ಜೆಡಿಎಸ್ ಮುಖಂಡನ ಹತ್ಯೆ ಸಂಚಿನ ಆರೋಪಿಗಳು ಅಂದರ್..! ʼಸುಫಾರಿ ಕಿಲ್ಲರ್ಸ್ʼ ರೋಚಕ ಕಥೆ ಬಯಲು
ಅಗಸ್ಟ್ 9 ರಂದು ನಡೆದ ಜೆಡಿಎಸ್ ಮುಖಂಡ ಮಾಜಿ ಸಚಿವ ರೇವಣ್ಣರ ಅತ್ಯಾಪ್ತ, ಉದ್ಯಮಿ ಕೃಷ್ಣೇಗೌಡರ(53) ಹತ್ಯೆ ಪ್ರಕರಣದಲ್ಲಿ ದೊಡ್ಡ ಶಡ್ಯಂತ್ರ ನಡೆದಿರೋದನ್ನ ಪೊಲೀಸರು ಬಯಲು ಮಾಡಿದ್ದಾರೆ. ಕೊಲೆಯ ಹಿಂದೆ ಕೆಲಸ ಮಾಡಿದ್ದ ಆರು ಜನ ಖತರ್ನಾಕ್ ಗಳನ್ನ ಖೆಡ್ಡಾಕ್ಕೆ ಕೆಡವಿರೊ ಪೊಲೀಸರು, ಕೊಲೆಯಲ್ಲಿ ಭಾಗಿಯಾದ ಪಾತಕಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ.
ಹಾಸನ : ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಜೆಡಿಎಸ್ ಮುಖಂಡ ಕೃಷ್ಣೆಗೌಡ(53) ಹತ್ಯೆ ಪ್ರಕರಣದಲ್ಲಿ ಮಿಂಚಿನ ಕಾರ್ಯಾಚರಣೆ ನಡಸಿರೋ ಪೊಲೀಸರು ಹತ್ಯೆಗಾಗಿ ಸಂಚುರೂಪಿಸಿದ್ದ ಆರು ಜನರನ್ನು ಬಂಧಿಸಿದ್ದಾರೆ, ಕೊಲೆಗೆಂದು ಬರೊಬ್ಬರಿ ಆರು ತಿಂಗಳಿನಿಂದ ಷಡ್ಯಂತ್ರ ಹೆಣೆದಿದ್ದ ಹಂತಕ ಪಡೆ ಸುಫಾರಿ ಕೊಟ್ಟು ಕೊಲೆ ಮಾಡಿಸಿರೋದನ್ನ ಪೊಲೀಸರು ತನಿಖೆಯಿಂದ ಬಯಲು ಮಾಡಿದ್ದಾರೆ.
ಕೃಷ್ಣೆಗೌಡರಿಂದ ಕೋಟಿ ಕೋಟಿ ಹಣ ವಸೂಲಿ ಮಾಡಿ ಸ್ಥಳೀಯ ಚಾನೆಲ್, ಸಿನಿಮಾ, ಪೇಪರ್ ಅಂತಾ ಹುಚ್ಚು ಹಿಡಿಸಿ ಹಣ ಲಪಟಾಯಿಸಿದ್ದ ಪಾತಕಿ ಕಡೆಗೆ ಹಣ ವಾಪಸ್ ಕೇಳಿದಾಗ ಅವರನ್ನೇ ಮುಗಿಸೋಕೆ ಪ್ಲಾನ್ ಮಾಡಿದ್ದು ಇದೀಗ ಕೊಲೆಮಾಡಿ ಎಸ್ಕೇಪ್ ಆಗಿದ್ದಾರೆ, ಕೊಲೆಯ ಹಿಂದೆ ನಿಂತು ಹಣ ಕಾಸಿನ ನೆರವರು ಪ್ಲಾನ್ ಮಾಡಿದ್ದವರನ್ನ ಖೆಡ್ಡಾಕ್ಕೆ ಕೆಡವಿರೊ ಪೊಲೀಸರು ಪ್ರಮುಖ ಆರೋಪಿಯ ಪತ್ನಿ, ಪ್ರೇಯಸಿ ಸೇರಿ ಮೂವರು ಮಹಿಳೆಯರು ಮತ್ತು ಮೂವರು ಪುರುಷರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ವಿಧಾನಸಭೆ ಸೋಲಿನ ಬಗ್ಗೆ ಸೋಮಣ್ಣ ಅಸಮಾಧಾನ.. ಬಿಜೆಪಿ ಬಿಟ್ಟು ಕಾಂಗ್ರೆಸ್ ಬಾಗಿಲು ಬಡಿಯುತ್ತಿದ್ದರಾ ಸೋಮಣ್ಣ.?
ಹೌದು ಹಾಸನದಲ್ಲಿ ಅಗಸ್ಟ್ 9 ರಂದು ನಡೆದ ಜೆಡಿಎಸ್ ಮುಖಂಡ ಮಾಜಿ ಸಚಿವ ರೇವಣ್ಣರ ಅತ್ಯಾಪ್ತ, ಉದ್ಯಮಿ ಕೃಷ್ಣೇಗೌಡರ(53) ಹತ್ಯೆ ಪ್ರಕರಣದಲ್ಲಿ ದೊಡ್ಡ ಶಡ್ಯಂತ್ರ ನಡೆದಿರೋದನ್ನ ಪೊಲೀಸರು ಬಯಲು ಮಾಡಿದ್ದಾರೆ. ಕೊಲೆಯ ಹಿಂದೆ ಕೆಲಸ ಮಾಡಿದ್ದ ಆರು ಜನ ಖತರ್ನಾಕ್ ಗಳನ್ನ ಖೆಡ್ಡಾಕ್ಕೆ ಕೆಡವಿರೊ ಪೊಲೀಸರು, ಕೊಲೆಯಲ್ಲಿ ಭಾಗಿಯಾದ ಪಾತಕಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ, ಮೂರು ವರ್ಷಗಳ ಹಿಂದೆ ಹಾಸನದ ಯೋಗಾನಂದ್ ಎಂಬಾತ ಕೃಷ್ಣೆಗೌಡರ ಜೊತೆಗೆ ಸ್ನೇಹಮಾಡಿ ಅವರ ಬಳಿ ಕೋಟಿ ಕೋಟಿ ಹಣ ಇರೋದನ್ನ ಖಾತ್ರಿ ಮಾಡಿಕೊಂಡು ಸ್ಥಳೀಯ ಚಾನಲ್, ಸಿನಿಮಾ, ಪೇಪರ್ ಅಂತಾ ಹುಚ್ಚು ಹಿಡಿಸಿದ್ದ, ಅದ್ರಿಂದ ಕೋಟಿ ಕೋಟಿ ಆದಾಯ ಬರುತ್ತೆ ಎಂದು ನಂಬಿಸಿ ಹಣ ಪೀಕಿದ್ದ, ಆದ್ರೆ ಯಾವಾಗ ಆದಾಯ ಬಾರದಾಯ್ತೋ ಹಣ ಹೂಡಿದ್ದ ಕೃಷ್ಣೆಗೌಡ ಹಣ ವಾಪಸ್ ಕೇಳೋಕೆ ಶುರುಮಾಡಿದ್ದರು.
ಅಷ್ಟೇ ಅಲ್ಲಾ, ಸಿನಿಮಾ, ಚಾಲನ್ ಹೆಸರಿನಲ್ಲಿ ತನಗೆ ಮೋಸ ಆಗಿದೆ ಎಂದು ಯೋಗಾನಂದ್ ಜೊತೆಗೆ ಗಲಾಟೆ ಮಾಡಿಕೊಂಡಿದ್ದರು, ಇವರೊಟ್ಟಿಗೆ ಪಾಟ್ನರ್ ಆಗಿದ್ದ ಸುರೇಶ್ ಎಂಬಾತನ ಜೊತೆಗೂ ಯೋಗಾನಂದ್ ಜಗಳ ಮಾಡಿಕೊಂಡಿದ್ದ, ಈ ಜಗಳದ ನಡುವೆ ತನ್ನ ಹಣ ವಾಪಸ್ ಕೊಡು ಎಂದು ಯೋಗಾನಂದ್ ನನ್ನ ಕರೆತಂದಿದ್ದ ಕೃಷ್ಣೇಗೌಡ ತಮ್ಮ ಗ್ರಾನೈಟ್ ಫ್ಯಾಕ್ಟರಿಯಲ್ಲಿಟ್ಟು ಹಲ್ಲೆ ಮಾಡಿದ್ದರಂತೆ ಇದೇ ಸಿಟ್ಟಿನಿಂದ ನೀನಿದ್ದರಲ್ಲವಾ ಹಣ ಕೇಳ್ತೀಯಾ ನಿನ್ನನ್ನೆ ಮುಗಿಸುತ್ತೇವೆ ಎಂದು ಪ್ಲಾನ್ ಮಾಡಿದ್ದರಂತೆ.
ಇದನ್ನೂ ಓದಿ: ವಿಮೆ ತಿರಸ್ಕರಿಸಿದ ರಿಲೈನ್ಸ ಜನರಲ್ ಇನ್ಸುರೆನ್ಸ್ ಕಂಪನಿಗೆ ರೂ.5 ಲಕ್ಷ 32.5 ಸಾವಿರಗಳ ದಂಡ
ಆರು ತಿಂಗಳಿಂದ ಸಂಚು ರೂಪಿಸಿ ಕಡೆಗೆ ಅಗಸ್ಟ್ 9ರ ಮಧ್ಯಾಹ್ನ ಆಟೋದಲ್ಲಿ ಬಂದ ಸುಫಾರಿ ಕಿಲ್ಲರ್ಸ್ ಮಚ್ಚಿನಿಂಧ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಕೊಲೆಗೆ ಹಣಕಾಸು ನೆರವು ನೀಡಿದ್ದ ಯೋಗಾನಂದ್ ನ ಚಾನಲ್ ಪಾಟ್ನರ್ ಸುರೇಶ್, ಯೋಗಾನಂದನ ಮಾವ ಕೃಷ್ಣಕುಮಾರ್, ಯೋಗಾನಂದ್ ಪತ್ನಿ ಸುಧಾರಾಣಿ, ಯೋಗಾನಂದನ ಪ್ರೇಯಸಿ ಅಶ್ವಿನಿ ಹಾಗು ಯೋಗಾನಂದ್ ಸಂಬಂಧಿ ಸಂಜು ಮತ್ತು ಆತನ ಪತ್ನಿ ಚೈತ್ರಳನ್ನ ಬಂಧಿಸಿದ್ದು ಎಲ್ಲರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ವೃತ್ತಿಯಲ್ಲಿ ಗ್ರಾನೈಟ್ ಉದ್ಯಮಿ ಹಾಗು ಗುತ್ತಿಗೆದಾರನಾಗಿದ್ದ ಕೃಷ್ಣೇಗೌಡರು ಮಾಜಿ ಸಚಿವ ಜೆಡಿಎಸ್ ನ ಪ್ರಭಾವಿ ನಾಯಕ ರೇವಣ್ಣ ಹಾಗು ಅವರ ಕುಟುಂಬದ ಅತ್ಯಾಪ್ತರಾಗಿದ್ದರು. ಸಾಕಷ್ಟು ಪ್ರಭಾವ ಹೊಂದಿದ್ದರೂ ಕೃಷ್ಣೇಗೌಡ ಯಾರೊಂದಿಗೂ ಜಗಳ ಮಾಡಿಕೊಂಡ ವ್ಯಕ್ತಿಯಲ್ಲ, ವೃತ್ತಿಯಲ್ಲಾಗಲಿ, ವೈಯಕ್ತಿಕವಾಗಿಯಾಗಲಿ ಅವರಿಗೆ ಯಾರೂ ಶತೃಗಳು ಇರಲಿಲ್ಲ, ಆದ್ರೆ ಯಾವಾಗ ಯೋಗಾನಂದನ ಪರಿಚಯವಾಗಿತ್ತೋ ಕೃಷ್ಣೆಗೌಡರ ದೈವ ಭಕ್ತಿಯನ್ನೇ ಬಂಡವಾಳ ಮಾಡಿಕೊಂಡಿದ್ದ ಯೊಗಾನಂದ್ ಆ ದೇವರು ಈದೇವರು ಅಂತಾ ಸುತ್ತಿಸಿ ಅದ್ರಿಂದಲೂ ಹಣ ಪೀಕಿದ್ದನಂತೆ, ಹಣ ಪಡೆಯೋದು ಸುಳ್ಳು ಲೆಕ್ಕ ಪಡೆದು ಹಣ ಮೋಸಮಾಡೋದು ಗೊತ್ತಾದಾಗ ಕೃಷ್ಣೆಗೌಡ ಯೋಗಾನಂದ್ ವಿರುದ್ದ ತಿರುಗಿ ಬಿದ್ದಿದ್ದರು.
ಇದನ್ನೂ ಓದಿ: ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿ ಬಂಧಿಸಿದ ಸಿಸಿಬಿ ಪೊಲೀಸರು!
ಈ ನಡುವೆ ಕೃಷ್ಣೆಗೌಡ ಯೋಗಾನಂದ್ ಮತ್ತು ಸುರೇಶ್ ನಡುವೆ ಜಗಳವಾಗಿ, ಮೇಲ್ನೋಟಕ್ಕೆ ಕೃಷ್ಣೇಗೌಡರ ಜೊತೆಗಿದ್ದು ಯೋಗಾನಂದ್ ವಿರೋಧಿಸಿದ್ದ ಸುರೇಶ್, ಯೋಗಾನಂದ್ ನನ್ನ ಕರೆತಂದು ಹಲ್ಲೆಮಾಡಿದಾಗ ಆತ ಕೃಷ್ಣೆಗೌಡರ ಜೊತೆಗಿದ್ದರೂ ಯೋಗಾನಂದ್, ಸುರೇಶ್ ವಿರುದ್ದ ದೂರು ಕೊಟ್ಟಿರಲಿಲ್ಲವಂತೆ, ಕೃಷ್ಣೆಗೌಡರನ್ನ ಮುಗಿಸೋಣ, ನಾನು ಅವರಿಗೆ ಕೊಡಬೇಕಿರೋ ಹಣದಲ್ಲಿ ಬೇಕಿದ್ದರೆ ನಿನಗೆ ಪಾಲು ಕೊಡ್ತೀನಿ ಎಂದು ಸುರೇಶ್ ನನ್ನ ವಿಶ್ವಾಸಕ್ಕೆ ಗಳಿಸಿ ಬಳಿಕ ಈ ಹತ್ಯೆ ಸಂಚಿನಲ್ಲಿ ಸುರೇಶ್ ಕೂಡ ಭಾಗಿಯಾಗುವಂತೆ ಮಾಡಿದ್ದ ಯೋಗಾನಂದ್
ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಹಾಗು ತನ್ನ ಮೇಲೆ ಹಲ್ಲೆ ಮಾಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ತೀರ್ಮಾನ ಮಾಡಿ ಕಡೆಗೆ ಹತ್ಯೆ ಮಾಡಿ ಮುಗಿಸಿದ್ದಾನೆ. ಅಗಸ್ಟ್ 9 ರ ಬುಧವಾರ ಮಧ್ಯಾಹ್ನ ತಮ್ಮ ಪ್ಯಾಕ್ಟರಿ ಬಳಿ ಬಂದ ಕೃಷ್ಣೇಗೌಡರನ್ನ ಹಿಂಬಾಲಿಸಿ ಬಂದಿದ್ದ ಹಂತಕರು ಬರ್ಬರವಾಗಿ ಕೊಂದು ಎಸ್ಕೇಪ್ ಆಗಿದ್ದಾರೆ. ಇದೀಗ ಕೊಲೆ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಕೊಲೆಗೆ ನೆರವು, ಹಾಗು ಕೊಲೆಗೆ ಸಂಚು ರೂಪಿಸಿದ ಆರೋಪದಲ್ಲಿ ಆರು ಜನರನ್ನ ಬಂಧಿಸಿದ್ದು, ಎಲ್ಲರನ್ನು ಪೊಲಿಸ್ ಕಸ್ಟಡಿಗೆ ಕಡೆದುಕೊಂಡಿದ್ದು ತನಿಖೆ ಚುರುಕುಗೊಳಿಸಿದ್ದು ಈ ಕೊಲೆಯ ಹಿಂದೆ ಯಾರಿದ್ದಾರೆ ಎಲ್ಲರನ್ನು ಬಂದಿಸೋದಾಗಿ ಎಸ್ಪಿ ಹೇಳಿದ್ದಾರೆ..
ಒಟ್ನಲ್ಲಿ ಹಾಸನ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಗ್ರಾನೈಟ್ ಉದ್ಯಮಿ ಕೃಷ್ಣೆಗೌಡ ಹತ್ಯೆ ಪ್ರಕರಣದ ರೂವಾರಿಗಳನ್ನ ಬಂದಿಸಿರೋ ಪೊಲೀಸರು ಕೊಲೆಯ ಹಿಂದಿನ ಕಾರಣ ಬಯಲು ಮಾಡಿದ್ದಾರೆ, ಇನ್ನು ಕೊಲೆಮಾಡಿದ ಆರೋಪಿಗಳ ಬಂಧನದ ಬಳಿಕ ಕೊಲೆಯ ಹಿಂದೆನಡೆದಿರೋ ಮತ್ತಷ್ಟು ಮಸಲತ್ತು ಬಯಲಾಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ