Hassan Pen Drive Case: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪಕ್ರರಣ ದೇಶದಾದ್ಯಂತ ಸಖತ್‌ ಸೌಂಡ್‌ ಮಾಡುತ್ತಿದೆ. ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಪ್ರಜ್ವಲ್‌ ರೇವಣ್ಣ ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ FIR ದಾಖಲಿಸಲಾಗಿದೆ. ತಮ್ಮ ಮಗನ ರಾಸಲೀಲೆ ವಿಡಿಯೋ ಪಕ್ರರಣದ ಬಗ್ಗೆ ಎಚ್‌.ಡಿ.ರೇವಣ್ಣ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ತಮ್ಮ ಹಾಗೂ ಪುತ್ರನ ವಿರುದ್ಧ FIR ದಾಖಲಾಗಿರುವುದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ನಾನು ಇದಕ್ಕೆಲ್ಲ ಹೆದರಿ ಎಲ್ಲಿಯೂ ಓಡಿ ಹೋಗುವುದಿಲ್ಲ ಅಂತಾ ಹೇಳಿದ್ದಾರೆ. ನನ್ನ ಹಾಗೂ ಕುಟುಂಬದ ವಿರುದ್ಧ ಷಡ್ಯಂತ್ರ ನಡೆದಿದೆ. ನಾನು ಕಾನೂನು ಹೋರಾಟ ಮಾಡುತ್ತೇನೆ ಅಂತಾ ಗುಡುಗಿದ್ದಾರೆ.


ಇದನ್ನೂ ಓದಿ: ಹಾಸನ ಎಂಪಿ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ: ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ SIT ರಚನೆ


ಇನ್ನು ಪ್ರಜ್ವಲ್‌ ರೇವಣ್ಣ ವಿದೇಶ ಪ್ರಯಾಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, FIR ದಾಖಲಿಸುತ್ತಾನೆ ಅನ್ನೋದು ಆತನಿಗೆ ಗೊತ್ತಿರಲಿಲ್ಲ. ಪ್ರಜ್ವಲ್‌ ವಿದೇಶ ಪ್ರಯಾಣ FIR ಆಗುವ ಮೊದಲೇ ನಿರ್ಧಾರವಾಗಿತ್ತು ಅಂತಾ ಹೇಳಿದ್ದಾರೆ. 


ಪ್ರಜ್ವಲ್‌ ರೇವಣ್ಣ ಪ್ರಕರಣದ ಕುರಿತು ನಾನು ಏನು ಹೇಳುವುದಿಲ್ಲ. ಎಸ್‌ಐಟಿಯಿಂದ ತನಿಖೆ ಆಗಲಿ ಎಂದು ಎಚ್‌.ಡಿ.ದೇವೆಗೌಡರ ಭೇಟಿ ಬಳಿಕ ರೇವಣ್ಣ ಹೇಳಿದ್ದಾರೆ. ಹಾಸನದ ಅಶ್ಲೀಲ ವಿಡಿಯೋ ತುಣುಕು ಪ್ರಕರಣದ ತನಿಖೆಗೆ ಆದೇಶಿಸಿ ರಾಜ್ಯ ಸರ್ಕಾರವು SIT ರಚಿಸಿದೆ. ಆದರೆ ಇದಕ್ಕೂ ಮೊದಲೇ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ತೆರಳಿದ್ದಾರೆ. ಶನಿವಾರ ಮುಂಜಾನೆ ೩ ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಜ್ವಲ್‌ ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ಹೋಗಿದ್ದಾರೆಂದು ವರದಿಯಾಗಿದೆ.   


ಇದನ್ನೂ ಓದಿ: ಆಸ್ತಿ ಲೂಟಿಗೆ ಮುಂದಾದ ಕಾಂಗ್ರೆಸ್: ನರೇಂದ್ರ ಮೋದಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.