ʼಪಾಕಿಸ್ತಾನ್ ಜಿಂದಾಬಾದ್ʼ ಎಂದು ಕೂಗಿದ ದೇಶದ್ರೋಹಿಗಳನ್ನು ನೇಣುಗಂಬಕ್ಕೆ ಏರಿಸಿ: ಬಿಜೆಪಿ ಆಗ್ರಹ
ʼಪಾಕಿಸ್ತಾನ್ ಜಿಂದಾಬಾದ್ʼ ಎಂದು ಕೂಗಿದ ದೇಶದ್ರೋಹಿಗಳನ್ನು ನೇಣುಗಂಬಕ್ಕೆ ಏರಿಸಿ. ʼಪಾಕಿಸ್ತಾನ್ ಜಿಂದಾಬಾದ್ʼ ಎನ್ನುವವರನ್ನು ಪವಿತ್ರ ವಿಧಾನಸೌಧಕ್ಕೆ ಕರೆದುಕೊಂಡು ಬಂದ ನಾಸೀರ್ ಹುಸೇನ್‌ರವರ ರಾಜ್ಯಸಭಾ ಸದಸ್ಯತ್ವವನ್ನು ರದ್ದುಗೊಳಿಸಿʼ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಬೆಂಗಳೂರು: ರಾಜ್ಯದ ಆಡಳಿತ ಸೌಧ ಹಾಗೂ ಶಕ್ತಿ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಪ್ರಕರಣ ಸಂಬಂಧ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಬಿಜೆಪಿ, ʼಪವಿತ್ರ ವಿಧಾನಸೌಧದಲ್ಲಿ ಕಾಂಗ್ರೆಸ್ ರಾಜ್ಯಸಭೆ ಸದಸ್ಯ ಸಯ್ಯದ್ ನಾಸೀರ್ ಹುಸೇನ್ ಅವರ ಪಾ"ಕೈ"ಸ್ತಾನಿ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವುದು ಅಸಲಿ ಎಂದು FSL ವರದಿಯಲ್ಲಿ ಋಜುವಾತಾಗಿದೆʼ ಎಂದು ಹೇಳಿದೆ.
́FSL ವರದಿ ಬರುವ ಮುಂಚಿತವೇ ʼಪಾಕಿಸ್ತಾನ್ ಜಿಂದಾಬಾದ್ʼ ಎಂದು ಕೂಗಿಲ್ಲ ಎಂದು ವಾದಿಸಿದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ #TrollMinister ಪ್ರಿಯಾಂಕ್ ಖರ್ಗೆಯವರು ಈಗ ಏನು ಹೇಳುತ್ತಾರೆ. ʼಪಾಕಿಸ್ತಾನ್ ಜಿಂದಾಬಾದ್ʼ ಎಂದು ಹೇಳುವ ಮನಸ್ಥಿತಿಯುಳ್ಳ ದೇಶದ್ರೋಹಿಗಳನ್ನು ಕಾಂಗ್ರೆಸ್ ರಕ್ಷಿಸಲು ಯತ್ನಿಸಿದ್ದು, ಕಾಂಗ್ರೆಸ್‌ನ ದೇಶದ್ರೋಹಿ ಮನಸ್ಥಿತಿಗೆ ಸಾಕ್ಷಿʼ ಎಂದು ಟೀಕಿಸಿದೆ.
ಕೊಪ್ಪಳದ ಕನಕಗಿರಿಯ ʼಕನಕಗಿರಿ ಉತ್ಸವʼದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ʼಪಾಕಿಸ್ತಾನ್ ಜಿಂದಾಬಾದ್ʼ ಎಂದು ಕೂಗಿದ ದೇಶದ್ರೋಹಿಗಳನ್ನು ನೇಣುಗಂಬಕ್ಕೆ ಏರಿಸಿ. ʼಪಾಕಿಸ್ತಾನ್ ಜಿಂದಾಬಾದ್ʼ ಎನ್ನುವವರನ್ನು ಪವಿತ್ರ ವಿಧಾನಸೌಧಕ್ಕೆ ಕರೆದುಕೊಂಡು ಬಂದ ನಾಸೀರ್ ಹುಸೇನ್‌ರವರ ರಾಜ್ಯಸಭಾ ಸದಸ್ಯತ್ವವನ್ನು ರದ್ದುಗೊಳಿಸಿʼ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ದೇಶದ್ರೋಹಿಗಳನ್ನು ಬಂಧಿಸುವಂತೆ ಆಗ್ರಹ!
ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ನಾಸೀರ್ ಹುಸೇನ್ ಬೆಂಬಲಿಗರು ʼಪಾಕಿಸ್ತಾನ ಜಿಂದಾಬಾದ್ʼ ಎಂದು ಘೋಷಣೆ ಕೂಗಿರುವುದು ದೇಶ ವಿರೋಧಿ ಕೃತ್ಯ. ದೇಶದ್ರೋಹಿ ಘೋಷಣೆ ಕೂಗಿದವರನ್ನು ಬಂಧಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಇದನ್ನೂ ಓದಿ: ʼಕನಕಗಿರಿ ಉತ್ಸವʼದಲ್ಲಿ ಯುವಜನತೆಗೆ ಕಿವಿಮಾತು ಹೇಳಿದ ಸಿಎಂ ಸಿದ್ದರಾಮಯ್ಯ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.