ಬೆಂಗಳೂರು : ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡರ  (Dharme Gowda) ಆತ್ಮಹತ್ಯೆ ಈಗ ರಾಜಕೀಯ ಚರ್ಚೆಯೊಂದಕ್ಕೆ ಕಾರಣವಾಗಿದೆ.  ಆತ್ಮಹತ್ಯೆಗೆ ನಿಖರ ಕಾರಣ  ಇನ್ನಷ್ಟೇ ಗೊತ್ತಾಗಬೇಕಿದೆ. ಅದಕ್ಕೂ ಮುನ್ನ ಮತ್ತೊಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಡಿಸೆಂಬರ್ 15 ರಂದು ವಿಧಾನ ಪರಿಷತ್ ನಲ್ಲಿ ನಡೆದ ಕೋಲಾಹಲದ ಘಟನೆ ಮೃದು ಸ್ವಭಾವದ  ಧರ್ಮೇಗೌಡರನ್ನು ಘಾಸಿಗೊಳಿಸಿತ್ತೇ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. 


COMMERCIAL BREAK
SCROLL TO CONTINUE READING

ಧರ್ಮೇಗೌಡರು ಮಾಜಿ ಪ್ರಧಾನಿ ದೇವೇಗೌಡರಿಗೆ ( H D Devegowda) ಅತ್ಯಂತ  ಆತ್ಮೀಯರು. ತುಂಬಾ ಸೌಮ್ಯ ವ್ಯಕ್ತಿ. ಇತ್ತೀಚೆಗೆ ಹೃದಯ ಚಿಕಿತ್ಸೆಗೂ ಒಳಗಾಗಿದ್ದರು. 


ALSO READ : ವಿಧಾನ ಪರಿಷತ್ತಿನ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಆತ್ಮಹತ್ಯೆ


ಡಿಸೆಂಬರ್ 15ರಂದು ಪರಿಷತ್ ನಲ್ಲಿ ಆಗಿದ್ದೇನು..?


ಅಂದು ಪರಿಷತ್ ಸಭಾಪತಿಯಾದ  ಪ್ರತಾಪ್ ಚಂದ್ರ ಶೆಟ್ಟಿ ವಿರುದ್ದ ಬಿಜೆಪಿ (BJP) ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಇದಕ್ಕೆ ಜೆಡಿಎಸ್ ಬೆಂಬಲವಿತ್ತು. ಪರಿಷತ್ ಬೆಲ್ ಆಗುತ್ತಿದ್ದಂತೆ, ಸಭಾಪತಿ ಪೀಠದಲ್ಲಿ ಉಪಸಭಾಪತಿಯಾಗಿದ್ದ ಎಸ್ ಎಲ್ ಧರ್ಮೇಗೌಡರು (S L Dharme Gowda) ಆಸೀನರಾಗಿದ್ದರು. ಮತ್ತೊಂದು ಕಡೆ, ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಸದನಕ್ಕೆ ಆಗಮಿಸುವುದನ್ನು ತಡೆಯಲು ಬಿಜೆಪಿಯವರು ಸದನದ ಮುಖ್ಯ ದ್ವಾರವನ್ನು ಮುಚ್ಚುವ ಪ್ರಯತ್ನ ನಡೆಸಿದ್ದರು.


 ಸಭಾಪತಿ ಸ್ಥಾನದಲ್ಲಿ ಉಪಸಭಾಪತಿ ಆಸೀನರಾಗಿದ್ದನ್ನು ನೋಡಿದ ಕಾಂಗ್ರೆಸ್ (Congress) ಸದಸ್ಯರು ಕೆಂಡಾಮಂಡಲವಾಗಿದ್ದರು. ಕಾಂಗ್ರೆಸ್ ಸದಸ್ಯರು ಒಂದು ರೀತಿಯಲ್ಲಿ ಧರ್ಮೇಗೌಡರನ್ನು ಪೀಠದಿಂದ  ಎಳೆದು ಹಾಕಿದ್ದರು. ಇನ್ನೊಂದು ಬದಿಯಲ್ಲಿ  ಬಿಜೆಪಿ ಸದಸ್ಯರು ಅವರನ್ನು ಪೀಠದ ಮೇಲೆ ಕುಳ್ಳಿರಿಸುವ ಯತ್ನ ಮಾಡುತ್ತಿದ್ದರು.  ಉಭಯ ಪಕ್ಷಗಳ ನಡುವಣ ನೂಕಾಟ, ತಳ್ಳಾಟದಲ್ಲಿ ಧರ್ಮೆಗೌಡರು ಹೈರಾಣಾಗಿದ್ದರು. ಸಂವಿಧಾನಾತ್ಮಕ ಪೀಠವೊಂದರಲ್ಲಿ ಆಸೀನರಾಗಿದ್ದ ಉಪಸಭಾಪತಿ ಜೊತೆ ಸದನ ಸದಸ್ಯರು ನಡೆದುಕೊಂಡ ರೀತಿ ಆಕ್ಷೇಪಾರ್ಹವಾಗಿತ್ತು. ಜೊತೆಗೆ ಟೀಕೆಗೆ ಗುರಿಯಾಗಿತ್ತು. ಇಷ್ಟೆಲ್ಲಾ ಆಗಿದ್ದರೂ ಅಂದು ಧರ್ಮೆಗೌಡರು ಸೈರಣೆ ಕಳೆದುಕೊಂಡಿರಲಿಲ್ಲ. ಶಾಂತಚಿತ್ತರಾಗಿಯೇ ಕಂಡು ಬಂದಿದ್ದರು.


ALSO READ : ಇಂದಿನಿಂದ ರಾಜ್ಯ ವಿಧಾನ ಮಂಡಲದ ಅಧಿವೇಶನ ಆರಂಭ: ಸರಿಯಾಗಿ ನಡೆಯುವುದು ಅನುಮಾನ


ಶಾಸಕ ಬಿಎಂ ಫಾರೂಖ್ ಹೇಳಿದ್ದೇನು..?


ಈ ನಡುವೆ, ಜೆಡಿಎಸ್ (JDS) ಎಂಎಲ್ ಸಿ ಹೇಳಿಕೆಯೊಂದನ್ನು ನೀಡಿದ್ದಾರೆ.  ಪರಿಷತ್ ಜಟಾಪಟಿ ಬಳಿಕ ಧರ್ಮೆಗೌಡರು ತೀವ್ರ ನೊಂದಿದ್ದರು.  ಅವರನ್ನು ಭೇಟಿಯಾಗಿದ್ದಾಗ ಅವರು ಖಿನ್ನತೆಗೊಳಗಾಗಿದ್ದರು. ಅವರಿಗೆ ಯಾವುದೇ ಸ್ಥಾನಮಾನ ಬೇಕಾಗಿರಲಿಲ್ಲ ಎಂದು ಹೇಳಿದ್ದಾರೆ.  


ಡೆತ್ ನೋಟ್ ನಲ್ಲಿ ಏನಿದೆ..?
ಸಾವಿಗೂ ಮುನ್ನ ಧರ್ಮೆಗೌಡರು ಬರೆದಿರುವ ಡೆತ್ ನೋಟ್ (Death Note) ಸಿಕ್ಕಿದೆ ಎನ್ನಲಾಗಿದೆ. ಆ ಡೆತ್ ನೋಟ್ ನಲ್ಲಿ ಏನಿದೆ ಎಂಬುದು ಇದುವರೆಗೂ ಗೊತ್ತಾಗಿಲ್ಲ. ಆತ್ಮಹತ್ಯೆಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದಲೇ ಬಹಿರಂಗವಾಗಲಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G


iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.