ಪಾತಪಾಳ್ಯ ಗ್ರಾಮ ಪಂಚಾಯಿತಿ: ಪಾತಪಾಳ್ಯ ಪಿಡಿಒ ಭಾಗ್ಯಲಕ್ಷ್ಮೀ ಮತ್ತು ಕಾರ್ಯದರ್ಶಿ ಗೋವಿಂದಪ್ಪ ಅವರು ಜನರ ಕೆಲಸ ಕಾರ್ಯಗಳನ್ನು ಮಾಡದೆ, ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ ಬೇಸತ್ತು ಸದಸ್ಯ ಮಹೇಶ್ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು.


COMMERCIAL BREAK
SCROLL TO CONTINUE READING

ಬ್ಯಾಂಕ್‌ನಲ್ಲಿ ಸಾಲ ಮತ್ತು ವಿವಿಧ ಸೌಲಭ್ಯಗಳಿಗೆ ಅಗತ್ಯವಾದ ಇ-ಸ್ವತ್ತುಗಳನ್ನು ಕೊಡಲು ಅಧಿಕಾರಿಗಳು 50 ರೂ. ಸರ್ಕಾರಿ ಶುಲ್ಕ ಪಡೆದು ನೀಡಬೇಕು. ಆದರೆ ಅರ್ಜಿದಾರರಿಂದ 10 ರಿಂದ 15 ಸಾವಿರ ರೂ. ಲಂಚ ಪಡೆದು 6 ತಿಂಗಳಾದರೂ ಮನೆ ಮತ್ತು ನಿವೇಶನಗಳ ಇ-ಸ್ವತ್ತು ಹಾಗೂ ಖಾತೆ ಮಾಡಿಕೊಡದೆ ಜನರಿಗೆ ತೊಂದರೆ ನೀಡುತ್ತಿದ್ದಾರೆ. 


ಇದನ್ನೂ ಓದಿ-ರಾಜ್ಯದ ರಸ್ತೆ ಸಾರಿಗೆ ನಿಗಮಗಳಿಗೆ 5600 ಬಸ್‌ ಖರೀದಿ : ಸಿಎಂ ಸೂಚನೆ 


ಕಚೇರಿಗೆ ಪಿಡಿಒ ಮತ್ತು ಕಾರ್ಯದರ್ಶಿ ಸಮಯಕ್ಕೆ ಸರಿಯಾಗಿ ಬಾರದೆ, ಸಾರ್ವಜನಿಕರ ಕೆಲಸ ನಿರ್ವಹಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸದಸ್ಯ ಮಹೇಶ್ ದೂರಿದರು. ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಗ್ರಾಪಂ ಕಚೇರಿಗೆ ಸದಸ್ಯ ಮಹೇಶ್ ಬೀಗ ಜಡಿದು ಪ್ರತಿಭಟನೆ ನಡೆಸಿದರು.


ಇದನ್ನೂ ಓದಿ-ಇಂದು ಪೊಲೀಸ್ ಸಂಸ್ಮರಣಾ ದಿನಾಚರಣೆ


ಸಂಧಾನ ಅವ್ಯವಹಾರಗಳನ್ನು ಯತ್ನ


ಪಾತಪಾಳ್ಯ ಗ್ರಾಪಂ ಕಾರ್ಯಾಲಯದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಜನಸಾಮಾನ್ಯರಿಗೆ ಗೊತ್ತಾಗಬೇಕು. ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬಂದು ಜನರ ಕೆಲಸ ಮಾಡಿಕೊಡುತ್ತಿಲ್ಲ, ಸದಸ್ಯರ ಮಾತಿಗೆ ಮನ್ನಣೆ ಕೊಡುತ್ತಿಲ್ಲ, ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಕೆಲ ಸದಸ್ಯರು ಕುಣಿಯುತ್ತಿದ್ದಾರೆ. ಎಂದು ಪಾತಪಾಳ್ಯ ಗ್ರಾಮ ಪಂಚಾಯತಿ ಅಧ್ಯಕ್ಷರ ಬೆಂಬಲಿಗ ಸದಸ್ಯ ಮಹೇಶ್ ರವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು


ಪಾತಪಾಳ್ಯ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬಹಿರಂಗಗೊಳಿಸಿದರೆ ಪಂಚಾಯಿತಿ ಮಾನ ಹರಾಜು ಆಗುತ್ತದೆ. ಮೌನವಾಗಿರಿ ಎಲ್ಲವನ್ನೂ ಸರಿಪಡಿಸುತ್ತೇವೆಂದು ರಾಜಕೀಯ ಪಕ್ಷದ ಕೆಲ ಮುಖಂಡರು, ಒಂದು ಗುಂಪಿನ ಸದಸ್ಯರು ಪಂಚಾಯಿತಿ ಅಧಿಕಾರಿಗಳ ಪರ ಲಾಬಿಗೆ ಮುಂದಾಗಿ, ಗಲಾಟೆಯ ಮಧ್ಯಸ್ಥಿಕೆಗೆ ಮತ್ತು ಸಂಧಾನಕ್ಕೆ ಪ್ರತಿಭಟನಾನಿರತ ಸದಸ್ಯ ಮಹೇಶ್ ಅವರನ್ನು ಕಚೇರಿಯೊಳಗೆ ಎಳೆದೊಯ್ದ ಪ್ರಸಂಗ ನಡೆಯಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.