ಸ್ವಿಮ್ಮಿಂಗ್ ಪೂಲ್ ಗೆ ಚಿನ್ನಾಭರಣ ಧರಿಸಿ ಹೋಗುವ ಮುನ್ನ ಎಚ್ಚರ: ನಿಮ್ಮ ಚಿನ್ನಾಭರಣ ಕಳ್ಳತನವಾಗಬಹುದು..!
ಲಾಕರ್ ನಲ್ಲಿ ಚಿನ್ನದ ಬಳೆ, ಮಾಂಗಲ್ಯ ಸರವನ್ನು ಇಟ್ಟಿದ್ದರು. ಇದಕ್ಕೆ ಹೊಂಚು ಹಾಕಿ ಕೂತಿದ್ದ ಸ್ವಿಮ್ಮಿಂಗ್ ಕೋಚ್ ಮಮತಾ, ಲಾಕರ್ ನಲ್ಲಿ ಇಟ್ಟಿದ್ದ ಚಿನ್ನಾಭರಣ ಕದ್ದು ಗೊತ್ತಿಲ್ಲದಂತೆ ನಾಟಕವಾಡಿದ್ದಳು. ನಂತರ ಕದ್ದ ಚಿನ್ನಾಭರಣವನ್ನು ಗೆಳೆಯ ಸ್ವಾಮಿಗೆ ನೀಡಿದ್ದಳು.
ಬೆಂಗಳೂರು : ಸ್ವಿಮ್ಮಿಂಗ್ ಪೂಲ್‌ಗೆ ಬಂದಿದ್ದ ಮಹಿಳೆಯ ಚಿನ್ನಾಭರಣ ಕದ್ದಿದ್ದ ಲೇಡಿ ಸ್ವಿಮ್ಮಿಂಗ್ ಕೋಚ್ ಸೇರಿ ಇಬ್ಬರು ಆರೋಪಿಗಳನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ. ಸ್ವಿಮ್ಮಿಂಗ್ ಮಮತಾ ಮತ್ತಾಕೆಯ ಸ್ನೇಹಿತ ಸ್ವಾಮಿ ಬಂಧಿತರು. ಕೆಂಬತ್ತಹಳ್ಳಿಯಲ್ಲಿರುವ ಸ್ವಿಮ್ ಸ್ಕೈರ್ ಗೆ ಕುಟುಂಬಸ್ಥರ ಜೊತೆ ಮಹಿಳೆಯೊಬ್ಬರು ವಿಕೇಂಡ್ ಎಂಜಾಯ್ ಮಾಡಲು ಬಂದಿರುತ್ತಾರೆ.
ಈ ವೇಳೆ ಅಲ್ಲೇ ಇದ್ದ ಲಾಕರ್ ನಲ್ಲಿ ಚಿನ್ನದ ಬಳೆ, ಮಾಂಗಲ್ಯ ಸರವನ್ನು ಇಟ್ಟಿದ್ದರು. ಇದಕ್ಕೆ ಹೊಂಚು ಹಾಕಿ ಕೂತಿದ್ದ ಸ್ವಿಮ್ಮಿಂಗ್ ಕೋಚ್ ಮಮತಾ, ಲಾಕರ್ ನಲ್ಲಿ ಇಟ್ಟಿದ್ದ ಚಿನ್ನಾಭರಣ ಕದ್ದು ಗೊತ್ತಿಲ್ಲದಂತೆ ನಾಟಕವಾಡಿದ್ದಳು. ನಂತರ ಕದ್ದ ಚಿನ್ನಾಭರಣವನ್ನು ಗೆಳೆಯ ಸ್ವಾಮಿಗೆ ನೀಡಿದ್ದಳು.
ಇದನ್ನೂ ಓದಿ: ಗುಡ್ ನ್ಯೂಸ್..! 961 ಹುದ್ದೆಗಳ ಭರ್ತಿಗೆ ಕೃಷಿ ಇಲಾಖೆಯಿಂದ ಕೆ.ಪಿ.ಎಸ್.ಸಿಗೆ ಪ್ರಸ್ತಾವನೆ
ಚಿನ್ನಾಭರಣ ಕಳೆದುಕೊಂಡು ಕಂಗಾಲಾಗಿದ್ದ ಮಹಿಳೆ ಈ ಸಂಬಂಧ ಪ್ರಕರಣ ದಾಖಲಿಸಿದ್ದರು. ದೂರಿನನ್ವಯ ತನಿಖೆ ಕೈಗೊಂಡ ವೇಳೆ ಸ್ವಿಮ್ಮಿಂಗ್ ಕೋಚ್ ಮಮತಾ ಹಾಗೂ ಆಕೆಯ ಸ್ನೇಹಿತನ ಕಳ್ಳಾಟ ಬಯಲಾಗಿದೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿ 3 ಲಕ್ಷ ಮೌಲ್ಯದ 46 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಒಟ್ಟಿನಲ್ಲಿ ಸ್ವಿಮ್ಮಿಂಗ್ ಅಂತಾ ಹೋಗುವ ವೇಳೆ ಆಭರಣ ಧರಿಸಿ ಹೋಗುವವರು ಎಚ್ಚರಿಕೆ ವಹಿಸಬೇಕಾಗಿದೆ. ಇಲ್ಲದಿದ್ದರೆ ಇಂತಹ ಕಳ್ಳಕಾಕರಿಂದ ಚಿನ್ನಾಭರಣ ಕಳೆದುಕೊಳ್ಳಬೇಕಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.