ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಎರಡೇ ವರ್ಷಗಳಲ್ಲಿ ಮೆಟ್ರೋ ರೈಲಿಗೆ ಹೊಸ ತಂತ್ರಜ್ಞಾನ..!
Metro Latest Technology : ಸಿಟಿಯ ಟ್ರಾಫಿಕ್ನಲ್ಲಿ ಸಿಲುಕಬಾರದು, ಧೂಳು ತುಂಬಿರೋ ಗಾಳಿ ಉಸಿರಾಡಬಾರದು, ಕರ್ಕಶ ಹಾರನ್ ಶಬ್ದಗಳನ್ನು ಕೇಳಬಾರದು ಅಂದ್ರೆ ಇರೋ ಏಕೈಕ ಮಾರ್ಗವೇ ನಮ್ಮ ಮೆಟ್ರೋ. ಇತ್ತೀಚಿಗೆ ಮೆಟ್ರೋದಲ್ಲೂ ಕೂಡ ಪೀಕ್ ಅವರ್ಗಳಲ್ಲಿ ಜನರ ಟ್ರಾಫಿಕ್ ಹೆಚ್ಚಾಗ್ತಿದೆ.
Metro Development : ಒಂದು ರೈಲು ಹೊರಟ ಮೇಲೆ ಮತ್ತೊಂದು ರೈಲು ಹೊರಡಬೇಕು ಅಂದ್ರೆ, ಸದ್ಯಕ್ಕೆ ಕನಿಷ್ಟ 5 ನಿಮಿಷಗಳ ಅಂತರವಿದೆ. ಆದ್ರೆ, ಇನ್ನೆರಡು ವರ್ಷಗಳಲ್ಲಿ ಕೇವಲ 2 ನಿಮಿಷಗಳ ಅಂತರದಲ್ಲಿ ರೈಲುಗಳು ಓಡುತ್ತೆ. ಇದಕ್ಕಾಗಿ ಹೊಸ ತಂತ್ರಜ್ಞಾನವನ್ನು ನಮ್ಮ ಮೆಟ್ರೋ ಚಾಲ್ತಿಗೆ ತರ್ತಿದೆ.
2025ರೊಳಗೆ ಲೇಟೆಸ್ಟ್ ಟೆಕ್ನಾಲಜಿ ಅಳವಡಿಕೆಗೆ ಸಿದ್ದತೆ..!
ನಮ್ಮ ಮೆಟ್ರೋ ರೈಲುಗಳ ನಡುವೆ ಸಂಚಾರದ ಅಂತರ ಈಗ ಸುಮಾರು ನಾಲ್ಕೂವರೆಯಿಂದ ಐದು ನಿಮಿಷಗಳಿವೆ. ಅಂದ್ರೆ ಒಂದು ಟ್ರೈನ್ ಹೊರಟ ನಾಲ್ಕೂವರೆಯಿಂದ ಐದು ನಿಮಿಷಗಳ ನಂತರವೇ ಮತ್ತೊಂದು ಟ್ರೈನ್ ಸಂಚಾರ ಆರಂಭಿಸುತ್ತೆ. ಮೊದಲು ರೈಲು ಹೊರಟು ಕಂಟ್ರೋಲ್ ರೂಂಗೆ ತನ್ನ ವೇಗ ಹಾಗು ಪೊಸಿಶನ್ ತಿಳಿಸುತ್ತೆ.
ಈ ಮಾಹಿತಿಯನ್ನು ಕಂಟ್ರೋಲ್ ರೂಂ ಹೊರಡಲು ಸಜ್ಜಾಗಿರೋ ಮತ್ತೊಂದು ಟ್ರೈನ್‌ಗೆ ತಿಳಿಸುತ್ತೆ. ಈ ಕಮ್ಯೂನಿಕೇಶನ್ ಆಗೋದು ತಡವಾಗ್ತಿರೋದ್ರಿಂದ ಒಂದು ರೈಲಿನಿಂದ ಇನ್ನೊಂದು ರೈಲಿಗೆ ಹೆಡ್‌ವೇ ನಾಲ್ಕೂವರೆಯಿಂದ ಐದು ನಿಮಿಷಗಳಿವೆ. ಆದ್ರೆ, 2025ರೊಳಗೆ ನಮ್ಮ ಮೆಟ್ರೋ ಹೊಸ ತಂತ್ರಜ್ಞಾನ ಪರಿಚಯಿಸಲಿದೆ. ಕಂಟ್ರೋಲ್ ರೂಂ ಬದಲಾಗಿ ರೈಲುಗಳೇ ನೇರವಾಗಿ ಕಮ್ಯೂನಿಕೇಟ್ ಮಾಡುವ ತಂತ್ರಜ್ಞಾನ ಇದಾಗಿದೆ.
ಇದನ್ನೂ ಓದಿ-ರಾಜಸ್ಥಾನದಲ್ಲಿ ಶೀಘ್ರದಲ್ಲೇ 19 ನೂತನ ಜಿಲ್ಲೆ, 3 ವಿಭಾಗ..! ಇಲ್ಲಿದೆ ಸಂಪೂರ್ಣ ಪಟ್ಟಿ
ರೈಲುಗಳ ನಡುವೆ ಸಂಪರ್ಕ ಸೇತುವೆಯಾಗಿದ್ದ ಕಂಟ್ರೋಲ್ ರೂಂ..!
ಇನ್ಮುಂದೆ ರೈಲುಗಳೇ ನೇರವಾಗಿ ಕಮ್ಯುನಿಕೇಟ್ ಮಾಡುತ್ತೆ.. ಈ ತಿಂಗಳಿನಿಂದ ಹೊಸದಾಗಿ ಸೇರ್ಪಡೆಯಾಗಲಿರೋ ಕೋಚ್‌ಗಳಲ್ಲಿ ಈ ಟೆಕ್ನಾಲಜಿ ಇರಲಿದೆ. ತಾನು ಚಲಿಸುತ್ತಿರೋ ಸ್ಪೀಡ್ ಎಷ್ಟು, ತಾನಿರೋ ಲೋಕೇಶನ್ ಏನು, ತನ್ನ ಮುಂದಿನ ಸ್ಪೀಡ್ ಎಷ್ಟಕ್ಕೆ ಏರಿಕೆಯಾಗಲಿದೆ ಅಥವ ಇಳಿಕೆಯಾಗಲಿದೆ.
ಈ ಎಲ್ಲ ಮಾಹಿತಿಯನ್ನು ಕಂಟ್ರೋಲ್ ರೂಂಗೆ ತಿಳಿಸೋ ಬದಲು ನೇರವಾಗಿ ಹೊರಡಲು ಕಾಯ್ತಿರೋ ರೈಲಿಗೆ ನೇರವಾಗಿ ಕಮ್ಯೂನಿಕೇಟ್ ಮಾಡುತ್ತೆ. ಇದ್ರಿಂದಾಗಿ, ರೈಲುಗಳು ನಡುವೆಯೇ ನೇರವಾದ ಸಂಪರ್ಕ ಬೆಳೆದು, ಕಮ್ಯೂನಿಕೇಶನ್ ಮತ್ತಷ್ಟು ಸುಲಭವಾಗಲಿದೆ. ಇದ್ರಿಂದಾಗಿ ನಾಲ್ಕೂವರೆಯಿಂದ ಐದು ನಿಮಿಷಗಳದ್ದ ಹೆಡ್‌ವೇ ಸಮಯ ಕೇವಲ ಎರಡೂವರೆ ನಿಮಿಷಗಳಿಗೆ ಇಳಿಯಲಿದೆ.
ಹಾಲಿ ರೈಲುಗಳಲ್ಲಿಯೂ ಈ ತಂತ್ರಜ್ಞಾನ ಅಳವಡಿಕೆ ಸಾಧ್ಯ..!
ಸುಮಾರು 55 ರೈಲುಗಳು ಹೊಸದಾಗಿ ಮೆಟ್ರೋಗೆ ಸೇರ್ಪಡೆಯಾಗುತ್ತಿದೆ. ಅವುಗಳಲ್ಲಿ ಈ ತಂತ್ರಜ್ಞಾನವನ್ನು ಮುಂಚಿತವಾಗಿಯೇ ಅಳವಡಿಸಲಾಗಿರುತ್ತೆ. ಉಳಿದಂತೆ ಹಾಲಿ ಇರೋ ರೈಲುಗಳಲ್ಲಿಯೂ ಈ ಟೆಕ್ನಾಲಜಿಯನ್ನು ಅಳವಡಿಸಲಾಗುತ್ತೆ.
ಅಷ್ಟೇ ಅಲ್ಲದೇ, ಕೆಆರ್‌ಪುರಂ - ವೈಟ್‌ಫೀಲ್ಡ್ ಮಾರ್ಗದಲ್ಲಿರೋ ಟ್ರಾಕ್‌ನಲ್ಲಿ ಈಗಾಗಲೇ ಇದಕ್ಕೆ ಬೇಕಿರೋ ಅಗತ್ಯ ಸಿಗ್ನಲಿಂಗ್ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ಒಟ್ನಲ್ಲಿ, ರೈಲುಗಳ ನಡುವಿನ ಅಂತರ ಕಡಿಮೆಯಾದ್ರೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚುತ್ತೆ. ಮೆಟ್ರೋಗೆ ಆದಾಯವೂ ಹೆಚ್ಚುತ್ತೆ. ಜನರ ಉಳಿಯುತ್ತೆ.
ಇದನ್ನೂ ಓದಿ-ಕವಾಡಿಗರಹಟ್ಟಿ ಪ್ರಕರಣ: ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 5 ಲಕ್ಷ ಪರಿಹಾರ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.