ಬೆಂಗಳೂರು: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಮೈಕ್ರೊ ಸಾಲ ಯೋಜನೆಯಡಿ ಅಲ್ಪಸಂಖ್ಯಾತ ಬಡ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಲಿದ್ದು, ಇದಕ್ಕಾಗಿ 23 ಕೋಟಿ ರೂಪಾಯಿಯನ್ನ ನಿಗದಿ ಮಾಡಿದೆ ಎಂದು ನಿಗಮದ ಅಧ್ಯಕ್ಷ ಮುಖ್ತಾರ ಹುಸೇನ್‌ ಪಠಾಣ್ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಬಿಪಿಎಲ್‌ ಕಾರ್ಡ್(BPL)‌ ಹೊಂದಿರುವ 25 ರಿಂದ 50 ವರ್ಷ ವಯೋಮಾನದ ಒಳಗಿನ ಮಹಿಳೆಯರು ತಳ್ಳುವ ಗಾಡಿಯಲ್ಲಿ ವ್ಯಾಪಾರ, ಬೀದಿ ಬದಿ ವ್ಯಾಪಾರ, ಜಾತ್ರೆಗಳಲ್ಲಿ ವ್ಯಾಪಾರ, ಕಿರಾಣಿ ಅಂಗಡಿ, ಅರಿಶಿಣ ಕುಂಕುಮ, ಅಗರಬತ್ತಿ, ಕರ್ಪೂರ, ಫುಟ್‌ಪಾತ್‌ಗಳ ಮೇಲೆ ಕಾಫಿ-ಟೀ, ಎಳನೀರು, ಹೂವಿನ ವ್ಯಾಪಾರ, ಹಣ್ಣು-ತರಕಾರಿ ಮಾರಾಟದಂತಹ ಚಟುವಟಿಕೆಗಳನ್ನ ನಡೆಸಲು ಅಲ್ಪಾವಧಿ ಸಾಲ ನೀಡಲಾಗುತ್ತೆದೆ.


ಸಧ್ಯ ಆರಂಭಿಕ ಬಂಡವಾಳವಾಗಿ 10 ಸಾವಿರ ರೂಪಾಯಿ ಅಲ್ಪಾವಧಿ ಸಾಲ ನೀಡಲಾಗುವುದು. ಇದರಲ್ಲಿ 8 ಸಾವಿರ ರೂಪಾಯಿ ಸಾಲ ಮತ್ತು 2 ಸಾವಿರ ರೂಪಾಯಿ ಸಬ್ಸಿಡಿಯಾಗಿರುತ್ತದೆ ಎಂದರು. ಇನ್ನು ಈ ಯೋಜನೆಯಡಿ ಸುಮಾರು 23 ಸಾವಿರ ಮಹಿಳೆಯರಿಗೆ ಸಾಲ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.


ಸಾಲ ಪಡೆಯಲು ಆಸಕ್ತಿ ಇರುವ ಮಹಿಳೆಯರು ಮೈಕ್ರೊ ಸಾಲ(ವೈಯಕ್ತಿಕ) ಯೋಜನೆಯ ಅಧಿಕೃತ ವೆಬ್ಸೈಟ್ kmdcmicro.karnataka.gov.in ಗೆ ಅರ್ಜಿ ಸಲ್ಲಿಸಬಹುದು.