ಗೌರಿ ಹತ್ಯೆ: ಎಸ್ಐಟಿ ತಂಡಕ್ಕೆ ತಲೆನೋವಾದ ಫೇಕ್ ಕಾಲ್ಸ್
ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಕೋರಿದ್ದ ಎಸ್ಐಟಿ ತಂಡಕ್ಕೆ ಈಗ ಅದೇ ತಲೆನೋವಾಗಿ ಪರಿಣಮಿಸಿದೆ.
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನವನ್ನು ಗೃಹ ಸಚಿವರು ಘೋಷಿಸಿದ್ದರು. ಅಂತೆಯೇ ಎಸ್ಐಟಿ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು.
ಪ್ರಕರಣದ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ 9480800202 ಸಂಖ್ಯೆಯ ಮೊಬೈಲ್ ನಂಬರ್ ನಂಬರ್ ಅನ್ನು ನೀಡಿತ್ತು. ಆದರೆ ಈಗ ಎಸ್ಐಟಿ ತಂಡಕ್ಕೆ ಅದೇ ತೊಂದರೆಯಾಗ ತೊಡಗಿದೆ.
ಪೊಲೀಸರು ನೀಡಿದ್ದ ನಂಬರ್ ಗೆ ಫೇಕ್ ಕಾಲ್ ಗಳ ಸುರಿಮಳೆ ಬರಲಾರಂಭಿಸಿದೆ. ಸಾರ್ವಜನಿಕರು ಮಾಹಿತಿ ನೀಡುವ ಬದಲು ಸಲಹೆ ನೀಡ ತೊಡಗಿದ್ದಾರೆ. ಶನಿವಾರ ಒಂದೇ ದಿನದಲ್ಲಿ ಸುಮಾರು 55 ಫೇಕ್ ಕಾಲ್ ಗಳು ಎಸ್ಐಟಿ ತಂಡಕ್ಕೆ ಬಂದಿರುವುದಾಗಿ ತಂಡ ಹೇಳಿದೆ.
ಬಂದ ಕರೆಗಳೆಲ್ಲವು ಸಲಹೆ ಹಾಗೂ ಫೆಕ್ ಕಾಲ್ ಗಳು, ಕೆಲವು ಮಂದಿ ನೀಡಿದ ಮಾಹಿತಿಗೆ ಸಾಕ್ಷಿ ಕೇಳಿದರೆ ಕಾಲ್ ಕಟ್ ಮಾಡುತ್ತಿರುವುದಾಗಿ ತಂಡ ತಿಳಿಸಿದೆ.
ಅನಗತ್ಯ ಕಾಲ್ ಗಳಿಂದ ತಲೆಬಿಸಿಯಾದ ಎಸ್ಐಟಿ ಟೀಂ ಘಟನೆ ಬಗ್ಗೆ ಮಾಹಿತಿ ಇದ್ದರೆ ಮಾತ್ರ 9480800202 ಸಂಖ್ಯೆಯ ಮೊಬೈಲ್ ನಂಬರ್ ಗೆ ಕಾಲ್ ಮಾಡುವಂತೆ ಮನವಿ ಮಾಡಿದೆ.