ಸಾರಿಗೆ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಸಾರಿಗೆ ಸಂಸ್ಥೆಗಳಲ್ಲಿ ಕಳೆದ 8 ವರುಷಗಳಿಂದ ಅಂದರೆ 2016 ರಲ್ಲಿನ ನೇಮಕಾತಿ ನಂತರ ಯಾವುದೇ ನೇಮಕಾತಿ ಆಗಿರಲಿಲ್ಲ. ಈ ಸಂಬಂಧ 4 ಸಾರಿಗೆ ಸಂಸ್ಥೆಗಳಲ್ಲಿ 2016 ರಿಂದ ಇಲ್ಲಿಯವರೆಗೆ ಸಿಬ್ಬಂದಿಗಳ ನಿವೃತ್ತಿ ಹಾಗೂ ಇತರೆ ಕಾರಣಗಳಿಂದ 13669
ಬೆಂಗಳೂರು: ಸಾರಿಗೆ ಸಂಸ್ಥೆಗಳಲ್ಲಿ ಕಳೆದ 8 ವರುಷಗಳಿಂದ ಅಂದರೆ 2016 ರಲ್ಲಿನ ನೇಮಕಾತಿ ನಂತರ ಯಾವುದೇ ನೇಮಕಾತಿ ಆಗಿರಲಿಲ್ಲ. ಈ ಸಂಬಂಧ 4 ಸಾರಿಗೆ ಸಂಸ್ಥೆಗಳಲ್ಲಿ 2016 ರಿಂದ ಇಲ್ಲಿಯವರೆಗೆ ಸಿಬ್ಬಂದಿಗಳ ನಿವೃತ್ತಿ ಹಾಗೂ ಇತರೆ ಕಾರಣಗಳಿಂದ 13669
ಖಾಲಿ ಹುದ್ದೆಗಳಿದ್ದವು.
ಈ ಬಗ್ಗೆ 13000 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸಾರಿಗೆ ಸಂಸ್ಥೆಗಳಿಗೆ ಅನುಮತಿ ನೀಡುವಂತೆ ಸರ್ಕಾರವನ್ನು ಕೋರಲಾಗಿತ್ತು.ಅದರಂತೆ ಮೊದಲನೇ ಹಂತದಲ್ಲಿ 6500 ಚಾಲನಾ ಸಿಬ್ಬಂದಿಗಳಿಗೆ ಹಾಗೂ 300 ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರದಿಂದ ಅನುಮತಿ ದೊರಕಿದೆ. ಸಂಸ್ಥೆವಾರು ನೇಮಕಾತಿ ವಿವರ ಈ ಕೆಳಕಂಡಂತಿದೆ.
KSRTC: ಡ್ರೈವರ್ ಕಮ್ ಕಂಡಕ್ಟರ್ : 2000
ತಾಂತ್ರಿಕ ಸಿಬ್ಬಂದಿ : 300
NWKRTC : ಡ್ರೈವರ್ ಕಮ್ ಕಂಡಕ್ಟರ್ 2000
BMTC : ಕಂಡಕ್ಟರ್ 2500
KKRTC ಅಲ್ಲಿ ಈಗಾಗಲೇ 1619 ಚಾಲನಾ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಚಾಲನಾ ಪರೀಕ್ಷೆ ನಡೆಯುತ್ತಿದ್ದು, ಜನವರಿ 2024 ರ ಕೊನೆಯಲ್ಲಿ ಅಂತಿಮ ಆಯ್ಕೆಪಟ್ಟಿ ಬಿಡುಗಡೆಗೊಳಿಸಲಾಗುವುದು ಹಾಗೂ KKRTC ಯಲ್ಲಿ 300 ಕಂಡಕ್ಟರ್ ಗಳ ನೇಮಕಾತಿಗೆ ಅನುಮತಿ ದೊರಕಿದ್ದು, ಅಧಿಸೂಚನೆ ಹೊರಡಿಸುವ ಹಂತದಲ್ಲಿದೆ. ಒಟ್ಟಾರೆ 8719 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಚಾಲನೆ ದೊರಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.