ಬೆಂಗಳೂರು: ಎಲ್ಲಾ ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ನಲ್ಲಿ ತೊಡಗಿಕೊಳ್ಳಬೇಕೆಂಬ ಉದ್ದೇಶದಿಂದ ಎನ್‌ಎಸ್‌ಎಸ್‌ನನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಯುವಜನ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.


COMMERCIAL BREAK
SCROLL TO CONTINUE READING

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಷ್ಟ್ರೀಯ ಸೇವಾ ಯೋಜನಾ ಕೋಶ ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಎನ್‌ಎಸ್‌ಎಸ್‌ ಗೆ ಹೆಚ್ಚಾಗಿ ಬಡ ಮತ್ತು ಮಧ್ಯಮದ ವರ್ಗದ ವಿದ್ಯಾರ್ಥಿಗಳೇ ಸೇರುತ್ತಾರೆ. ಅನುಕೂಲಸ್ಥ ವಿದ್ಯಾರ್ಥಿಗಳು ಇದರಿಂದ ದೂರು ಉಳಿಯುತ್ತಿದ್ದಾರೆ. ಇವರು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಿದಾಗ ಸಂಸ್ಕಾರ, ಸಂಸ್ಕೃತಿ ನಡವಳಿಕೆಯ ಜ್ಞಾನವಿರಬೇಕು. ಹೀಗಾಗಿ ಎನ್‌ಎಸ್‌ಎಸ್‌ ಕಡ್ಡಾಯಗೊಳಿಸಿದರೆ ಎಲ್ಲರೂ ಪಾಲ್ಗೊಳ್ಳಬೇಕಿರುತ್ತದೆ. ಹಿಂದೆಲ್ಲ ಎನ್‌ಸಿಸಿ ಕಡ್ಡಾಯವಿತ್ತು ಎಂದರು. ಅದೇ ಮಾದರಿಯಲ್ಲಿ ಇದನ್ನೂ ಕಡ್ಡಾಯಗೊಳಿಸಿದರೆ ಉತ್ತಮ‌ ಎಂದು ಅಭಿಪ್ರಾಯಪಟ್ಟರು. 


ಎನ್‌ಎಸ್‌ಎಸ್‌ ಅನ್ನು ಬದಲಿಸುವ ಅಗತ್ಯವಿದೆ: 
ಸಭೆಯಲ್ಲಿ ಯುವಕರಿಗೆ ಅನುಕೂಲವಾಗುವ ರೀತಿ ಕ್ರಿಯಾತ್ಮಕ ಸಲಹೆ ಬಂದಿದೆ. ಕಾನೂನು, ಸಂಸ್ಕೃತಿ, ಭವಿಷ್ಯ, ಕೌಶಲ್ಯಾಭಿವೃದ್ಧಿ, ಉದ್ಯೋಗದ ಬಗ್ಗೆ ಎನ್‌ಎಸ್ಎಸ್‌ ನಲ್ಲೇ ಅರಿವು ಮೂಡಿಸುವ ಬಗ್ಗೆ ಸಲಹೆ ಬಂದಿದೆ. ಎನ್‌ಎಸ್‌ಎಸ್‌ನನ್ನು ಬಲಿಷ್ಠಗೊಳಿಸಲು ಸಮಿತಿ ರಚಿಸಿ ಅಂತಿಮ‌ ನಿರ್ಧಾರ ಮಾಡಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.‌


ಪ್ರವಾಹ ಪೀಡಿತ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು: 
ಕೊಡಗಿನ ಜನರ ನೆರವಿಗೆ ಮಂಗಳೂರು‌ ಸೇರಿದಂತೆ ಹತ್ತಿರದ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಧಾವಿಸಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಹಳೇ ವಿದ್ಯಾರ್ಥಿಗಳು ಕೂಡ ವಿವಿಧ ಭಾಗದಿಂದ ತೆರಳಿದ್ದಾರೆ. ಎಲ್ಲಾ ಕಾಲೇಜು ವಿದ್ಯಾರ್ಥಿಗಳ ಭಾಗವಹಿಸುವಿಕೆ ಬಗ್ಗೆ ವಿಶ್ವವಿದ್ಯಾಲಯ ಕುಲಪತಿಗಳೊಂದಿಗೆ ಚರ್ಚಿಸಲಾಗುವುದು ಎಂದರು.