Gruha Lakshmi Scheme : ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾದಾಗಿನಿಂದಲೂ ಇಲ್ಲಿಯವರೆಗೂ 1.5 ಕೋಟಿ ಗೃಹಿಣಿಯರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ವರದಿ ಮಾಡಲಾಗಿದೆ. ಸದ್ಯ ಮಾಸಿಕ 2000 ಹಣ ಪಡೆಯಲು ರಾಜ್ಯದ ಗೃಹಣಿಯರು ಕಾಯುತ್ತಿದ್ದಾರೆ. ಸದ್ಯ ಮನೆ ಯಜಮಾನಿ ಖಾತೆಗೆ 2000 ಯಾವಾಗ ಬರುತ್ತದೆ ಎನ್ನುವುದರ ಬಗ್ಗೆ ರಾಜ್ಯದ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ಮಾಹಿತಿಯೊಂದನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಗೃಹಲಕ್ಷ್ಮಿ ಯೋಜನೆಗೆ ಅರ್ಹ ಫಲಾನುಭವಿಗಳಿಗೆ ಸಹಾಯವಾಗಲೆಂದು ಸರ್ಕಾರ ಯಾವುದೇ ಅರ್ಜಿ ಶುಲ್ಕವನ್ನು ವಿಧಿಸಿಲ್ಲ. ಉಚಿತವಾಗಿ ಕರ್ನಾಟಕ ಒನ್‌, ಗ್ರಾಮ ಒನ್‌ ಕೇಂದ್ರಗಳಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸದ್ಯ ಯಾವಾಗ ಗೃಹ ಲಕ್ಷ್ಮಿ ಯೋಜನೆಯ ಲಾಭ ಯಾವಾಗ ಸಿಗಲಿದೆ ಎನ್ನುವುದರ ಕುರಿತು ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ. 


ಇದನ್ನೂ ಓದಿ-ಎಲ್ಲಾ ಭಾಗ್ಯವನ್ನು ಕೊಟ್ಟಿರುವ ಸರ್ಕಾರ ಕಾಂಟ್ರ್ಯಾಕ್ಟರ್ ಭಾಗ್ಯವನ್ನೂ ನೀಡಲಿ: ಡಿ.ಕೆಂಪಣ್ಣ


ಗೃಹ ಲಕ್ಷ್ಮಿ ಯೋಜನೆ 2000 ಲಭ್ಯವಾಗುವ ಬಗ್ಗೆ ಘೋಷಣೆ ಹೊರಡಿಸಿದ ಡಿ. ಕೆ ಶಿವಕುಮಾರ್ ಅವರು, ಆಗಸ್ಟ್ 27 ರಂದು ಬೆಳಗಾವಿಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದ್ದು, ರಾಜ್ಯದ 11 ಸಾವಿರ ಕಡೆ ಒಂದೇ ಸಮಯದಲ್ಲಿ ಈ ಯೋಜನೆಗೆ ಚಾಲನೆ ಸಿಗಲಿದೆ ಎಂದಿದ್ದಾರೆ. 


ಈ ಹಿನ್ನಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯತ್, ನಗರ ಸಭೆ, ಪುರಸಭೆಯಲ್ಲಿ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಪಂಚಾಯತಿಗೊಬ್ಬರು ನೋಡಲ್ ಆಫೀಸರ್ ಅನ್ನು ನೇಮಕ ಮಾಡಲಾಗುತ್ತದೆ. ಮತ್ತು ಈ ಕಾರ್ಯುಕ್ರಮವನ್ನು ಪಕ್ಷಾತೀತವಾಗಿ ಆಯೋಜನೆ ಮಾಡಲಾಗುತ್ತಿದೆ. ಹಾಗಾಗಿ ಎಲ್ಲರೂ ಈಕಾರ್ಯಕ್ರಮದಲ್ಲಿ ಭಾಗವಹಿಸಿಬೇಕೆಂದು ಡಿ. ಕೆ ಶಿವಕುಮಾರ್ ಅವರು ಸೂಚಿಸಿದ್ದಾರೆ. 


ಈ ಯೋಜನೆಯ ಲಾಭಪಡೆಯುವ ಫಲಾನುಭವಗಳಿಗೆ ಸರ್ಕಾರ ಪಿಂಕ್ ಸ್ಮಾರ್ಟ್ ಕಾರ್ಡ್ ನೀಡುತ್ತದೆ ಎಂದು ಡಿ. ಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಈ ಕಾರ್ಡ್‌ನಲ್ಲಿ  ಫಲಾನುಭವಿಯರ ವಿವರದ ಜೊತೆಗೆ ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ಸಚಿವರ ಭಾವಚಿತ್ರ ಇರಲಿದೆ. ಹಾಗೆಯೇ ಹಣವನ್ನು ಸಹ ಈ ಕಾರ್ಡ್‌ ಮೇಲೆ ನಮೂದಿಸಿರಲಾಗುತ್ತದೆ. 


ಇದನ್ನೂ ಓದಿ-ಇಂದು ಸ್ಪಂದನಾ ಅಸ್ಥಿ ವಿಸರ್ಜಿಸಲಿರುವ ವಿಜಯ್ ರಾಘವೇಂದ್ರ ಕುಟುಂಬ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.