Gowri And Ganesh Festival 2023: ಗೌರಿ ಹಾಗೂ ಗಣೇಶ ಹಬ್ಬಕ್ಕೂ ಬೆಲೆ ಏರಿಕೆ ಶಾಕ್!
Gowri And Ganesh Festival 2023: ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂ ಹೆಚ್ಚು ಬಾರದಿರುವ ಕಾರಣ ಅದರ ಬೆಲೆ ತುಸು ಜಾಸ್ತಿ ಇದೆ. ಕೆಜಿ ಮಲ್ಲಿಗೆಗೆ 800 ರಿಂದ 1000 ರೂ. ಇದ್ದು, ಸಂಜೆ ಅಥವಾ ಹಬ್ಬದ ದಿನ 1,200 ರಿಂದ 1,400 ರೂ.ಗೆ ಏರುವ ಸಾಧ್ಯತೆ ಇದೆ ಎಂದು ಜಿ.ಎಂ.ದಿವಾಕರ್ ತಿಳಿಸಿದ್ದಾರೆ.
ಬೆಂಗಳೂರು: ಸೋಮವಾರದ ಗೌರಿ ಹಬ್ಬ ಹಾಗೂ ಗಣೇಶ ಚತುರ್ಥಿಯನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆಚರಿಸಲು ನಾಗರಿಕರು, ಗಣೇಶ ಮೂರ್ತಿ ಪ್ರತಿಷ್ಠಾಪಕರು ಸಿದ್ಧತೆ ನಡೆಸಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೂವು, ಹಣ್ಣು ಹಾಗೂ ತರಕಾರಿ ಬೆಲೆ ಕಡಿಮೆ ಇದ್ದು, ಕೆ.ಆರ್.ಮಾರುಕಟ್ಟೆಯಲ್ಲಿ ಗ್ರಾಹಕರು ಕೆಜಿಗಟ್ಟಲೇ ಹೂ-ಹಣ್ಣುಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಕಂಡು ಬಂತು.
ಹಬ್ಬದ ನಿಮಿತ್ತ ನಗರದ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ, ಬಸವನಗುಡಿ, ಜಯನಗರ ಸೇರಿದಂತೆ ಇತರೆ ಮಾರುಕಟ್ಟೆಯಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಜನದಟ್ಟಣೆ ಇದೆ. ಗೌರಿ-ಗಣೇಶನ ಮೂರ್ತಿಗಳ ಖರೀದಿ ಜೊತೆಗೆ ಹಬ್ಬಕ್ಕೆ ಬೇಕಾದ ಪದಾರ್ಥಗಳನ್ನು ಜನರು ಖರೀದಿಸುತ್ತಿದ್ದಾರೆ.
ಇದನ್ನೂ ಓದಿ: ಕಾವೇರಿ ನೀರು:ಯಡಿಯೂರಪ್ಪನವರದ್ದು ರಾಜಕೀಯ ಹೇಳಿಕೆ-ಸಿಎಂ ಸಿದ್ದರಾಮಯ್ಯ
ಸಾಮಾನ್ಯವಾಗಿ ಹಬ್ಬದ ಸಂದರ್ಭಗಳಲ್ಲಿ ಎಲ್ಲೆಡೆ ಹೂ-ಹಣ್ಣುಗಳ ಬೆಲೆ ಗಗನಕ್ಕೇರುತ್ತಿತ್ತು. ಆದರೆ ಈ ಬಾರಿ ಸರಿಯಾದ ಸಮಯಕ್ಕೆ ಮಳೆ ಬರದೆ, ಫಸಲು ತಡವಾಗಿ ಬಂದ ಕಾರಣ ದರದಲ್ಲಿ ಕೊಂಚ ಏರಿಕೆಯೂ ಕಂಡಿದೆ. 1 ಕೆಜಿ ಸೇವಂತಿಗೆ ನೂರಾರು ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಕೇವಲ 40 ರಿಂದ 50 ರೂ.ಗೆ ದೊರೆಯುತ್ತಿದೆ.
ಈ ಬಾರಿ ಬಹುತೇಕ ರೈತರು ವರಮಹಾಲಕ್ಷ್ಮೀ ಹಬ್ಬದ ದೃಷ್ಟಿ ಇಟ್ಟುಕೊಂಡು ಹೂ ಬೆಳೆದಿದ್ದರು. ಮಳೆ ಇಲ್ಲದ ಕಾರಣ ಸರಿಯಾದ ಫಸಲು ಬರಲಿಲ್ಲ. ವಾರದಿಂದಲೂ ಎಲ್ಲೆಡೆ ಮಳೆಯಾದ ಕಾರಣ ನಿರೀಕ್ಷೆಗೂ ಮೀರಿ ಹೂ ಮಾರುಕಟ್ಟೆಗೆ ಹೂ ಬಂದಿತ್ತು. ಇದರಿಂದ ಬೆಲೆ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಬ್ಬದಲ್ಲಿ ಹೂ ಇಷ್ಟು ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವುದು ಗ್ರಾಹಕರಲ್ಲಿ ಖುಷಿ ತಂದರೆ, ಬೆಳೆಗಾರರಿಗೆ ಭಾರೀ ನಷ್ಟವನ್ನುಂಟು ಮಾಡಿದೆ ಎಂದು ಕೆ.ಆರ್.ಮಾರುಕಟಟ್ಟೆಯ ಸಗಟು ಹೂ ಮಾರಾಟಗಾರರ ಸಂಘದವರು ಮಾಹಿತಿ ನೀಡಿದ್ದಾರೆ.
ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂ ಹೆಚ್ಚು ಬಾರದಿರುವ ಕಾರಣ ಅದರ ಬೆಲೆ ತುಸು ಜಾಸ್ತಿ ಇದೆ. ಕೆಜಿ ಮಲ್ಲಿಗೆಗೆ 800 ರಿಂದ 1000ರೂ. ಇದ್ದು, ಸಂಜೆ ಅಥವಾ ಹಬ್ಬದ ದಿನ 1,200 ರಿಂದ 1,400 ರೂ.ಗೆ ಏರುವ ಸಾಧ್ಯತೆ ಇದೆ ಎಂದು ಜಿ.ಎಂ.ದಿವಾಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ಟೆಂಡರ್ ಆಗದ ಕಾರಣ ವಿಪಕ್ಷ ನಾಯಕನ ಆಯ್ಕೆ ನಡೆದಿಲ್ಲ: ಸಚಿವ ಶಿವರಾಜ್ ತಂಗಡಗಿ
ಹೂಗಳ ಬೆಲೆ | ದರ (ಪ್ರತಿ ಕೆಜಿಗೆ) |
ಸೇವಂತಿ | 50 ರಿಂದ 60 ರೂ. |
ಚೆಂಡು ಹೂ | 30 ರೂ. |
ಮಲ್ಲಿಗೆ | 800 ರಿಂದ 1000 ರೂ. |
ಸುಗಂಧರಾಜ | 300 ರೂ. |
ಕನಕಾಂಬರ | 700 ರೂ. |
ಹಣ್ಣುಗಳ ಬೆಲೆ | (ಪ್ರತಿ ಕೆಜಿಗೆ) |
ಏಲಕ್ಕಿ ಬಾಳೆ | 90 ರಿಂದ 110 ರೂ. |
ಮೂಸಂಬಿ | 70 ರೂ. |
ದಾಳಿಂಬೆ | 150 ರೂ. |
ಸೇಬು | 120 ರಿಂದ 150 ರೂ. |
ಸೀಬೆ ಹಣ್ಣು | 50 ರೂ. |
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.