ಯಾದಗಿರಿ:  ಗ್ರಾಮ ವಾಸ್ತವ್ಯದ ನಿಮ್ಮತ್ತ ಚಂಡ್ರಕಿ ಗ್ರಾಮದಲ್ಲಿ ತಂಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಜನತಾ ದರ್ಶನಕ್ಕಾಗಿ ಮಧ್ಯಾಹ್ನದ ಭೋಜನವನ್ನೂ ತೊರೆದು ಕಾರ್ಯನಿರ್ಹಿಸಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಸಿಎಂ ಕುಮಾರಸ್ವಾಮಿ ಜನತಾ ದರ್ಶನದ ನಿಮಿತ್ತ ಇಡೀ ದಿನ ಶಾಂತಚಿತ್ತರಾಗಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಸ್ವಯಂ ಉದ್ಯೋಗ, ಭೂಮಿ ಮಂಜೂರಾತಿ ,ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಾಶನ,ವಸತಿ ಸೌಕರ್ಯ ಮೊದಲಾದ ಬೇಡಿಕೆಗಳೊಂದಿಗೆ ಬಂದ ಜನರ ಸಂಕಷ್ಟಗಳನ್ನು ಸಹಾನುಭೂತಿಯಿಂದ ಆಲಿಸಿದರು.



ಈ ಮಧ್ಯೆ ವೇದಿಕೆಯ ಮುಂಭಾಗದಲ್ಲಿ ವಿಕಲಚೇತನರು ಜಮಾಯಿಸಿದ್ದನ್ನು ಗಮನಿಸಿದ ಕುಮಾರಸ್ವಾಮಿ ವಿಕಲಚೇತನರು ಕಷ್ಟ ಪಟ್ಟುಕೊಂಡು ಮುಖ್ಯ ವೇದಿಕೆಗೆ ಬರುವುದು ಬೇಡ, ಸ್ವತಃ ತಾವೇ ಅಲ್ಲಿಗೆ ಬರುವುದಾಗಿ ತಿಳಿಸಿದರು. ವೇದಿಕೆಯ ಮುಂಭಾಗದಲ್ಲಿದ್ದ ವಿಕಲಚೇತನರ ಬಳಿ ತೆರಳಿ ಅವರ ಮನವಿಗಳನ್ನು ಪಡೆದು, ಅಹವಾಲುಗಳನ್ನು ಸ್ವೀಕರಿಸಿದರು.ಮುಖ್ಯಮಂತ್ರಿಗಳ ಈ ನಡೆಗೆ ಈಗ ಗ್ರಾಮದ ಜನರು ಮೆಚ್ಚುಗೆ ಸೂಚಿಸಿದ್ದಾರೆ ಎನ್ನಲಾಗಿದೆ. 


ಮಧ್ಯಾಹ್ನದ ಭೋಜನವನ್ನೂ ಸ್ವೀಕರಿಸದ ಮುಖ್ಯಮಂತ್ರಿಗಳು!


ಜನತಾದರ್ಶನದಲ್ಲಿ ನಿರತರಾದ ಮುಖ್ಯಮಂತ್ರಿಗಳು ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದನ್ನು ಕಂಡು, ತಾವು ಎಲ್ಲಿಯೂ ಹೋಗುವುದಿಲ್ಲ ರಾತ್ರಿ 8 ಗಂಟೆಯಾದರೂ ಸರಿ ನಿಮ್ಮ ಮನವಿಗಳನ್ನು ಸ್ವೀಕರಿಸುತ್ತೇನೆ, ಆತುರ ಪಡಬೇಡಿ ಎಂದು ಮನವಿ ಮಾಡಿದರು. ವೇದಿಕೆಯಿಂದ ಕದಲದೇ ಮಧ್ಯಾಹ್ನದ ಭೋಜನವನ್ನೂ ಸ್ವೀಕರಿಸದೇ ಜನತಾ ದರ್ಶನ ನಡೆಸಿದರು.