Railway Department: ಬೆಂಗಳೂರು: ರಾಜ್ಯದ ಜನರಿಗೆ ನೈರುತ್ಯ ರೈಲ್ವೇ ಇಲಾಖೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಈ ಮೊದಲು ಪ್ರಯಾಣಿಕರು ಕಾಯ್ದಿರಿಸದ ರೈಲ್ವೆ ಟಿಕೆಟ್ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿಲು ರೈಲ್ವೆ ಇಲಾಖೆ ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಮಾತ್ರ UTS ಆಪ್ ನ ಬಳಕೆಗೆ ಸಿಗುತ್ತಿತ್ತು. ಈ ಮೂಲಕ ಕಾಯ್ದಿರಿಸದ ಟಿಕೆಟ್ ಪಡೆಯುವಲ್ಲಿ ಕನ್ನಡ ಭಾಷೆಗೆ ಅವಕಾಶ ಇರಲಿಲ್ಲ. ಇದೀಗ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ UTS ಆಪ್ ಪ್ರಾದೇಶಿಕ ಭಾಷೆಯಾದ ಕನ್ನಡಕ್ಕೂ ಇದೀಗ ಆದ್ಯತೆ ನೀಡಿದ್ದು, ಪ್ರಯಾಣಿಕರ ಬಳಕೆಗೆ ಅವಕಾಶ ನೀಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿಧಾನಸಭಾ ಚುನಾವಣೆ-2023ರ ಪೂರ್ವ ಸಿದ್ಧತೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಮಿಷನರ್ ಪರಿಶೀಲನೆ


ಜೊತೆಗೆ ಪ್ರಯಾಣಿಕರು ತಾವು ಇರುವ ಸ್ಥಳದಿಂದ 20 ಕಿ.ಮೀ ವ್ಯಾಪ್ತಿಯ ಯಾವುದೇ ನಿಲ್ದಾಣದಿಂದ ಪ್ರಯಾಣಿಸಲು ಈ UTS ಆಪ್ ಮೂಲಕ ಕಾಯ್ದಿರಿಸದ ಟಿಕೆಟ್ ಪಡೆದುಕೊಳ್ಳಬಹುದು ಎಂದು ನೈರುತ್ಯ ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಆ್ಯಪ್ ಬಳಕೆ ಹೇಗೆ ಮಾಡಬೇಕು:


ಪ್ರಯಾಣಿಕರು ಈ UTS ಆಪ್ ನ್ನು ತಮ್ಮ ಮೊಬೈಲ್ ಗೆ ಗೂಗಲ್ ಪ್ಲೇ-ಸ್ಟೋರ್, ವಿಂಡೋಸ್ ಸ್ಟೋರ್ ಹಾಗೂ ಐಪೋನ್ ಪೋನ್ ಬಳಕೆದಾರರು ಆಪಲ್ ಸ್ಟೋರ್ ಮೂಲಕ ಡೌನಲೋಡ್ ಮಾಡಿಕೊಳ್ಳಬಹುದು. ಲಿಂಕ್: https://play.google.com/store/apps/details?id=com.cris.utsmobile


ಆರ್-ವ್ಯಾಲೆಟ್ ರಿಚಾರ್ಜ್ ಮೇಲೆ 100ಕ್ಕೆ ಶೇ. 3 ರಷ್ಟು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಬೋನಸ್ ನೀಡುತ್ತದೆ. ಪ್ರಯಾಣಿಕರು UTS ಮೊಬೈಲ್ ಅಪ್ಲಿಕೇಷನ್ ಮೂಲಕ ಪ್ರಯಾಣದ ಸಾಮಾನ್ಯ ಬುಕ್ಕಿಂಗ್ ಟಿಕೆಟ್, ತ್ವರಿತ ಬುಕ್ಕಿಂಗ್ ಟಿಕೆಟ್, ಪ್ಲಾಟ್ ಫಾರ್ಮ್ ಟಿಕೆಟ್ ಬುಕ್ಕಿಂಗ್, ಸೀಜನ್ ಟಿಕೆಟ್ ಬುಕ್ಕಿಂಗ್, ಕ್ಯೂ-ಆರ್ ಬುಕ್ಕಿಂಗ್ ಜೊತೆಗೆ ಟಿಕೆಟ್ ರದ್ದು ಗೊಳಿಸುವುದು, ಟಿಕೆಟ್ ನ ಸದ್ಯದ ಮಾಹಿತಿ ತಿಳಿಯುವುದು ಸೇರಿದಂತೆ ಇನ್ನೀತರ ಮಾಹಿತಿಯನ್ನು ಈ UTS ಆಪ್ ಒಳಗೊಂಡಿರುತ್ತದೆ.


ಇದನ್ನೂ ಓದಿ:  ಆರು ವರ್ಷದ ಪ್ರೀತಿ ನಿರಾಕರಿಸಿದ್ದಕ್ಕೆ ಪ್ರಿಯತಮ ಆತ್ಮಹತ್ಯೆ


ಸದ್ಯ ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಇಲ್ಲಿಯವರಿಗೆ 6.5 ಲಕ್ಷ ಜನರು UTS ಆಪ್ ಬಳಕೆ ಮಾಡುತ್ತಿದ್ದಾರೆ. ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಲು ರೈಲ್ವೇ ಇಲಾಖೆ ವಿನಂತಿಸಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.