ನವದೆಹಲಿ: ಗೂಗಲ್ ನ  ಕೃತಕ ಬುದ್ಧಿಮತ್ತೆ ಇನ್ನು ಮುಂದೆ ಕೇವಲ ಡ್ರೈವರ್ ಲೆಸ್ ಕಾರುಗಳಿಗೆ ಮಾತ್ರ ಸೀಮಿತವಾಗುವುದಿಲ್ಲ, ಬದಲಾಗಿ ಅದು ಮುಂದೆ ರೋಗಿ ಯಾವಾಗ ಸಾಯಲಿದ್ದಾನೆ ಎನ್ನುವುದನ್ನು ಕೂಡ ಗುರುತಿಸಲಿದೆ.
 
ಬ್ಲೂಮ್ ಬರ್ಗ್ ವರದಿಯ ಪ್ರಕಾರ, ಗೂಗಲ್ ನ ಮೆಡಿಕಲ್ ಬ್ರೈನ್ ತಂಡವು ಆಸ್ಪತ್ರೆಯಲ್ಲಿ ರೋಗಿಯ ಮರಣವನ್ನು ಊಹಿಸುವ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ದಿಪಡಿಸಿದೆ. ಇದು ಅಲ್ಗಾರಿದಮ್ ಮೂಲಕ ರೋಗಿ ಯಾವಾಗ ಸಾಯಲಿದ್ದಾನೆ ಎನ್ನುವುದನ್ನ ಪತ್ತೆ ಹಚ್ಚಲಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಅಂತಿಮ ಹಂತದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವ ಮಹಿಳೆಗಯನ್ನು ಪ್ರಾಯೋಗಿಕವಾಗಿ ಬಳಸಿದಾಗ, ಆಕೆ ಆಸ್ಪತ್ರೆಯಲ್ಲಿರುವಾಗ ಅವಳ ಸಾವಿನ ಸಾಧ್ಯತೆ ಶೇಕಡ 9.3 ರಷ್ಟು ಇತ್ತು ಎಂದು ಹೇಳಲಾಗಿತ್ತು, ಆದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ, ಗೂಗಲ್ ಕೃತಕ ಬುದ್ದಿಮತ್ತೆ  ಆಕೆಯ ಸಾವಿನ ಅಪಾಯವನ್ನು 19.9 ಪ್ರತಿಶತದಲ್ಲಿ ಅಂದಾಜು ಮಾಡಿದೆ.


ಆ ಮೂಲಕ ಗೂಗಲ್ ಅಂದಾಜಿಸಿದ ಸಾವಿನ ಸಾಧ್ಯತೆ ಹೆಚ್ಚು ನಿಖರವಾಗಿದೆ ಎಂದು ಬ್ಲೂಮ್ ಬರ್ಗ್ ತನ್ನ ವರದಿಯಲ್ಲಿ ತಿಳಿಸಿದೆ.