ದಾವಣಗೆರೆ : ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವಕ್ಕೆ ಬೆಣ್ಣೆ ನಗರಿಯಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ದಾವಣಗೆರೆ ಹೊರಭಾಗದ  50 ಎಕರೆ ಜಾಗದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಸಧ್ಯ ವೇದಿಕೆಯ ಶೇ.50 ರಷ್ಟು ನಿರ್ಮಾಣ ಕಾರ್ಯ ಪೂರ್ಣವಾಗಿದೆ. 


COMMERCIAL BREAK
SCROLL TO CONTINUE READING

ಇಂದು ಅಮೃತ ಮಹೋತ್ಸವ ಸಮಿತಿ ನಾಯಕರಾದ ಮಾಜಿ ಸಚಿವರಾದ ಎಚ್ ಸಿ ಮಹದೇವಪ್ಪ, ಎಚ್ ಎಂ ರೇವಣ್ಣ, ಬಿಎಲ್ ಶಂಕರ್, ಶಾಸಕ ಬೈರತಿ ಸುರೇಶ್ ಹಾಗೂ ಸ್ಥಳೀಯ ಮುಖಂಡರು ಕಾರ್ಯಕ್ರಮ ಸಿದ್ಧತೆ ಪರಿಶೀಲಿಸಿದರು. 


[[{"fid":"250617","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದನ್ನೂ ಓದಿ : DK Shivakumar : 'ಒಬ್ಬ ಹೋಮ್‌ ಮಿನಿಸ್ಟರ್, ಪಕ್ಷ ಅಂತ ತೊಗೊಂಡರೇ ರಾಜ್ಯ ಉಳಿಯಲು ಸಾಧ್ಯವಿಲ್ಲ'


ಕಾರ್ಯಕ್ರಮಕ್ಕೆ 8 ರಿಂದ 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಹೀಗಾಗಿ, ಕಾರ್ಯಕ್ರಮ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ, ವಾಹನಗಳು ಹಾಗೂ ಜನರ ಸಂಚಾರ, ಮುಖ್ಯ ವೇದಿಕೆ, ಆಸನಗಳು ಸೇರಿದಂತೆ ಪ್ರಮುಖ ಸಿದ್ಧತೆಗಳ ಪರಿಶೀಲನೆ ಮಾಡಿದರು. 


ಭದ್ರತೆ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಜೊತೆ ಚರ್ಚಿಸಿ ಸೂಕ್ತ ಬಂದೋಬಸ್ತ್ ಒದಗಿಸುವಂತೆ ಎಸ್ಪಿಗೆ ಮನವಿ ಮಾಡಿದರು. ನಂತರ ಎಸ್ಪಿ ರಿಷ್ಯಂತ್ ಕಾರ್ಯಕ್ರಮದ ಬ್ಲೂ ಪ್ರಿಂಟ್ ಪರಿಶೀಲನೆ ಮಾಡಿದರು. 


[[{"fid":"250619","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.