ಬೆಂಗಳೂರು: ಹಂಪಿಯ ಕನ್ನಡ_ವಿಶ್ವವಿದ್ಯಾಲಯದ ವಿಸ್ತರಣಾ ಕೇಂದ್ರ ಬಾದಾಮಿಯಲ್ಲಿ ನಡೆಸಲಾಗುತ್ತಿರುವ #ಚಿತ್ರಕಲೆ ಹಾಗೂ ಶಿಲ್ಪಕಲೆಯ ನಾಲ್ಕು ವರ್ಷದ ಪದವಿ ಕೋರ್ಸುಗಳ ವ್ಯಾಸಂಗಕ್ಕೆ 2020-21ನೇ ಸಾಲಿಗೆ ಪ್ರವೇಶ ಪ್ರಕ್ರಿಯೆ_ಆರಂಭವಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.


ಯಾವುದೇ ಪರೀಕ್ಷೆ/ ಸಂದರ್ಶನ ಇಲ್ಲದೆ ಸರ್ಕಾರಿ ಉದ್ಯೋಗ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ


COMMERCIAL BREAK
SCROLL TO CONTINUE READING

ಚಿತ್ರಕಲೆ ಹಾಗೂ ಶಿಲ್ಪಕಲೆಯ ನಾಲ್ಕು ವರ್ಷದ ಪದವಿ ತರಗತಿಗಳು ಇನ್ನಿತರ ಸಾಮಾನ್ಯ ಪದವಿಗಳಾದ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಎಸ್.ಡಬ್ಲೂ, ಇನ್ನಿತರ ತತ್ಸಮಾನ ಪದವಿಗಳಂತೆ ಪದವಿ ಹಂತದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳು, ಬ್ಯಾಂಕಿಂಗ್, ಕೆ.ಎ.ಎಸ್, ಐ.ಎ.ಎಸ್, ರೈಲ್ವೆ ಇಲಾಖೆ, ಎಫ್.ಡಿ.ಎ, ಇತರೆ ಬರೆಯಲು ಅವಕಾಶವಿರುತ್ತದೆ. ಅಲ್ಲದೆ ಉನ್ನತ ವ್ಯಾಸಂಗ ಮಾಡಬಯಸುವವರಿಗೆ ಎಂ.ವಿ.ಎ, ಎಂ.ಎಫ್.ಎ, ಎಂ.ಫಿಲ್, ಪಿ.ಹೆಚ್.ಡಿ, ಮತ್ತು ಬೇರೆ ಕ್ಷೇತ್ರಗಳಾದ ಪತ್ರಿಕೋದ್ಯಮ, ಬಿ.ಪಿ.ಎಡ್ ಮುಂತಾದವುಗಳನ್ನು ಕಲಿಯಲು ಅವಕಾಶವಿರುತ್ತದೆ. ಪಿ.ಯು.ಸಿ, ಐ.ಟಿ.ಐ, ಜೆ.ಓ.ಡಿ.ಸಿ ಹಾಗೂ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. 


ಹೆಚ್ಚಿನ_ಮಾಹಿತಿಗಾಗಿ ದೂ.ಸಂ.9449256814, 9448580056, 9886664967 ಗೆ ಸಂಪರ್ಕಿಸಬಹುದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಾದಾಮಿ ಕೇಂದ್ರದ #ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.