ಟೋಕನ್ ಪಡೆಯಲು ಹರಸಾಹಸ: ಆಧಾರ್ ತಿದ್ದುಪಡಿಗಾಗಿ ರಾತ್ರಿಯೇ ಬಂದು ಆಧಾರ್ ಸೇವಾಕೇಂದ್ರ ಮುಂದೆ ಮಲಗಿದ ಜನ
ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ `ಪಂಚ ಗ್ಯಾರಂಟಿ` ಯೋಜನೆಗಳಲ್ಲಿ ಯಾವುದೇ ಗ್ಯಾರಂಟಿ ಯೋಜನೆಯ ಫಲಾನುಭವಿ ಆಗಲು ಆಧಾರ್ ತಿದ್ದುಪಡಿ ಅತ್ಯಗತ್ಯವಾಗಿದೆ. ಹೀಗಾಗಿ, ಪ್ರತಿ ದಿನ ಆಧಾರ್ ಸೇವಾ ಕೇಂದ್ರಗಳ ಬಳಿ ಜನ ಜಂಗುಳಿ ನೆರೆದಿದ್ದು ಕೆಲವರಂತೂ ನಿತ್ಯ ಗಂಟೆಗಟ್ಟಲೆ ಕಾದರು ಸಹ ಟೋಕನ್ ಸಿಗದೆ ಬರಿಗೈಯಲ್ಲಿ ಹಿಂದಿರುಗುತ್ತಿದ್ದಾರೆ.
ಚಾಮರಾಜನಗರ: ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಆಧಾರ್ ತಿದ್ದುಪಡಿ ಮಾಡಿಸಲು ಜನಜಾತ್ರೆ ಸೇರುತ್ತಿರುವ ಹಿನ್ನೆಲೆಯಲ್ಲಿ ರಾತ್ರಿಯೇ ಬಂದು ಜನರು ಆಧಾರ್ ಸೇವಾಕೇಂದ್ರದ ಮುಂದೆ ಮಲಗಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ತಾಲೂಕು ಕಚೇರಿಯಲ್ಲಿ ನಡೆದಿದೆ.
ವಾಸ್ತವವಾಗಿ, ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ 'ಪಂಚ ಗ್ಯಾರಂಟಿ' ಯೋಜನೆಗಳಲ್ಲಿ ಯಾವುದೇ ಗ್ಯಾರಂಟಿ ಯೋಜನೆಯ ಫಲಾನುಭವಿ ಆಗಲು ಆಧಾರ್ ತಿದ್ದುಪಡಿ ಅತ್ಯಗತ್ಯವಾಗಿದೆ. ಹೀಗಾಗಿ, ಪ್ರತಿ ದಿನ ಆಧಾರ್ ಸೇವಾ ಕೇಂದ್ರಗಳ ಬಳಿ ಜನ ಜಂಗುಳಿ ನೆರೆದಿದ್ದು ಕೆಲವರಂತೂ ನಿತ್ಯ ಗಂಟೆಗಟ್ಟಲೆ ಕಾದರು ಸಹ ಟೋಕನ್ ಸಿಗದೆ ಬರಿಗೈಯಲ್ಲಿ ಹಿಂದಿರುಗುತ್ತಿದ್ದಾರೆ. ಅವರಲ್ಲಿ, ಕೆಲವು ಮಂದಿ ನಿನ್ನೆ (ಬುಧವಾರ ಜುಲೈ 26, 2023) ರಾತ್ರಿಯೇ ತಾಲೂಕು ಕಚೇರಿ ಮುಂದೆ ಬಂದು ಸರತಿ ಸಾಲಿನಲ್ಲಿ ಕಾಯುತ್ತಿರುವ ದೃಶ್ಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ- ಹನೂರು ಬಳಿಕ ಯಳಂದೂರಲ್ಲಿ ಬಾಲಕನ ಮೇಲೆ ಚಿರತೆ ದಾಳಿ..!
ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಗ್ರಾಮದ ಚೆನ್ನಾಜಮ್ಮ, ಸಿದ್ದಮ್ಮ, ನೇನೆಕಟ್ಟೆ ಗ್ರಾಮದ ಮಾಲೇಗೌಡ, ಬೆಟ್ಟಗೌಡನಹುಂಡಿ ಗ್ರಾಮದ ಬೆಳ್ಳಿಬಸವೇಗೌಡ ಎಂಬವರು ಶಾಲು ಹೊದ್ದು ಬಂದು ಮಲಗಿದ್ದು ಟೋಕನ್ ಗಾಗಿ ಎಷ್ಟು ಪಡಿಪಾಟಲು ಪಡುವ ಪರಿಸ್ಥಿತಿ ಇದೆ ಎಂಬುದಕ್ಕೆ ನಿದರ್ಶನವಾಗಿದೆ.
ಗ್ಯಾರಂಟಿ ಯೋಜನೆಗೇ ಮಾಡಿಸಲೇ ಬೇಕು ಆಧಾರ್ ತಿದ್ದುಪಡಿ!!
ಮೊದಲೇ ತಿಳಿಸಿದಂತೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಗೆ ಫೊನ್ ನಂ, ಪಡಿತರ ಕಾರ್ಡ್ ಗಳಲ್ಲಿ ಯಜಮಾನಿ ಹೆಸರುಗಳನ್ನು ತಿದ್ದುಪಡಿ ಮಾಡಿಸಬೇಕಿದೆ.
ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬ್ಯಾಂಕ್ ವಿವರ, ಮೊಬೈಲ್ ನಂ ಲಿಂಕ್ ಆಗಿರುವ ಆಧಾರ್ ಕಾರ್ಡ್ ಕಡ್ಡಾಯವಾಗಿರುವುದರಿಂದ ಸೇವಾಕೇಂದ್ರದ ಮುಂದೆ ನಿತ್ಯ ಜನಜಾತ್ರೆಯೇ ಬಂದು ಸೇರುತ್ತಿದ್ದು ಟೋಕನ್ ಸಿಗದ ಇವರುಗಳು ರಾತ್ರಿಯೇ ಬಂದು ಮಲಗಿದ್ದಾರೆ.
ಇದನ್ನೂ ಓದಿ- ಶಾಸಕ ಬಿ.ಆರ್ ಪಾಟೀಲ್ ಅವರ ಹೆಸರಲ್ಲಿ ಹರಿಡಾದುತ್ತಿರುವ ಫೇಕ್ ಲೆಟರ್
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ನಮ್ಮ ಗ್ರಾಮದಿಂದ ಪಟ್ಟಣಕ್ಕೆ ಬೆಳ್ಳಂಬೆಳಗ್ಗೆ ಬಸ್ ಇಲ್ಲ. ಎಂಟು ಗಂಟೆ ನಂತರ ಬರುವ ಬಸ್ ನಲ್ಲಿ ಗುಂಡ್ಲುಪೇಟೆ ಗೆ ಆಗಮಿಸುವ ವೇಳೆಗೆ ಆಧಾರ್ ಸೇವಾ ಕೇಂದ್ರದ ಮುಂದೆ ನೂರಾರು ಮಂದಿ ಜಮಾಯಿಸಿ ಕ್ಯೂ ನಲ್ಲಿ ನಿಂತಿರುತ್ತಾರೆ. ನಾಲ್ಕು ದಿನದಿಂದ ನಾವು ಆಧಾರ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಸಲು ತಾಲೂಕು ಕಚೇರಿಗೆ ಅಲೆಯುತ್ತಿದ್ದರೂ ಪ್ರಯೋಜನವಾಗದ ಹಿನ್ನಲೆ ರಾತ್ರಿ ಇಲ್ಲಿಯೇ ಮಲಗುತ್ತಿದ್ದೇವೆ. ಬೆಳಗ್ಗೆ ಮೊದಲನೆಯವರಾಗಿ ನಿಂತು ಟೋಕನ್ ಪಡೆದುಕೊಂಡು ಆಧಾರ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಸುತ್ತೇವೆ ಎಂದು ಆಧಾರ್ ಸೇವಾ ಕೇಂದ್ರದ ಬಳಿ ಮಲಗಿದ್ದ ಮಹಿಳೆಯರು ಅಳಲು ತೋಡಿಕೊಂಡರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.