ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗೃಹಜ್ಯೋತಿ ಗ್ಯಾರಂಟಿ ಖಚಿತವಾಗಿದೆ. ಆದ್ರೆ ಹಲವು ವರ್ಷಗಳಿಂದ ಸಿಗುತ್ತಿದ್ದ ಒಂದು‌ ಪ್ರೋತ್ಸಾಹ ಧನಕ್ಕೆ ಫುಲ್ ಸ್ಟಾಪ್ ಬಿದ್ದಿದೆ. ವಿದ್ಯುತ್ ‌ಬಿಲ್‌ ಕಟ್ಟುವಾಗ ಈ ಪ್ರೋತ್ಸಾಹ ಧನ ಸಹ ಬಿಲ್ ನಲ್ಲಿ ಕಟ್ ಆಗ್ತಿತ್ತು. ಅದಕ್ಕೆ ಈಗ ಬ್ರೇಕ್ ಬಿದ್ದಿದೆ. ಗೃಹಜ್ಯೋತಿ ಗ್ಯಾರಂಟಿ ಖಚಿತವಾಗಿದ್ದು ಒಂದ್ ಕಡೆ ಜನರಿಗೆ ಖುಷಿ ಕೊಟ್ಟಿದೆ. ಆದರೆ ಈಗ ಕೆ ಇ ಆರ್ ಸಿ ಸೋಲಾರ್ ಪ್ರೋತ್ಸಾಹ ಧನಕ್ಕೆ ಪೂರ್ಣ ವಿರಾಮವಿಟ್ಟಿದೆ‌.


COMMERCIAL BREAK
SCROLL TO CONTINUE READING

ಸೋಲಾರ್ ಇನ್ಸೆಂಟೀವ್ ಗೆ ಬ್ರೇಕ್ ಹಾಕಿದ್ದು ಗ್ರಾಹಕರಿಗೆ ಬಿಗ್ ಶಾಕ್ ತಂದಿದೆ. ಅಂದ ಹಾಗೆ2007 ರಿಂದ ಸೋಲಾರ್ ವಾಟರ್ ಹೀಟರ್ ಬಳಕೆಯನ್ನ ಪ್ರೋತ್ಸಾಹಿಸಲು ಪ್ರೋತ್ಸಾಹ ಧನ‌ ನೀಡಲಾಗುತ್ತಿತ್ತು.


ಒಂದು ಯೂನಿಟ್ ಗೆ 50 ಪೈಸೆಯಂತೆ ಗರಿಷ್ಠ 50 ರೂಪಾಯಿವರೆಗೆ ಇನ್ಸೆಂಟೀವ್ಸ್ ನೀಡಲಾಗುತ್ತಿತ್ತು. ಈಗ ಅದನ್ನ ತೆಗೆದುಹಾಕಲಾಗಿದೆ.ಇನ್ನು ಪ್ರತಿ ತಿಂಗಳ ಬಿಲ್ ಅಲ್ಲಿ ಅಡ್ಜಸ್ಟ್ ಮಾಡಿ ಕೊಡ್ತಿದ್ರು. ಈಗ ಅದನ್ನ ತೆಗೆಯಲಾಗಿದೆ.


ಇದನ್ನೂ ಓದಿ: ಹೆಚ್.ಡಿ.ದೇವೇಗೌಡರನ್ನು ಭೇಟಿಯಾದ ಜಮ್ಮು& ಕಾಶ್ಮೀರದ ಮಾಜಿ ಸಿಎಂ


ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಗಳು, 600 ಅಡಿ ಮೋಲ್ಡ್ ಮನೆ ಯಾರು ನಗರಗಳಲ್ಲಿ ಕಟ್ಟಿಸ್ತಾರೆ, ಅಂತಹವರು ಕಡ್ಡಾಯ ಸೋಲಾರ್ ವಾಟರ್ ಹೀಟರ್ ಹಾಕಿಸಬೇಕು ಎನ್ನುವ ನಿಯಮ ಮಾಡಲಾಗಿದೆ. ಇದರಿಂದಾಗಿ  ಏಪ್ರಿಲ್ 1 2023 ರಲ್ಲಿ ರಿವೈಸ್ ಮಾಡಿ ಸೋಲಾರ್ ಇನ್ಸೆಂಟೀವನ್ನ ಕೆ ಇ ಆರ್ ಸಿ ತೆಗೆದು ಹಾಕಿದೆಯಂತೆ.


ಇನ್ನು ಬಹುತೇಕರು ಈಗಾಗಲೇ ಸೋಲರ್ ವಾಟರ್ ಹೀಟರ್ ಇಂಸ್ಟಾಲ್ ಮಾಡಿರೋದ್ರಿಂದ ಈ ನಿರ್ಧಾರಕ್ಕೆ ಬರಲಾಗಿದೆ.ಇದರ ಜೊತೆಗೆ ನೀಡಲಾಗುತ್ತಿದ್ದ ಇನ್ನೂ ಕೆಲ ಸೋಲಾರ್ ಸಬ್ಸಿಡಿಗಳನ್ನೂ ತೆಗೆಯಲಾಗಿದೆ.


ಬೆಸ್ಕಾಂ ನಲ್ಲಿ ಒಟ್ಟು ಎಂಟು ಡಿಸ್ಟಿಕ್ಟ್ ಬರುತ್ತೆ. ಎರಡು ಟಾರೀಫ್ ಗಳಿವೆ. ಅವು ಈ ಎಲ್ ಟಿ ಟಾರೀಫ್ - ಎಚ್ ಟಿ ಟಾರೀಫ್.


( ಎಲ್ ಟಿ ಟಾರೀಫ್)
• ಎಲ್ ಟಿ ೨- ಗೃಹಬಳಕೆ
• ಎಲ್ ಟಿ ೩- ಕಮರ್ಷಿಯಲ್ - ಅಂಗಡಿ ,ಗೋಡೋನ್, ಬಾರ್ ಅಂಡ್ ರೆಸ್ಟೋರೆಂಟ್
• ಎಲ್ ಟಿ೪- ರೈತರ ಪಂಪ್ ಸೆಟ್
• ಎಲ್ ಟಿ ೫- ಇಂಡಸ್ಟ್ರೀಸ್, ಯಾರು ಲೈಸೆನ್ಸ್ ತಗೊಂಡು ಕಾರ್ಖಾನೆ‌ ನಡೆಸುವವರು.
• ಎಲ್ ಟಿ೬ ಎ- ಬಿಬಿಎಂಪಿ,ತಾಲೂಕು ಪಂಚಾಯತ್ ,ಗ್ರಾಮಪಂಚಾಯತ್ ಗಳ ನೀರಿನ ಕನೆಕ್ಷನ್
• ಎಲ್ ಟಿ೬ಬಿ- ಬೀದಿಬದೀಪಗಳು
• ಎಲ್ ಟಿ ೭ - ಟೆಂಪರವರಿ ಕನೆಕ್ಷನ್ ಬಿಲ್ವ.. ವಾ/ಓ: ಇವೇಲ್ಲದ್ರುಗಳ ಸಬ್ಸಿಡಿಗೆ ಬ್ರೃಕ್ ಹಾಕಲಾಗಿದೆ.‌
ಯಾವುದೇ ಹೊರೆ ಆಗುತ್ತೆ ಅನ್ನೋ ಕಾರಣಕ್ಕೆ ಈ ನಿರ್ಧಾರ ಮಾಡಿಲ್ಲ. 2007 ರಲ್ಲಿ ಸೋಲಾರ್ ಬಳಕೆಗೆ ಪ್ರೋತ್ಸಾಹ ನೀಡಲು ಇನ್ಸೆಂಟೀವ್ ನೀಡಲಾಗ್ತಿತ್ತು. ಈಗ ಅದನ್ನೆ ಮತ್ತೆ ಮುಂದುವರೆಸಿದ್ರೇ ಸರಿಯಾಗಲ್ಲ. ಯಾಕಂದ್ರೇ ಈಗಾಗಕೇ ಸೋಲಾರ್ ಕಡ್ಡಾಯ ಮಾಡಿದ್ಮೇಲೆ ಇನ್ಸೆಂಟೀವ್ ಯಾಕೆ ಅನ್ನೋ ನಿರ್ಧಾರಕ್ಕೆ ಬರಲಾಗಿದೆತಂತೆ. ಅದ್ರೇ ಗೃಹಜ್ಯೋತಿ ಆರಂಭವಾದಾಗಲೇ ಸೋಲಾರ್ ಇನ್ಸೆಂಟೀವ್ ಗೆ ಬ್ರೇಕ್ ಬಿದ್ದಿದ್ದು ಗ್ರಾಹಕರಿಗೆ ಹತ್ತಾರು ಪ್ರಶ್ನೆ‌ ಮೂಡಿಸಿದ್ದಂತೂ ಸುಳ್ಳಲ್ಲ..https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.