ಬೆಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಕೋಮುವಾದಿ ಸರ್ಕಾರವಾಗಿದ್ದು, ಸಿದ್ದರಾಮಯ್ಯ ಆಡಳಿತ ಮುಸ್ಲಿಂ ಸಮುದಾಯದವರಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಒದಗಿಸುವುದಾಗಿ ಭರವಸೆ ನೀಡಿ ಮೂರ್ಖರನ್ನಾಗಿ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು. 


COMMERCIAL BREAK
SCROLL TO CONTINUE READING

ನಗರದ ಮುರುಗೇಶ್‌ ಪಾಳ್ಯದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಭಾಷಣ ಮಾಡಿದ ರಾಜನಾಥ್‌ ಸಿಂಗ್‌, "ಇಲ್ಲಿ ಕಾಂಗ್ರೆಸ್ ಸರ್ಕಾರ ಕರ್ನಾಟಕ ಸಮುದಾಯವನ್ನು ಒಡೆದು ಆಳಲು ಬಯಸಿದೆ'' ಎಂದು ಆರೋಪಿಸಿದರು. 


ಉತ್ತರ ಕರ್ನಾಟಕದ 18 ವರ್ಷದ ಯುವಕ ಪರೇಶ್ ಮೆಸ್ತಾ ಮತ್ತು ಪತ್ರಕರ್ತ ಗೌರಿ ಲಂಕೇಶ್ ಅವರ ಕೊಲೆಗಳನ್ನು ಪರಿಹರಿಸುವಲ್ಲಿ ಆಗುತ್ತಿರುವ ವಿಳಂಬದ ಕುರಿತಾಗಿ ಪ್ರಶ್ನಿಸಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಪ್ರಶ್ನಿಸಿದಾಗ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕೂಡಲೇ ರಾಜ್ಯದಲ್ಲಿ ಶಾಂತಿ ಕಾಪಾಡುತ್ತೇವೆ ಮತ್ತು ದುಷ್ಕರ್ಮಿಗಳನ್ನು ಮಟ್ಟ ಹಾಕುತ್ತೇವೆ ಎಂದು ಸಿಂಗ್ ಹೇಳಿದರು.


"ಪರೇಶ್ ಮೆಸ್ತಾ ಇತ್ತೀಚೆಗೆ ಕೊಲೆಯಾದ. ಈ ಕೊಲೆ ಪ್ರಕರಣಗಳಲ್ಲಿ ಈ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಗೌರಿ ಲಂಕೇಶ್ ಅವರನ್ನು ಕೊಲ್ಲಲಾಯಿತು. ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಈ ಎಲ್ಲಾ ಹತ್ಯೆ ಪ್ರಕರಣಗಳನ್ನು ಎಲ್ಲಾ ರೀತಿಯಲ್ಲೂ ವಿಚಾರಣೆ ನಡೆಸುತ್ತೇವೆ. ಅಪರಾಧಿಗಳಿಗೆ ಶಿಕ್ಷೆಯಾಗುವುದು ಖಂಡಿತ. ನಾವು ಯಾರನ್ನೂ ಉಳಿಸುವುದಿಲ್ಲ ಎಂದು ಭರವಸೆ ನೀಡುತ್ತೇನೆ" ಎಂದು ಅವರು ಹೇಳಿದರು.