ಸಂಘದವರು ಕೇಸರಿ ಶಾಲು ಹಾಕಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡಲಿ : ಹೆಚ್ಡಿಕೆ
ಬೆಲೆ ಏರಿಕೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಜನರ ಶಾಂತಿ ನೆಮ್ಮದಿ ನನಗೆ ಬೇಕಾಗಿರುವುದು. ಯಾರನ್ನು ಮೆಚ್ಚಿಸಲು ನಾನು ಮಾತನಾಡುತ್ತಿಲ್ಲ. ನಾಡಿನ ಸಾಮರಸ್ಯ ಕದಡಲು ಜನರು ಅವಕಾಶ ನೀಡಬಾರದು. ಬಜರಂಗದಳ, ಆರ್‌ಎಸ್ಎಸ್, ವಿಎಚ್‌ಪಿಗೆ ಈ ದೇಶದ ಬಗ್ಗೆ ಅಭಿಮಾನ ಇದ್ದರೆ ಬೆಲೆ ಏರಿಕೆ ವಿರುದ್ಧ ಕೇಸರಿ ಶಾಲು ಧರಿಸಿ ಹೋರಾಟ ಮಾಡಲಿ. ನಿಮ್ಮ ಜೊತೆ ನಾವೂ ಹೋರಾಟ ಮಾಡಲು ತಯಾರಾಗಿದ್ದೇವೆ ಎಂದು ಸವಾಲಾಕಿದರು.
ಬೆಂಗಳೂರು: ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುವುದರ ಬದಲಾಗಿ ಹಲಾಲ್ ಜಟ್ಕಾ ಬಗ್ಗೆ ಹೋರಾಟ ಮಾಡುವುದು ನಿಮ್ಮ ಕೆಲಸವೇ? ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದರು.
ಬೆಲೆ ಏರಿಕೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಜನರ ಶಾಂತಿ ನೆಮ್ಮದಿ ನನಗೆ ಬೇಕಾಗಿರುವುದು. ಯಾರನ್ನು ಮೆಚ್ಚಿಸಲು ನಾನು ಮಾತನಾಡುತ್ತಿಲ್ಲ. ನಾಡಿನ ಸಾಮರಸ್ಯ ಕದಡಲು ಜನರು ಅವಕಾಶ ನೀಡಬಾರದು. ಬಜರಂಗದಳ, ಆರ್‌ಎಸ್ಎಸ್, ವಿಎಚ್‌ಪಿಗೆ ಈ ದೇಶದ ಬಗ್ಗೆ ಅಭಿಮಾನ ಇದ್ದರೆ ಬೆಲೆ ಏರಿಕೆ ವಿರುದ್ಧ ಕೇಸರಿ ಶಾಲು ಧರಿಸಿ ಹೋರಾಟ ಮಾಡಲಿ. ನಿಮ್ಮ ಜೊತೆ ನಾವೂ ಹೋರಾಟ ಮಾಡಲು ತಯಾರಾಗಿದ್ದೇವೆ ಎಂದು ಸವಾಲಾಕಿದರು.
ಇದನ್ನು ಓದಿ: ಸಿಇಟಿ ಪರೀಕ್ಷೆಗೆ ಪಿಯುಸಿ ಅಂಕಗಳ ಪರಿಗಣನೆ: ಮತ್ತೆ ಹಳೆ ನಿಯಮ ಜಾರಿಗೊಳಿಸಿದ ಕೆಇಎ
ಕಳೆದ ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ತೈಲ ದರ ಏರಿಕೆ ಆಗುತ್ತಿದೆ. ಪ್ರತಿದಿನ ಮಾರುಕಟ್ಟೆ ಶೇರು ದರ ಏರಿಕೆ ರೀತಿ ಪೆಟ್ರೋಲ್ ಡೀಸೆಲ್ ದರ ಏರಿಕೆ ಆಗುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 112 ರಷ್ಟು ಆಗಿದೆ. ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಉಚಿತವಾಗಿ ಕೊಡುತ್ತೇವೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಗ್ಯಾಸ್ ಸಿಲಿಂಡರ್ ಬೆಲೆ ಸಾವಿರ ರಷ್ಟಾಗಿದೆ. ಹೀಗಾದರೆ ನಿತ್ಯ ಕೂಲಿ ಮಾಡಿ ಜೀವನ ಮಾಡುವ, ಶ್ರಮಿಕರು, ಕಾರ್ಮಿಕರು, ರೈತರ ಕುಟುಂಬ ಇಷ್ಟು ಹಣ ಕೊಟ್ಟು ಖರೀದಿ ಮಾಡಲು ಸಾಧ್ಯನಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ನಾಯಕರು ಮೈತ್ರಿ ಸರ್ಕಾರದಲ್ಲಿ ಸರಿಯಾದ ರೀತಿಯಲ್ಲಿ ನಡೆದುಕೊಂಡಿದ್ದರೆ ಇಂತಹ ಸರ್ಕಾರ ರಾಜ್ಯದಲ್ಲಿ ಬರುತ್ತಿರಲಿಲ್ಲ ಎಂದು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸದ್ಯದ ಸ್ಥಿತಿಗೆ ಬಿಜೆಪಿಯಷ್ಟು ಕಾಂಗ್ರೆಸ್ ಕೂಡ ಕಾರಣಕರ್ತರು. ನನ್ನನ್ನು ತಾಜ್ ವೆಸ್ಟೆಂಡ್ ಹೋಟೆಲ್ ಸಿಎಂ ಎಂದು ಕರೆಯುತ್ತಿದ್ದ ಕಾಂಗ್ರೆಸ್ ನಾಯಕರು ಎಷ್ಟು ಜನ ಬಡವರಿಗೆ ಸಹಾಯ ಮಾಡಿದ್ದಾರೆ? ದಾಸರಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರ ವಿರುದ್ಧ ವಿನಾಕಾರಣ ಕಿರುಕುಳ ಕೊಡುತ್ತಿದ್ದಾರೆ. ಸದಾ ಬಿಜೆಪಿ ಸರ್ಕಾರ ಇರಲ್ಲ. ಕಾನೂನು ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಕೆಲಸ ಮಾಡಬೇಕು. ಶಾಸಕರಿಗೆ ಮಂತ್ರಿಗಳಿಗೆ ಗುಲಾಮರಾಗಿ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿ: KGF-2 ಮುಂಗಡ ಬುಕ್ಕಿಂಗ್‌ನಿಂದ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ ಗೊತ್ತಾ?
ಬೆಲೆ ಏರಿಕೆ ವಿರುದ್ಧ ಮೆರವಣಿಗೆ ಮಾಡಲು ಅವಕಾಶ ಕೊಡುತ್ತಿಲ್ಲ. ನ್ಯಾಯಾಲಯ ಆದೇಶ ಇದೆ ಎಂದು ಮೆರವಣಿಗೆಗೆ ಅವಕಾಶ ಕೊಡುತ್ತಿಲ್ಲ ಎನ್ನುತ್ತಾರೆ. ಬಿಜೆಪಿ ಶೋಭಾಯಾತ್ರೆಗೆ ಅನುಮತಿ ಇದೆ. ಆದರೆ ಬಡವರ ಪರ ಹೋರಾಟಕ್ಕೆ ಏಕಿಲ್ಲ ಎಂದು ಕಿಡಿಕಾರಿದರು.
ಮೋಹನ್ ದಾಸ್ ಪೈ ಅವರು ಬೆಂಗಳೂರಿನಲ್ಲಿ ಸರಿಯಾದ ಮೂಲಭೂತ ಸೌಕರ್ಯ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಸರ್ಕಾರದಲ್ಲಿ ಹೈಕೋರ್ಟ್ ಹಾಗೂ ಮೋದಿ ಕೆಲಸ ಮಾಡಲು ಸೂಚನೆ ಕೊಡಬೇಕಾದಂತಹ ಪರಿಸ್ಥಿತಿ ಇದೆ. ಗೃಹ ಸಚಿವರು ಟೋಪಿ ಹಾಕಿದಾಗ ಒಂದು ಹೇಳಿಕೆ ಕೊಡುತ್ತಾರೆ. ಟೋಪಿ ತೆಗೆದಾಗ ಒಂದು ಹೇಳಿಕೆ ಕೊಡುತ್ತಾರೆ ಎಂದು ಆರಗ ಜ್ಞಾನೇಂದ್ರ ವಿರುದ್ಧ ಕೆಂಡಕಾರಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.