ಬೆಂಗಳೂರು: ಇಂದು ತಮ್ಮ ಚೊಚ್ಚಲ ಬಜೆಟ್ (Karnataka Budget 2022) ಮಂಡಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಬೆಂಗಳೂರಿನ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. 


COMMERCIAL BREAK
SCROLL TO CONTINUE READING

ಬೆಂಗಳೂರು ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಈ ಬಾರಿಯ ಬಜೆಟ್​ನಲ್ಲಿ 11,250 ಕೋಟಿ ರೂ. ಮೀಸಲಿಡಲಾಗಿದೆ. ನಮ್ಮ ಮೆಟ್ರೋ (Namma Metro) ರೈಲು ಯೋಜನೆ ವಿಸ್ತರಣೆ ಸ್ಕೀಮ್‌ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.


ಇದನ್ನೂ ಓದಿ: ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ತಗುಲಿದ ಗುಂಡು , ಕೈವ್‌ನ ಆಸ್ಪತ್ರೆಗೆ ದಾಖಲು


15 ಸಾವಿರ ಕೋಟಿ ವೆಚ್ಚದಲ್ಲಿ ಹೊಸ ಮೆಟ್ರೋ ಮಾರ್ಗಕ್ಕೆ DPR ತಯಾರಿ ನಡೆಸಲಾಗಿದೆ. 55 ಕೋಟಿ ವೆಚ್ಚದಲ್ಲಿ ಹೊಸ ಮೆಟ್ರೋ ನಿಲ್ದಾಣಗಳ ಸಂಪರ್ಕ ಕಾಮಗಾರಿ ನಡೆಯಲಿದೆ ಎಂದು ಬಜೆಟ್ ನಲ್ಲಿ ತಿಳಿಸಿದರು.


ವೈಟ್‌ಫೀಲ್ಡ್‌, ಕೆ.ಆರ್.ಪುರಂ, ಬೈಯ್ಯಪ್ಪನಹಳ್ಳಿ, ಯಶವಂತಪುರ ನಿಲ್ದಾಣ, ಜ್ಞಾನಭಾರತಿ, ಯಲಹಂಕ ರೈಲು ನಿಲ್ದಾಣಕ್ಕೆ ಮೆಟ್ರೋ ರೈಲು (Metro Rail) ನಿಲ್ದಾಣ ಸಂಪರ್ಕಕ್ಕೆ ಮೆಟ್ರೋ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಬಜೆಟ್​ನಲ್ಲಿ ಘೋಷಿಸಿದರು.


ಸಿಲ್ಕ್‌ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ (Kempegowda International Airport) ನಿಲ್ದಾಣಕ್ಕೆ ಮೆಟ್ರೋ ಮಾರ್ಗ 2025ರೊಳಗೆ ಪೂರ್ಣವಾಗಲಿದೆ. ಹೆಬ್ಬಾಳದಿಂದ ಜೆ.ಪಿ.ನಗರದವರೆಗೆ ಮೆಟ್ರೋ ಮಾರ್ಗ ಹಾಗೂ ಹೊಸಳ್ಳಿಯಿಂದ ಕಡಬಗೆರೆವರೆಗೆ ಮೆಟ್ರೋ ಮಾರ್ಗಗಳಿಗೆ ಡಿಪಿಆರ್ ಸಲ್ಲಿಸಲಾಗುವುದು. 3ನೇ ಹಂತದ ಮೆಟ್ರೋ ಕಾಮಗಾರಿಗೆ DPR ಸಲ್ಲಿಸುತ್ತೇವೆ. ಅದಕ್ಕಾಗಿ ಅಂದಾಜು ಮೊತ್ತ 11,250 ಕೋಟಿ ರೂ., 37 ಕಿ.ಮೀ. ಉದ್ದದ ಮೆಟ್ರೋ ಮಾರ್ಗಕ್ಕೆ ಡಿಪಿಆರ್, ಸರ್ಜಾಪುರದಿಂದ ಅಗರ, ಡೇರಿ ಸರ್ಕಲ್, ಹೆಬ್ಬಾಳ ಮಾರ್ಗಕ್ಕೆ 15 ಸಾವಿರ ಕೋಟಿ ರೂಪಾಯಿಯ ಡಿಪಿಆರ್ ಸಲ್ಲಿಸುತ್ತೇವೆ. ಬನಶಂಕರಿಯಲ್ಲಿ 45 ಕೋಟಿ ವೆಚ್ಚದ ಸ್ಕೈವಾಕ್ ನಿರ್ಮಾಣ ಮಾಡಲಾಗುವುದು. ಮೆಟ್ರೋ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಾಮಗಾರಿಗೆ 55 ಕೋಟಿ ರೂ. ವೆಚ್ಚ ತಗುಲುವುದು ಎಂದರು. 


2022-23ನೇ ಸಾಲಿನಲ್ಲಿ 33 ಕಿ.ಮೀ ಮೆಟ್ರೋ ಮಾರ್ಗ ನಿರ್ಮಿಸಲಾಗುವುದು. ಸೆಂಟ್ರಲ್ ಸಿಲ್ಕ್ ಬೋರ್ಡ್​ನಿಂದ (Silk Board) ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ 58.19 ಕಿ.ಮೀ ಮೆಟ್ರೋ ಕಾಮಗಾರಿ ಆರಂಭವಾಗಿದ್ದು, 2025ರೊಳಗೆ ಪೂರ್ಣಗೊಳ್ಳಲಿದೆ. ಮೂರನೆ ಹಂತದ ಮೆಟ್ರೋ ಯೋಜನೆಯನ್ನು 11,250 ಕೋಟಿ ರೂ ವೆಚ್ಚದಲ್ಲಿ ಕೇಂದ್ರದ ಅನುಮೋದನೆಗೆ ಸಲ್ಲಿಸಲಾಗುವುದು ಎಂದು ಬಜೆಟ್ ನಲ್ಲಿ ಹೇಳಿದರು.


ಇದನ್ನೂ ಓದಿ:Virat Kohli's 100th Test: ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯಕ್ಕಾಗಿ ಕ್ರೀಡಾಂಗಣ ತಲುಪಿದ ಅನುಷ್ಕಾ, ವಿಶೇಷ ಕ್ಯಾಪ್ ನೀಡಿ ಗೌರವಿಸಿದ ದ್ರಾವಿಡ್


ಹೆಬ್ಬಾಳದಿಂದ-ಜೆ‌ಪಿ ನಗರದವರೆಗೆ 32 ಕಿ.ಮೀ ರಿಂಗ್ ರಸ್ತೆ ಮಾರ್ಗ, ಹೊಸಹಳ್ಳಿಯಿಂದ-ಕಡಬಗೆರೆಗೆ 13 ಕಿ.ಮೀ ಮಾರ್ಗ ನಿರ್ಮಿಸಲಾಗುವುದು. 37 ಕಿ.ಮೀ ಉದ್ದದ ಸರ್ಜಾಪುರ, ಅಗರ, ಕೋರಮಂಗಲ, ಡೈರಿ ವೃತ್ತದ ಮೂಲಕ ಹೆಬ್ಬಾಳದವರೆಗೆ 15 ಸಾವಿರ ವೆಚ್ಚದಲ್ಲಿ 36 ಕಿ.ಮೀ ಹೊಸಮಾರ್ಗಕ್ಕೆ ಡಿಪಿಆರ್ ತಯಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಜೆಟ್​ನಲ್ಲಿ ಘೋಷಿಸಿದರು.


ಬನಶಂಕರಿ ಜಂಕ್ಷನ್ ನಲ್ಲಿ 45 ಕೋಟಿ ವೆಚ್ಚದಲ್ಲಿ ಸ್ಕೈವಾಕ್ (ಪಾದಾಚಾರಿ-ರಸ್ತೆಬದಿ ವ್ಯಾಪಾರಿಗಳ ಸುರಕ್ಷತೆ ಹಾಗೂ ಮೆಟ್ರೋ ನಿಲ್ದಾಣವನ್ನು- ಬಸ್ ನಿಲ್ದಾಣ ದೊಂದಿಗೆ ಸಂಪರ್ಕಿಸಲು) ವ್ಯವಸ್ಥೆ ಕಲ್ಪಿಸಲಾಗುವುದು. ವೈಟ್ ಫೀಲ್ಡ್, ಕೆ.ಆರ್ ಪುರಂ, ಯಶವಂತಪುರ, ಜ್ಞಾನಭಾರತಿ, ಯಲಹಂಕ ನಿಲ್ದಾಣಗಳಲ್ಲಿ 55 ಕೋಟಿ ರೂ ವೆಚ್ಚದಲ್ಲಿ ರೈಲ್ವೆಯೊಂದಿಗೆ ಮೆಟ್ರೋ ನಿಲ್ದಾಣದ ಸಂಪರ್ಕದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.