ಹಾವೇರಿ:  ಜಿಲ್ಲೆಯ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ.ಸಂತ್ರಸ್ತೆ ಮಹಿಳೆಗೆ ಹಾವೇರಿ ಮಹಿಳಾ ಸಾಂತ್ವನ ಕೇಂದ್ರದಿಂದ ಶಿಷ್ಟ ಮಾಡ್ತಿದ್ದಂತೆ.ಹಾವೇರಿ ಪೊಲೀಸರಿಗೆ & ರಾಜ್ಯ ಸರ್ಕಾರ ತಲೆನೋವೂಂಟಾದಂತಿದೆ.. ಅದ್ಯಾಕೆ ಅಂತಿರಾ ಈ ಸ್ಟೋರಿ ನೋಡಿ.


COMMERCIAL BREAK
SCROLL TO CONTINUE READING

ಹೌದು, ಹಾವೇರಿ ಜಿಲ್ಲೆ ಶಿರಸಿ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ ಸರ್ಕಾರದ ನಿದ್ದೆ ಗೆಡಸಿದೆ. ಜನವರಿ 8 ರಂದು ನಡದ ಪ್ರಕರಣ ಜನವರಿ 10ಕ್ಕೆ ಪ್ರಕರಣ ಬೆಳಕಿಗೆ ಬರುತ್ತಿದಂತೆ ಹಾನಗಲ್ ಖಾಕಿಪಡೆ ಪ್ರಕರಣ ದಾಖಲಿಸಿ ತನಿಖೆಗೆ ಇಳಿದಿತ್ತು. ಒಂದು ಕಡೆ ಗ್ಯಾಂಗ್‌ ರೇಪ್‌ ಸಂಬಂಧ ಇದುವರೆಗೂ 8 ಜನ ಆರೋಪಿಗಳನ್ನ ಬಂದಿಸಿದ್ದಾರೆ.ಇನ್ನೊಂದು ಕಡೆ ಮಹಿಳಾ ಸಂತ್ರಸ್ತೆಗೆ ತಿಳಿಯದೆ ವಿಚಾರ ನೆಪದಲ್ಲಿ ಏಕಾಏಕಿ ಶಿರಸಿ ಮನೆಗೆ ಪೊಲೀಸರು ಶಿಫ್ಟ್‌ ಮಾಡಿದ್ದಾರೆ. ಮತ್ತೊಂದೆಡೆ ಈ ಕುರಿತು ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಪ್ರಾರಂಭಿಸಿದ್ದಾರೆ. ಇತ್ತ ಮನೆಗೆ ಶಿಷ್ಟ ಮಾಡಿದ ಮಹಿಳೆಯ ಆರೋಗ್ಯ ಸರಿ ಇಲ್ಲ ನಮಗೆ ನ್ಯಾಯ ಬೇಕೆಂದು ಸಂತ್ರಸ್ಥೆ  ಕುಟುಂಬಸ್ಥರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.


ಹಾವೇರಿ ನರಸೀಪುರ ದಲ್ಲಿರುವ ಹೆಲಿಪ್ಯಾಡಗೆ ಬಂದ ಸಿಎಂ ಸಿದ್ದರಾಮಯ್ಯ ಸಂತ್ರಸ್ಥೆ ಮಹಿಳೆ ಪರಿವಾರದ ಮನವಿ ಸ್ವೀಕರಿಸಿದರು.ಈ ಮವನಿ ಮೂಲಕ ಸಂತ್ರಸ್ಥೆ ಮಹಿಳೆಗೆ ನ್ಯಾಯ ನೀಡಬೇಕು. ಮಹಿಳೆಗೆ ಸರ್ಕಾರ ಪರಿಹಾನ ನೀಡಿ ಉದ್ಯೋಗ ನೀಡಬೇಕು ಎಂದು ಮನವಿ ಮಾಡಿದರು. ಇನ್ನು ತಪ್ಪಿತಸ್ಥರಿಗೆ ಶಿಕ್ಷ್ಯೆಯಾಗಿ ಮಹಿಳೆಗೆ ನ್ಯಾಯ ಒದಗಿಸಬೇಕೆಂದು ಸಂತ್ರಸ್ಥೆ ಮಹಿಳೆ ಕುಟುಂಬಸ್ಥರು ಹೇಳಿದರು.


ಇದನ್ನೂ ಓದಿ: ದೆಹಲಿ ಪೊಲೀಸ್ ಅಪರಾಧ ವಿಭಾಗದ ಮೊದಲ ಮಹಿಳಾ ಮುಖ್ಯಸ್ಥೆ ಶಾಲಿನಿ ಸಿಂಗ್ ಯಾರು?


ಇನ್ನೂ ವಿವಿಧ ಕಾರ್ಯಕ್ರಮ ನಿಮಿತ್ತ ಸಿಎಂ ಸಿದ್ದರಾಮಯ್ಯ ಹಾವೇರಿಗೆ ಆಗಮಿಸಿದರು. ಹಾವೇರಿಯ ನರಸೀಪುರ ದಲ್ಲಿರುವ ಹೆಲಿಪ್ಯಾಡಗೆ ಆಗಮಿಸಿದ CM ಸಂತ್ರಸ್ಥೆ ಮಹಿಳೆಯ ಪರಿವಾರಕ್ಕೆ ಭೇಟಿಯಾದರು. ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಗ್ಯಾಂಗ್ ರೇಪ್ ಪ್ರಕರಣ ಆರೋಪಿಗಳ ಬಂಧನವಾಗಿದೆ. ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ಅಂತಾ ಹಿಂತಾ ಯಾವುದೆ ಪ್ರಕರಣಕ್ಕೂ ಸರ್ಕಾರ ಕ್ಷಮಿಸಿಲ್ಲ. ಆರೋಪಿಗಳಿಗೆ ಪೊಲೀಸರು ಬಂಧಿಸಿದ್ದು, ತನಿಖೆ ನಡೆಯಿತ್ತಿದೆ. ರಾಜ್ಯ ಸರ್ಕಾರಕ್ಕೆ ಸಂತ್ರಸ್ಥೆ ಮಹಿಳಿಗೆ ನ್ಯಾಯ ಒದಗಿಸುತ್ತದೆ. ಪರಿಹಾರದ ನೀಡುವ ಕುರಿತು ಅವರ ಮನವಿ ಮಾಡಿದ್ದಾರೆ. ಮನವಿ ಪತ್ರ ಪರಿಶೀಲನೆ ಮಾಡಿ ಅವರಿಗೆ ಪರಿಹಾರ ನೀಡುವ ಬಗ್ಗೆ ಕ್ರಮವಾಗುತ್ತೆ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದರು.


ಇತ್ತ ಸಂತ್ರಸ್ಥೆ ಮಹಿಳೆಯ ಕುರಿತು ಹಾನಗಲ್ ಶಾಸಕ ಮಾನೆ ಪ್ರತಿಕ್ರಿಯಿಸಿ, ಪ್ರಕರಣ ಮಾಹಿತಿ ಪೊಲೀಸರಿಗೆ ತಿಳಿದ ತಕ್ಷಣ. ಶಾಸಕನಾಗಿ ನಾನು ಅವರಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ.‌ ಶಿರಸಿಯ ಸಂತ್ರಸ್ಥ ಮಹಿಳೆಯ ಬೇಟಿಗೆ ನನಗೆ ಆಗಲಿಲ್ಲ ಅಂತಾ ಶಾಸಕ ಶ್ರೀನಿವಾಸ ಮಾನೆ ಹೇಳಿದರು.


ಇದನ್ನೂ ಓದಿPhoto Gallery: ಪ್ರಧಾನಿ ಮೋದಿಯಿಂದ ದೇಶದ ಅತೀ ಉದ್ದದ ಅಟಲ್ ಸೇತುವೆ ಲೋಕಾರ್ಪಣೆ!


ಒಟ್ಟಿನಲ್ಲಿ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ರಾಜಕೀಯ ನಾಯಕ ಗುದ್ದಾಟಕ್ಕೆ ಕಾರಣವಾಗಿದ್ದು. ಪ್ರಕರಣದ ಸತ್ಯಾಸತ್ತತೆ ಪೊಲೀಸರು ತನಿಖೆ ಮಾಡಬೇಕು. ಇತ್ತ ರಾಜ್ಯ ಸರ್ಕಾರ ರಾಜ್ಯದಲ್ಲಿ ಈ ರೀತಿಯ ಕಹಿ ಘಟನೆಗಳಿಗೆ ಬ್ರೇಕ್‌ ಹಾಕಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.