ಹಂಪಿ: ಯುನೆಸ್ಕೋ ವಿಶ್ವಪರಂಪರೆಯ ತಾಣವಾಗಿರುವ ಹಂಪಿ ವ್ಯಾಪ್ತಿಯಲ್ಲಿ ಸದ್ಯ ಇರುವ ನಾಲ್ಕು ಗ್ರಾಮಗಳಿಂದ 29 ಗ್ರಾಮಗಳವೆರೆಗೆ ಈ ತರುವುದಕ್ಕೆ ಮಾಸ್ಟರ್ ಪ್ಲಾನ್ ವೊಂದನ್ನು ಸಿದ್ದಪಡಿಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಈಗಾಗಲೇ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಈಗಾಗಲೇ ಇದಕ್ಕೊಂದು ಯೋಜನೆಯೊಂದನ್ನು ರೂಪಿಸಿದೆ.ಈ  ಭಾಗಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ  ನಿಯಂತ್ರಣ ತಂದೊಡ್ಡಲು ಈ ಯೋಜನೆಯನ್ನು  2007 ರಲ್ಲಿ  ಹಮ್ಮಿಕೊಂಡಿತ್ತು .ಕರ್ನಾಟಕ ಪಟ್ಟಣ  ಪಟ್ಟಣ ಮತ್ತು ದೇಶ ಯೋಜನೆ ಕಾಯ್ದೆ 1961 ರ ಅಡಿಯಲ್ಲಿ  ಈ ಮಾಸ್ಟರ್ ಪ್ಲಾನ್ ನ್ನು  ಪ್ರತಿ 10 ವರ್ಷಗಳಿಗೊಮ್ಮೆ ಪುನರಾವರ್ತಿಸಬೇಕು.


2007 ರಲ್ಲಿ ಒಟ್ಟು ನಾಲ್ಕು ಗ್ರಾಮಗಳನ್ನು ಮಾತ್ರ ಸೇರಿಸಲಾಗಿತ್ತು ಈಗ ಹೊಸದಾದ ಯೋಜನೆ ಪ್ರಕಾರ ಹೊಸಪೇಟೆ ಮತ್ತು ಗಂಗಾವತಿ ತಾಲೂಕಿನ 29 ಹಳ್ಳಿಗಳನ್ನು ಸೇರಿಸಲಾಗುತ್ತದೆ.ಐತಿಹಾಸಿಕ ಸ್ಥಾನಗಳಿಗೆ ಧಕ್ಕೆ ಬರದದಂತೆ ತಡೆಯಲು ಪ್ರಾಧಿಕಾರ ಈ ಯೋಜನೆಯನ್ನು ರೂಪಿಸಿದೆ.