ಶ್ರವಣಬೆಳಗೊಳದಲ್ಲಿ ಮಾಂಸದಂಗಡಿಗಳಿಗೆ ಬ್ರೇಕ್ ಹಾಕಿದ ಗ್ರಾಮ ಪಂಚಾಯತಿ..!

ಬೆಂಗಳೂರು: ಶ್ರವಣಬೆಳಗೊಳದಲ್ಲಿ ಇದೆ ತಿಂಗಳು ಮಹಾಮಸ್ತಾಭಿಷೇಕ ನಡೆಯುತ್ತಿರುವ ಹಿನ್ನಲೆಯಲ್ಲಿ ಇಲ್ಲಿನ ಗ್ರಾಮ ಪಂಚಾಯತಿಯು ಮಾಂಸಹಾರಿ ಹೋಟೆಲ್ ಗಳನ್ನು ಬಂದ ಮಾಡುವಂತೆ ಆದೇಶ ಹೊರಡಿಸಿದೆ.
ಈ ನೋಟಿಸ್ ನ್ನು ಪಂಚಾಯತ್ ಅಭಿವೃದ್ದಿ ಅಧಿಕಾರಿಯ ಮೂಲಕ ಹೋಟೆಲ್ ಗಳಿಗೆ ರವಾನಿಸಲಾಗಿದೆ.ಮಹಾಮಸ್ತಾಭಿಷೆಕದ ಹಿನ್ನಲೆಯಲ್ಲಿ ಫೆಬ್ರುವರಿ 1 ರಿಂದ ಮಾರ್ಚ್ 1 ರವರೆಗೆ ಮಾಂಸಹಾರಿ ಹೋಟೆಲಗಳನ್ನು ನಡೆಸದಂತೆ ಸೂಚನೆ ನೀಡಲಾಗಿದೆ.