ಬೆಂಗಳೂರು: ಗ್ರಾಮ ವಾಸ್ತವ್ಯಕ್ಕಾಗಿ ಚಂಡರಕಿಗೆ ತೆರಳಲು ರೈಲು ನಿಲ್ದಾಣಕ್ಕೆ ಮುಖ್ಯಮಂತ್ರಿಗಳು ಬಂದಾಗ ಅಲ್ಲಿದ್ದ ವಿಶೇಷ ಚೇತನರೊಬ್ಬರನ್ನು ನೋಡಿ ಅವರ ಬಳಿ ನಡೆದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತೊಮ್ಮೆ ತಾನು ಜನರ ಮುಖ್ಯಮಂತ್ರಿ ಎಂದು ಸಾಬೀತು ಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಸಂಜೆ ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲ್ಲೂಕಿನ ಚಂಡರಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯಕ್ಕೆ ರೈಲಿನಲ್ಲಿ ಪ್ರಯಾಣ ಬೆಳೆಸಿದರು.


ಬೆಂಗಳೂರು ರೈಲ್ವೆ ನಿಲ್ದಾಣ ಕಿಕ್ಕಿರಿದು ತುಂಬಿತ್ತು. ರಾಜ್ಯದ ಮುಖ್ಯಮಂತ್ರಿ ಜನತೆಯ ದುಃಖ ದುಮ್ಮಾನಗಳನ್ನು ಆಲಿಸಲು, ಜನರ ಕಷ್ಟಕ್ಕೆ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಒದಗಿಸಿಕೊಡಲು ಜನರ ಬಳಿಯೇ ತೆರಳುವುದಕ್ಕೆ ಸಾವಿರಾರು ಜನ ಸಾಕ್ಷಿಯಾದರು.


ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಆರಂಭಿಸಿದ 'ಗ್ರಾಮ ವಾಸ್ತವ್ಯ' ಜನಮನವನ್ನು ಗೆದ್ದಿತ್ತು. ನಾಡಿನ ಎಲ್ಲರ ಮನದಲ್ಲಿ ಅಚ್ಚಳಿಯದೆ ನಿಂತಿತ್ತು. ಇದರಿಂದ ಕುಮಾರಣ್ಣನನ್ನು ಹಲವರು ಜನರ ಮುಖ್ಯಮಂತ್ರಿ ಎಂದು ಹೇಳಿದ್ದರು. 


ಈಗ ಮುಖ್ಯಮಂತ್ರಿಗಳು ಎರಡನೆಯ ಸುತ್ತಿನ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಲು ಇಂದು ರೈಲು ನಿಲ್ದಾಣಕ್ಕೆ ಬಂದರು. ಇವರನ್ನು ನೋಡಲು, ಶುಭ ಹಾರೈಸಿ ಬೀಳ್ಕೊಡಲು ಬಂದವರು ಲೆಕ್ಕವಿಲ್ಲದಷ್ಟು ಮಂದಿ.


ಗುರುವಾರ ಗ್ರಾಮ ವಾಸ್ತವ್ಯಕ್ಕಾಗಿ ಚಂಡರಕಿಗೆ ತೆರಳಲು ರೈಲು ನಿಲ್ದಾಣಕ್ಕೆ ಮುಖ್ಯಮಂತ್ರಿಗಳು ಬಂದಾಗ ಅಲ್ಲಿದ್ದ ವಿಶೇಷ ಚೇತನರೊಬ್ಬರನ್ನು ನೋಡಿ ಅವರ ಬಳಿ ನಡೆದರು. ಅವರ ಜೊತೆ ಕುಳಿತು ಅವರ ಸಮಸ್ಯೆಯನ್ನು ಆಲಿಸಿದರು. ಮುಖ್ಯಮಂತ್ರಿಗಳು ಅವರ ಜೊತೆ ಮಾತನಾಡುತ್ತಿರಬೇಕಾದರೆ ಅಲ್ಲಿ ಕಿಕ್ಕಿರಿದು ಸೇರಿದ್ದ ಜನರು ಮುಖ್ಯಮಂತ್ರಿಗಳ ಸರಳತೆಯನ್ನು ಶ್ಲಾಘಿಸಿದರು.


ಮುಖ್ಯಮಂತ್ರಿಗಳು ಕೈ ಬೀಸಿ ಗ್ರಾಮ ವಾಸ್ತವ್ಯ ನನ್ನ ಮುಖ್ಯ ಕನಸು. ಜನರ ಜೊತೆ ಬೆರೆಯುವ ಅವಕಾಶ ನನಗೆ ಮುಖ್ಯ ಎಂದರು.