ದಾವಣಗೇರಿ: ಸಾಮಾನ್ಯವಾಗಿ ನಡೆಯುವ ಎಲ್ಲ ರಥೋತ್ಸವಗಳಲ್ಲಿ ಪುರುಷರೇ ರಥಗಳನ್ನ ಎಳೆಯುತ್ತಾರೆ. ಆದರೆ, ಇಲ್ಲಿ ಮಾತ್ರ ರಥ ಎಳೆಯುವವರು ಮಹಿಳೆಯರು. ಇಂತಹದೊಂದು ವಿಶಿಷ್ಟ ಸಂಪ್ರದಾಯಕ್ಕೆ ಕರಿಬಸವೇಶ್ವರ ಅಜ್ಜನ ರಥೋತ್ಸವ ಸಾಕ್ಷಿಯಾಗಿದೆ. ಮಹಿಳೇಯರು ರಥೋತ್ಸವನ್ನು ಸಂಭ್ರಮದಿಂದ ಆಚರಿಸುವ ಮೂಲಕ ತಮ್ಮ ಇಷ್ಟಾರ್ಥಗಳು ಬೇಗ ಸಿದ್ದಿಸಲಿ ಎಂದು ವಿಶೇಷ ಪೂಜೆಗಳನ್ನ ಸಲ್ಲಿಸುತ್ತಾರೆ. ನೂರಾರು ಮಹಿಳೆಯರೇ ಸೇರಿಸುವ ಈ ರಥೋತ್ಸವವನ್ನ ನೋಡುವುದೇ ಸುಂದರ. ಏನಿದು ಜಾತ್ರೆ ವಿಶೇಷತೆ ಅಂತೀರಾ ನೀವೇ ನೋಡಿ… 


COMMERCIAL BREAK
SCROLL TO CONTINUE READING

ಅಜ್ಜನ ಗದ್ದುಗೆಗೆ ಪೂಜೆ ಸಲ್ಲಿಸಿ ಬೇಡಿಕೊಳ್ಳುತ್ತಿರುವ ಮುತ್ತೈದೆಯರು ಹಾಗೂ ಯುವತಿಯರು. ನಾ ಮೇಲೂ ನೀ ಮೇಲೂ ಅಂತ ರಥ ಎಳೆಯುತ್ತಿರುವ ಮಾನಿನಿಯರು, ಹೌದು, ಇಲ್ಲಿ ಈ ಅಜ್ಜನ ತೇರನ್ನ ಮಹಿಳೆಯರೇ ಎಳೆಯಬೇಕು. ಪೂಜೆಯನ್ನು ಮಹಿಳೆಯರೆ ಮಾಡಬೇಕು. ಇಂತಹದೊಂದು ವಿಶೇಷ ಆಚರಣೆ ದಾವಣಗೆರೆ ತಾಲೂಕಿನ ಯರಗುಂಟೆ ಕರಿಬಸವೇಶ್ವರ ಅಜ್ಜನ ಜಾತ್ರೆಯಲ್ಲಿ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ನಡೆಯುವ ಕರಿಬಸವೇಶ್ವರ ಅಜ್ಜನ ಜಾತ್ರೆಯಲ್ಲಿ  ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ. ಹೀಗಾಗಿ, ಈ ರಥೋತ್ಸವದಲ್ಲಿ ಎಲ್ಲಿ ನೋಡಿದರೂ ಹೆಚ್ಚಾಗಿ ಮಹಿಳೆಯರೇ ಕಾಣಿಸುತ್ತಿದ್ದರು. ಇಲ್ಲಿ ಮಹಿಳೆಯರೇ ತೇರನ್ನ ಎಳೆಯುವುದಕ್ಕೆ ಪ್ರಮುಖ ಕಾರಣವೂ ಇದೆ.


ಇದನ್ನೂ ಓದಿ : Basavaraja Bommai : ಫೆಬ್ರವರಿ ತಿಂಗಳಲ್ಲಿ ರಾಜ್ಯ ಸರ್ಕಾರದ ಬಜೆಟ್ : ಸಿಎಂ ಬೊಮ್ಮಾಯಿ


ಸಮಾಜದಲ್ಲಿ ಮಹಿಳೆಯರಿಗೆ ಶೇಕಡಾ 50 ರಷ್ಟು ಮೀಸಲಾತಿ ಬೇಕು, ಸಮಾನತೆ ಬೇಕು ಎಂದು ಹೋರಾಟ ನಡೆಸಲಾಗುತ್ತಿದೆ. ಮಹಿಳೆಯರಿಗೆ ಸೂಕ್ತ ಮೀಸಲಾತಿ ಹಾಗೂ ಸಮಾನತೆ ಕಲ್ಪಿಸುವ ಉದ್ದೇಶದಿಂದ ಇಲ್ಲಿ ಮುಖ್ಯವಾಗಿ ಮಹಿಳೆಯರಿಗೆ ಹೆಚ್ಚಿನ ಪ್ರಾದಾನ್ಯತೆ. ಅಲ್ಲದೇ, ರಥವನ್ನು ಎಳೆಯಲು ಅವರಿಗೆ ಅವಕಾಶ ನೀಡಲಾಗಿದೆ. ಕಳೆದ 12 ವರ್ಷಗಳಿಂದ ಯರಗುಂಟೆಯಲ್ಲಿ ಕರಿಬಸವೇಶ್ವರ ಅಜ್ಜನ ಜಾತ್ರೆಯನ್ನು ವಿಜೃಂಬನೆಯಿಂದ ನಡೆಸಲಾಗುತ್ತಿದೆ. ಜಾತ್ರೆಯಲ್ಲಿ ಮಹಿಳೆಯರಿಗೆ ಸರಿಸಮನಾದ ಮೀಸಲಾತಿ ಹಾಗೂ ಸಮಾನತೆ ತತ್ವ ಅನುಸರಿಸುವ ಉದ್ದೇಶದಿಂದ ಇಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಸಸ್ತ್ಯ ನೀಡಲಾಗುತ್ತಿದೆ. ಇದು ಕರಬಸವೇಶ್ವರ ಅಜ್ಜನ ಆಸೆಯೂ ಆಗಿದ್ದು, ಗ್ರಾಮಸ್ಥರು ಕೂಡ ಅದನ್ನ ಕಳೇದ ಹನ್ನೆರಡು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದಾರೆ. ಹೀಗೆ ಮಾಡಿದರೆ ಕರಿಬಸವೇಶ್ವರ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇಲ್ಲಿಯ ಗ್ರಾಮಸ್ಥರದ್ದು.


ಹೀಗಾಗಿ ಪ್ರತಿವರ್ಷವೂ ಜಾತ್ರೆಯಲ್ಲಿ ಮಹಿಳೆಯರು ಕರಿಬಸವೇಶ್ವರ ಅಜ್ಜನ ತೊಟ್ಟಿಲು ತೂಗಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆಯನ್ನ ಸಲ್ಲಿಸುತ್ತಾರೆ. ಮತ್ತು ಜಾತ್ರೆಯಲ್ಲಿ ಅಜ್ಜನ ಸನ್ನಿಧಿಯಿಂದ ಊರ ಹೊರಗಿನ ಬನ್ನಿ ಕಟ್ಟೆಯವರೆಗೂ ಮಹಿಳೇಯರೇ ರಥವನ್ನು ಎಳೆದು ಮತ್ತೆ ದೇವಸ್ಥಾನದ ಮುಂದೆ ರಥವನ್ನ ತಂದು ನಿಲ್ಲಿಸುತ್ತಾರೆ. ಬಳಿಕ, ಅಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಮರಕ್ಕೆ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ರಥೋತ್ಸವದಲ್ಲಿ ಯರಗುಂಟೆಯಲ್ಲದೆ ಸುತ್ತಮುತ್ತಲಿನ ಭಾಗದಿಂದ ನೂರಾರು ಮಹಿಳೇಯರು ಯಾವುದೇ ಜಾತಿ ಧರ್ಮದ ಬೇಧವಿಲ್ಲದೆ ಸಂಭ್ರಮದಿಂದ ಭಾಗವಹಿಸುತ್ತಾರೆ.


ಇದನ್ನೂ ಓದಿ : ನಕಲಿ ಭೂ ದಾಖಲೆ ಸೃಷ್ಟಿಸಿ ವಂಚನೆಗೆ ಯತ್ನ: ಬಿಬಿಎಂಪಿ ಕಚೇರಿ ಸಿಬ್ಬಂದಿ ಸಹಿತ ಐವರ ಬಂಧನ!


ಇನ್ನು, ಯರಗುಂಟೆ ಕರಿಬಸವೇಶ್ವರ ಅಜ್ಜ ಮಹಿಳೆಯರ ಬೇಡಿಕೆಗಳನ್ನ ಶೀಘ್ರ ಈಡೇರಿಸುತ್ತಾನೆ ಎಂದು ನಂಬಿಕೆಯೂ ಇಲ್ಲಿಯ ಮಹಿಳೆಯರಲ್ಲಿದೆ. ಈ ಅಜ್ಜನ ತೊಟ್ಟಿಲು ತೂಗಿದರೆ ಮಕ್ಕಳಾಗದ ಮಹಿಳೆಯರಿಗೆ ಮಕ್ಕಳಾಗುತ್ತವೆ. ಹರಕೆ ಹೊತ್ತರೆ ಅವರ ಇಷ್ಟಾರ್ಥಗಳನ್ನು ಪೂರೈಸುವನೆಂಬ ಅಚಲ ನಂಬಿಕೆ ಇಲ್ಲಿಯ ಮಹಿಳೆರದ್ದು.


ಒಟ್ಟಿನಲ್ಲಿ, ಮಹಿಳೆಯರನ್ನು ಕಡೆಗಣಿಸುವ ನಮ್ಮ ಸಮಾಜದಲ್ಲಿ ಜಾತ್ರೆಯಲ್ಲಿ ರಥವನ್ನು ಎಳೆಸುವ ಮೂಲಕ ಮಹಿಳೆಯರಿಗೆ ಸಮಾನತೆ ಹಾಗೂ ಮೀಸಲಾತಿ ಬೇಕು ಎಂಬ ಸಂದೇಶ ಸಾರುತ್ತಿರುವುದು ಸಂತಸದ ವಿಚಾರವೇ ಸರಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.