ಬೆಂಗಳೂರು: ಆಗಸ್ಟ್ 31 ಕ್ಕೆ ಕರ್ನಾಟಕ ರಾಜ್ಯಪಾಲರಾದ ಡಾ. ವಜೂಭಾಯ್ ವಾಲಾ ಅವರ ಅಧಿಕಾರಾವಧಿ ಅಂತ್ಯವಾಗಲಿದ್ದು, ರಾಜ್ಯಕ್ಕೆ ಶೀಘ್ರವೇ ನೂತನ ರಾಜ್ಯಪಾಲರು ನೇಮಕವಾಗುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಸೆಪ್ಟೆಂಬರ್ 1, 2014 ರಂದು ಕರ್ನಾಟಕ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದ ಡಾ. ವಜೂಭಾಯ್ ವಾಲಾ ಅವರ ಐದು ವರ್ಷಗಳ ಅಧಿಕಾರದ ಅವಧಿ ಇದೇ ಆಗಸ್ಟ್ 31 ಕ್ಕೆ ಕೊನೆಯಾಗಲಿದೆ.


ಈ ಮೊದಲು ಮುಂದಿನ ರಾಜ್ಯಪಾಲರ ರೇಸ್ ನಲ್ಲಿ ಮೂವರು ಮಹಿಳೆಯರ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತು. ಆದರೆ ಸುಷ್ಮಾ ಸ್ವರಾಜ್ ಅವರ ನಿಧನದಿಂದಾಗಿ, ಇದೀಗ ಉಮಾಭಾರತಿ ಅಥವಾ  ಸುಮಿತ್ರ ಮಹಾಜನ್ ರಾಜ್ಯದ ರಾಜ್ಯಪಾಲರಾಗಿ ನೇಮಕವಾಗುವ ಸಾಧ್ಯತೆ ಇದೇ ಎಂದು ಹೇಳಲಾಗುತ್ತಿದೆ.


ಶೀಘ್ರವೇ ಕೇಂದ್ರ ಸರ್ಕಾರದಿಂದ ರಾಜ್ಯಪಾಲರ ಅಧಿಕೃತ ಆಯ್ಕೆಯಾಗಲಿದ್ದು ಕರ್ನಾಟಕದ ಮುಂದಿನ ರಾಜ್ಯಪಾಲರು ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.