ಬೆಂಗಳೂರು : ಹಲವು ತಿಂಗಳುಗಳಿಂದ ಬಿಡುಗಡೆಯಾಗದ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕ ಗೌರವ ಧನವನ್ನು ಸರ್ಕಾರ ಕಡೆಗೂ ಬಿಡುಗಡೆ ಮಾಡಿದೆ. 


COMMERCIAL BREAK
SCROLL TO CONTINUE READING

ಹಲವು ಕಾರಣಗಳಿಂದ ಪಾವತಿಯಾದ ಗೌರವಧನದ ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಎನ್‌ಇಟಿ/ ಎಸ್‌ಎಲ್‌ಇಟಿ ಹಾಗೂ ಪಿ.ಎಚ್‌ಡಿ ವಿದ್ಯಾರ್ಹತೆ ಹೊಂದಿರುವವರಿಗೆ 13 ಸಾವಿರ ರೂ. ಹಾಗೂ ಸ್ನಾತಕೋತ್ತರ ಪದವಿ ಪಡೆದ (ಕನಿಷ್ಠ ಶೇ.55 ಅಂಕ) ಅತಿಥಿ ಉಪನ್ಯಾಸಕರಿಗೆ 11 ಸಾವಿರ ರೂ. ನಂತೆ ಅತಿಥಿ ಉಪನ್ಯಾಸಕರು ನಿರ್ವಹಿಸಿರುವ ಅವಧಿಗೆ ಆಧಾರದ ಮೇಲೆ ಗೌರವಧನ ಪಾವತಿಸಲು ಪ್ರಾಂಶುಪಾಲರಿಗೆ ಸೂಚಿಸಲಾಗಿದೆ.


2017-18 ಹಾಗೂ 2018-19ನೇ ಸಾಲಿನ ಹಿಂಬಾಕಿ ಸೇರಿ 2019-20ನೇ ಸಾಲಿಗೆ ಒಟ್ಟು 18,24,45,264 ರೂ.ಗಳನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಗೆ ಬಿಡುಗಡೆ ಮಾಡಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.