗ್ಗೆ ಸಾಫ್ಟ್ ಕಾರ್ನರ್ ತೋರಿದ ರಮೇಶ್ ಜಾರಕಿಹೊಳಿ, ಸರ್ಕಾರ ಬಂದು ಈಗ ಆರು ತಿಂಗಳಾಗಿದೆ. ಸಿದ್ದರಾಮಯ್ಯ ಒಳ್ಳೆಯದ್ದು ಮಾಡ್ತಾರೆ ಎಂಬ ಆಸೆ ಇದೆ. ಆದ್ರೆ ನಡೆದುಕೊಳ್ಳುವ ರೀತಿ ನೋಡಿದ್ರೆ ಅವರು ಫ್ರೀ ಇಲ್ಲ. ಹೀಗಾಗಿ ಸಿದ್ದರಾಮಯ್ಯರಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. 2013ರಿಂದ 2018ರವರೆಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾನು ಸಚಿವನಿದ್ದೆ. ಆಗಿನ ಅವರ ಮಾತಿನ ದರ್ಪ, ನಡೆಯುವ ಶೈಲಿ ಇವತ್ತು ಆ ಗಂಭೀರತೆ ಕಾಣುತ್ತಿಲ್ಲ. ಏಕೆ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ನೋಡೋಣ. ಬಹುಶಃ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಾಗೂ ಕೆಲವು ಜನ ಅವರನ್ನು ಫ್ರೀ ಬಿಟ್ಟಿಲ್ಲ ಅಂತಾ ಕಾಣುತ್ತೆ ಎಂದು ಹೇಳಿದರು. 


ಇದನ್ನೂ ಓದಿ- ತಮಿಳುನಾಡಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ


ಇನ್ನು ಇದೇ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ರನ್ನು ತಾವು ಭೇಟಿಯಾದ ಬಗ್ಗೆಯೂ ಒಪ್ಪಿಕೊಂಡ ರಮೇಶ್ ಜಾರಕಿಹೊಳಿ ಮೊನ್ನೆ ಭೇಟಿಯಾಗಿದ್ದು ಆರನೇ ಬಾರಿ, ರಾಜಕೀಯ ಚರ್ಚೆ ನಡೆದಿಲ್ಲ. ಜಗದೀಶ್ ಶೆಟ್ಟರ್ ಒಳ್ಳೆಯ ನಾಯಕರು ಅವರು ನಮ್ಮ ಪಕ್ಷ ಬಿಟ್ಟಿದ್ದು ದುರ್ದೈವ ಎನ್ನುವ ಮೂಲಕ ತಾವು ಜಗದೀಶ್ ಶೆಟ್ಟರ್ ಜೊತೆ ಸಂಪರ್ಕದಲ್ಲಿದ್ದ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.