ಬೆಂಗಳೂರು : ಪಂಚ ಗ್ಯಾರೆಂಟಿಗಳ ಮೂಲಕ ಬಹುಮತ ಸರ್ಕಾರ ರಚಿಸಿದ ಕಾಂಗ್ರೆಸ್ ಈಗ ಐದು ಗ್ಯಾರೆಂಟಿ ಪೈಕಿ ಕೇವಲ ಮೂರು ಗ್ಯಾರೆಂಟಿ ಯೋಜನೆಗಳನ್ನ ಶುಕ್ರವಾರ ಘೋಷಣೆ ಮಾಡಲಿದೆ.


COMMERCIAL BREAK
SCROLL TO CONTINUE READING

ಯಾವ ಗ್ಯಾರೆಂಟಿ ಜಾರಿ ಆಗಲಿವೆ :


ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಂತ್ರಿ ಮಂಡಲ ಸದಸ್ಯರು ಅಧಿಕಾರಿಗಳ ಜೊತೆ ಇಂದು ಗ್ಯಾರಂಟಿ ಸಭೆ ನಡೆಸಿ ಜೂನ್ 2 ರ ಸಂಪುಟ ಸಭೆಯಲ್ಲಿ ಬಹುತೇಕ ಮೂರು ಭರವಸೆಗಳ ಜಾರಿಗೆ ನಿರ್ಧಾರ ಮಾಡಿದ್ದಾರೆ.


ಇದನ್ನೂ ಓದಿ: Rain Alert: ರಾಜ್ಯದಲ್ಲಿ ಇನ್ನೂ 2 ದಿನ ವರುಣಾರ್ಭಟ: ಈ ಜಿಲ್ಲೆಗಳಲ್ಲಿ ಗುಡ್ಡ ಕುಸಿತದ ಭೀತಿ-ಹೈ ಅಲರ್ಟ್ ಘೋಷಿಸಿದ ಇಲಾಖೆ!


ಐದು ಗ್ಯಾರಂಟಿ ಪೈಕಿ ಮಹಿಳೆಯರಿಗೆ ಉಚಿತ ಬಸ್ಸು ಸಂಚಾರ, ಉಚಿತ ಅಕ್ಕಿ ವಿತರಣೆ ಹಾಗೂ ,200 ಯುನಿಟ್ ವಿದ್ಯುತ್ ಮೂರು ಯೋಜನೆ ಜೂನ್ ೨ ರಿಂದಲೆ ಜಾರಿ ಮಾಡಲಾಗುವುದು. ಹಾಗೂ ಯುವ ನಿಧಿಯ ನಿರುದ್ಯೋಗ ಭತ್ಯೆ ಹಾಗೂ ಗೃಹಿಣಿಯರಿಗೆ ಮಾಸಾಶನ ಎರಡು ಭರವಸೆ ತಡವಾಗಲಿದೆ ಎಂದು ತಿಳಿದುಬಂದಿದೆ.


ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪದವಿ ಮುಗಿದ 180 ದಿನದಲ್ಲಿ ಉದ್ಯೋಗ ಸಿಗದಿದ್ದರೆ ಎಂದು ಹೇಳಲಾಗಿದೆ.ಅದರಂತೆ ಈ ಅಕಾಡಮಿಕ್ ಇಯರ್ ನಲ್ಲಿ ಪದವಿ ಮುಗಿದವರಿಗೆ ಹಣ ನೀಡಲು ಇನ್ನೂ ೫ ತಿಂಗಳು ಸಮಯವಕಾಶ ಇದೆ.ಅಷ್ಟರಲ್ಲಿ ನಿಖರವಾದ ಅಂಕಿ ಅಂಶ ಸಂಗ್ರಹಿಸಬಹುದು.ಆದ್ದರಿಂದ ಅದನ್ನ ಮುಂದೂಡಲು ಸಭೆಯಲ್ಲಿ ನಿರ್ಧಾರ ಮಾಡಲು ಅವಕಾಶ ಇದೆ.


ಜೊತೆಗೆ ಮಹಿಳೆಯರಿಗೆ 2000 ಮಾಸಾಶನ ವಿಚಾರದಲ್ಲಿ ಸಮರ್ಪಕವಾಗಿ ಅಂಕಿ ಅಂಶ ಸಂಗ್ರಹಕ್ಕೆ 2 ತಿಂಗಳ ಗಡುವು ನೀಡಲು ತೀರ್ಮಾನ ಮಾಡಲಾಗಿದೆ. ಹೀಗಾಗಿ ಬಹುತೇಕ ಆಗಸ್ಟ್ ನಿಂದ ಮಹಿಳಾ ಮಾಶಾಸನ ಜಾರಿಗೆ ನಿರ್ಧಾರ ಮಾಡಲಾಗಿದೆ.


ಇದನ್ನೂ ಓದಿ: Adipurush Collection: ರಿಲೀಸ್‌ಗೂ ಮುಂಚೆಯೇ 400 ಕೋಟಿ ಗಳಿಸಿದ ಆದಿಪುರುಷ.!


ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ 3 ಗ್ಯಾರಂಟಿ ಘೋಷಣೆಗೆ ಇಂದಿನ ಸಭೆಯಲ್ಲಿ ನಿರ್ಧಾರ ಮಾಡಲಾಗುವುದು. ಈ ನಿರ್ಧಾರವನ್ನು ವಿಪಕ್ಷ ಹಾಗೂ ಜನಸಾಮಾನ್ಯರು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ