ಬೆಂಗಳೂರು: ಕೊನೆಗೂ ರಾಜ್ಯ ಸರ್ಕಾರಿ ನೌಕರಿಗೆ ಸಿಹಿ ಸುದ್ದಿಯೊಂದನ್ನು ಕಾಂಗ್ರೆಸ್- ಜೆಡಿಎಸ್ ಸರ್ಕಾರದ  ನೇತೃತ್ವದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಹಾಗಾದರೆ ಅದೆನಂತೀರಾ? 6 ನೇ ವೇತನ ಆಯೋಗದ ಶಿಫಾರಿಸ್ಸಿನ ಅನ್ವಯ  ಸರಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಮಾಡಲು ಆದೇಶ ಹೊರಡಿಸಿದೆ.ಆ ಮೂಲಕ ಸುಮಾರು ಆರು ಲಕ್ಷ ನೌಕರರು ಇದರ ಲಾಭವನ್ನು ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ. ಸರ್ಕಾರದ ಈ ಆದೇಶದಂತೆ  ಮೂಲವೇತನದಲ್ಲಿ  ಶೇ 1.75 ರಷ್ಟು ಹೆಚ್ಚಳವಾಗಲಿದೆ ಎಂದು ತಿಳಿದುಬಂದಿದೆ. ಈ ಆದೇಶದಂತೆ ಈಗ  ಕಳೆದ ಎಪ್ರಿಲ್ 1ರಿಂದ ಜಾರಿಗೆ ಬರುವಂತೆ ವೇತನ ಮತ್ತು ಭತ್ಯೆಯನ್ನು  ಪರಿಷ್ಕರಿಸಲಾಗಿದೆ ಎನ್ನಲಾಗಿದೆ.


ಗ್ರಾಹಕ ಬೆಲೆ ಸೂಚಂಕದಲ್ಲಿ ಹೆಚ್ಚಳವಾಗಿದ್ದರ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಅದರನ್ವಯ ಈಗ ಅದು ತುಟ್ಟಿ ಭತ್ಯೆಯನ್ನು ಹೆಚ್ಚಿಸಿದೆ.ಈಗ ಸರ್ಕಾರದ ಈ ನಿರ್ಧಾರವು ಪ್ರಮುಖವಾಗಿ ಸರ್ಕಾರಿ ನೌಕರರು, ಪಿಂಚಣಿದಾರಿಗೆ ಅನ್ವಯವಾಗಲಿದೆ