ಬೆಂಗಳೂರು: ಕೋವಿಡ್-19 ಮೂರನೇ ಅಲೆ (Covid-19 Third Wave) ಅತಿ ವೇಗವಾಗಿ ಹರಡುತ್ತಿದ್ದು, ವಿಶ್ವಾದ್ಯಂತ ಪ್ರತಿ ನಿತ್ಯ ಲಕ್ಷಾಂತರ ಒಮಿಕ್ರಾನ್ (Omicron) ರೂಪಾಂತರಿ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ತಜ್ಞರು ಹೇಳುವ ಪ್ರಕಾರ ಜನವರಿ 25ರ ನಂತರ ಕೋವಿಡ್  ಪ್ರಕರಣಗಳ ಸಂಖ್ಯೆ ಕಡಿಮೆ ಆಗುವ ಸಾಧ್ಯತೆ ಇದೇ ಎಂದು ಅಂದಾಜಿಸಲಾಗಿದೆ. 


COMMERCIAL BREAK
SCROLL TO CONTINUE READING

ಕರೋನಾ ರೂಪಾಂತರಿ ಒಮಿಕ್ರಾನ್ (Omicron) ಸೋಂಕಿಗೆ ತುತ್ತಾದ ಬಹುತೇಕ ಮಂದಿ ಆಕ್ಸಿಜನ್ ಅಥವಾ ಐಸಿಯು ಬೆಡ್ ಗಳ ಮೇಲೆ ಅವಲಂಬಿತರಾಗದೆ ಹೋಂ ಐಸೋಲೇಷನ್ ನಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿನ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ  2600 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 64-ಐಸಿಯು (ವೆಂಟಿಲೇಟರ್), 154-ಐಸಿಯು, ಒಕ್ಸಿಜನ್ (HDU ಬೆಡ್) ಸೇರಿದಂತೆ ಇನ್ನುಳಿದ ಮಂದಿ ಸಾಮಾನ್ಯ ಆಸ್ಪತ್ರೆಗಳ ಬೆಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಹುಪಾಲು ಜನ ಕೋವಿಡ್ ಪರೀಕ್ಷೆಗೆ ಒಳಪಟ್ಟಿಲ್ಲ:
ಆರೋಗ್ಯ ಇಲಾಖೆಯ (Health Department) ಮೂಲಗಳ ಪ್ರಕಾರ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಸಾಮಾನ್ಯ ನೆಗಡಿ, ಕೆಮ್ಮು, ಶೀತ ಹಾಗೂ ಜ್ವರ ಬರುವುದು ಸಹಜ. ಈ ಮದ್ಯ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದಾಗ್ಯೂ, ಬಹುತೇಕ ಮಂದಿ ತಮಗೆ ಬಂದಿರುವುದು ಸಾಮಾನ್ಯ ನೆಗಡಿ, ಶೀತ ಎಂದು ಭಾವಿಸಿ ಪರೀಕ್ಷೆ ನೀಡುತ್ತಿಲ್ಲ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ- ಒತ್ತಾಯಪೂರ್ವಕವಾಗಿ ಯಾರಿಗೂ ಲಸಿಕೆ ನೀಡುವುದಿಲ್ಲ: ಸುಪ್ರೀಂಕೋರ್ಟ್ ಗೆ ಕೇಂದ್ರದ ಸ್ಪಷ್ಟನೆ


ಈ ಆಧಾರದ ಮೇಲೆ ಜನವರಿ 25 ರ ನಂತರ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬಹುಪಾಲು ಜನರು ನೆಗಡಿ, ಶೀತ ಇದ್ದರು ಪರೀಕ್ಷೆ ನೀಡುತ್ತಿಲ್ಲ. ಚಳಿಗಾಲದಲ್ಲಿ ಇಂಥವು ಸಹಜ ಎಂದು ಭಾವಿಸಿ ಸುಮ್ಮನಿದ್ದಾರೆ. ಅಷ್ಟೇ ಅಲ್ಲದೇ, ಮನೆಮದ್ದು ಜೊತೆಗೆ ವೈದ್ಯರ ಸಲಹೆ ಇಲ್ಲದೆ ಮಾತ್ರೆಯನ್ನು ಸೇವಿಸಿರುವ ಘಟನೆಗಳು ಬಹಳಷ್ಟಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ  ಡಾ ಜಗದೀಶ್, ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿಗಳನ್ನು ಸ್ವೀಕರಿಸಬಾರದು. ಯಾವುದೇ ವೈದ್ಯ ತನ್ನ ರೋಗಿಗೆ ಔಷಧಿಗಳನ್ನು ನೀಡುವಾಗ ಅನೇಕ ಸಂಗತಿಗಳನ್ನು ಪರಿಗಣಿಸಿ ಔಷಧಿಗಳನ್ನು ನೀಡುತ್ತಾರೆ. ಈ ರೀತಿ ಸ್ವಯಂ ವೈದ್ಯಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಇದು ಹಲವು ಬಾರಿ ಜೀವಕ್ಕೆ ಕುತ್ತು ತರುವ ಸಾಧ್ಯತೆಯಿದೆ ಎಂದು ಹೇಳಿದರು.

ಇದನ್ನೂ ಓದಿ- ಈ ರಾಜ್ಯದಲ್ಲಿ 10-12 ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಜ. 31 ರವರೆಗೆ ರಜೆ ಘೋಷಣೆ


ಹೀಗಾಗಿ ತಜ್ಞರ ಪ್ರಕಾರ, ಬೆಂಗಳೂರು ಸೇರಿದಂತೆ ರಾಜ್ಯ ಗರಿಷ್ಠ ಪ್ರಮಾಣದ ಪಾಸಿಟಿವ್ ಪ್ರಕರಣಗಳು ಈಗಾಗಲೇ ದಾಖಲಾಗಿದೆ. ಇದರ ಜೊತೆ ತಜ್ಞರು ವಿವಿಧ ರಾಜ್ಯಗಳ ಗೊಬೆಟ್ ಪ್ರಮಾಣಗಳ ಕುರಿತು ವರದಿಯನ್ನು ಆಧರಿಸಿ ಜನವರಿ 25 ನಂತರ ರಾಜ್ಯದಲ್ಲಿ ಕರೋನವೈರಸ್ ಆರ್ಭಟ ಕಡಿಮೆಯಾಗಲಿದೆ ಎಂದು ವಿವರಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.