ಬೆಂಗಳೂರು: ಕಾಂಗ್ರೇಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸಾಂಪ್ರದಾಯಿಕ ರಾಜಕಾರಣವನ್ನು ತಿರಸ್ಕರಿಸಿ ಪರ್ಯಾಯ ರಾಜಕೀಯವನ್ನು ರಾಜ್ಯದಲ್ಲಿ ಹುಟ್ಟುಹಾಕಲು ಜಾರಿಗೆ ಬಂದಂತಹ ಜನಾಂದೋಲನಗಳ ಮಹಾಮೈತ್ರಿಯು ಈಗ ಚುನಾವಣೆಗೆ ಪೂರಕವಾದ ಸಿದ್ದತೆಯನ್ನು ನಡೆಸಿದೆ.


COMMERCIAL BREAK
SCROLL TO CONTINUE READING

ಅದರ ಭಾಗವಾಗಿ ಇದೇ ಫೆ.24 ಭಾನುವಾರದಂದು ಕೂಡಲ ಸಂಗಮದಲ್ಲಿ 'ಸಂಕಲ್ಪ ಸಭೆ'ಯನ್ನು ಹಮ್ಮಿಕೊಂಡಿದೆ. ಈ ಸಂಕಲ್ಪ ಸಭೆಯಲ್ಲಿ ಜನಾಂದೋಲನ ಮಹಾಮೈತ್ರಿಯ ಭಾಗವಾಗಿರುವ ಎಲ್ಲ ಪ್ರಗತಿಪರ ಸಂಘಟನೆಗಳು ಭಾಗವಹಿಸಲಿವೆ ಎಂದು ತಿಳಿದುಬಂದಿದ್ದು. ಇನ್ನೆರಡು ತಿಂಗಳಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಇರುವುದರಿಂದ, ಇದಕ್ಕೆ ಸಂಬಂಧಿಸಿದ ಹಾಗೆ ರೂಪುರೇಷೆಗಳನ್ನು ಸಿದ್ದಪಡಿಸಲು ಈ ಸಭೆಯನ್ನು ಕರೆಯಲಾಗಿದೆ ಎಂದು ತಿಳಿದುಬಂದಿದೆ.