ಬೆಂಗಳೂರು:  ಇದರ ಬೆನ್ನಲ್ಲೇ ಇದೀಗ ಸಾರಿಗೆ ನಿಮಗದ ಬಸದ ಗಳು ಸ್ಮಾರ್ಟ್ ಆಗಿ ತಿಂಕ್ ಮಾಡಲು ಮುಂದಾಗಿದೆ. ಅದೇನಂದ್ರೆ ವಾಯುವ ಸಾರಿಗೆ ನಿಗಮದಲ್ಲಿ ಇದೀಗ UPI ಸ್ಕ್ಯಾನ್ ಕೋಡ್ ಮೂಲಕ ಟಿಕೆಟ್ ಪಡೆಯಲು ಅವಕಾಶ ಮಾಡಿಕೊಡಲಾಗ್ತಿದೆ.


COMMERCIAL BREAK
SCROLL TO CONTINUE READING

ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಆಗ್ತಿದ್ದ ಚಿಲ್ಲರೆ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಈ ಸೇವೆ ಒದಗಿಸಲಾಗ್ತಿದೆ ಎಂದು ಸಾರಿಗೆ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಬಸ್ ಗಳಲ್ಲಿ ಟಿಕೆಟ್ ಪಡೆಯಲು ಇನ್ನಷ್ಟು ಅನುಕೂಲ ಮಾಡಿಕೊಟ್ಟಿರುವ ಸಾರಿಗೆ ಇಲಾಖೆ, ಇನ್ಮುಂದೆ ನಿಮ್ಮ ಮೊಬೈಲ್ ನಲ್ಲಿ UPI ಪೇಮೆಂಟ್ ಮಾಡಬಹುದಾಗಿದೆ. 


ಸಧ್ಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಮಾತ್ರ ಆರಂಭ  ಮಾಡಲಾಗ್ತಿದ್ದು, ಇದು ಪ್ರಾಯೋಗಿಕ ಎನ್ನಲಾಗಿದೆ. ಒಂದು ವೇಳೆ ಇದು ಯಶಸ್ವಿಯಾದ್ರೆ ಎಲ್ಲಾ ಸಾರಿಗೆ ನಿಗಮಗಳಲ್ಲೂ UPI (ಪೋನ್ ಪೇ, ಗೂಗಲ್ ಪೇ) ಮೂಲಕ ಪೇಮೆಂಟ್ ಯೋಜನೆ ಜಾರಿ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.


ಇದನ್ನೂ ಓದಿ-ಗುಟ್ಕಾ ಉಗುಳಿದನೆಂದು ಬಸ್ ಗ್ಲಾಸ್ ಒಡೆದು ಪೊಲೀಸ್ ಪೇದೆ ಪುಂಡಾಟ!


UPI ಪೇಮೆಂಟ್ ನಿಂದಾಗುವ  ಅನುಕೂಲಗಳು
*ನಗದು ರಹಿತ ಪಾವತಿ


*ಮೊಬೈಲ್ ನಲ್ಲಿ UPI ಆ್ಯಪ್ ಇದ್ರೆ ಸಾಕು ಬಸ್ ನಲ್ಲಿ ಸಂಚರಿಸಬಹುದು


*ಮೊಬೈಲ್ UPI ಮೂಲಕ ಪೇಮೆಂಟ್ ಮಾಡಿ ಟಿಕೆಟ್ ಪಡೆಯಬಹುದು


* ಚಿಲ್ಲರೆ ಸಮಸ್ಯೆಯಿಂದ ಮುಕ್ತಿ


* ಚಿಲ್ಲರೆ ಇಲ್ಲ ಅನ್ನೋ ಪ್ರಯಾಣಿಕರು ಮತ್ತು ಕಂಡಕ್ಟರ್  ಸಮಸ್ಯೆ ದೂರ


* ಸ್ಟೇಜ್ ಬಂತು ಕಂಡಕ್ಟರ್ ಟಿಕೆಟ್ ನೀಡಿಲ್ಲ ಅನ್ನೋ ಭಯವಿರಲ್ಲ


* ಕಂಡಕ್ಟರ್ ಹಾಗೂ ಪ್ರಯಾಣಿಕರಿಬ್ಬರಿಗೂ ಸಮಯ ಉಳಿತಾಯ


*ಆದಾಯ ಸೋರಿಕೆ ತಡೆಯುವ ಪ್ಲಾನ್


ಇದನ್ನೂ ಓದಿ-ಅಭಿವೃದ್ಧಿ ಕೆಲಸ ಮಾಡುತ್ತಿಲ್ಲವೆಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.