ರಾಮನಗರ: ಜಿಲ್ಲಾ ಕೇಂದ್ರದಲ್ಲಿಯೇ ಸಿವಿಲ್ ಪ್ರಕರಣಗಳನ್ನು ವಿಚಾರಣೆ ನಡೆಸುವ ಎಸಿ ಕೋರ್ಟ್ ಅನ್ನು ಕನಕಪುರಕ್ಕೆ ವರ್ಗಾವಣೆ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇದು ಮಕ್ಕಳಾಟವೇ ಎಂದು ಕಿಡಿಕಾರಿದ್ದಾರೆ.


COMMERCIAL BREAK
SCROLL TO CONTINUE READING

ಎಸಿ ಕೋರ್ಟ್ ಅನ್ನು ಕನಕಪುರಕ್ಕೆ ಸ್ಥಳಾಂತರ ಮಾಡುವುದನ್ನು ವಿರೋಧಿಸಿ, ರಾಮನಗರದಲ್ಲಿ ವಕೀಲರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಎಸಿ ಕೋರ್ಟ್ ಅನ್ನು ವಾರದಲ್ಲಿ ಒಂದು ದಿನ ಕನಕಪುರಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಇದನ್ನು ಇಡೀ ರಾಜ್ಯದ ಪ್ರತಿ ತಾಲೂಕಿನಲ್ಲೂ ಮಾಡಿ, ಪ್ರತಿ ತಾಲೂಕಿಗೆ ಒಂದೊಂದು ಎಸಿ ಕೋರ್ಟ್ ಮಾಡಿ ಎಂದ ಅವರು; ಇದು ಸರ್ವಾಧಿಕಾರಿ ಧೋರಣೆ. ಕೋರ್ಟ್ ಸ್ಥಳಾಂತರಕ್ಕೆ ಅಂತಹ ತರಾತುರಿ ಏನಿದೆ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.


ಇದನ್ನೂ ಓದಿ- ಗಾರ್ಡನ್ ಸಿಟಿಯಲ್ಲಿ ಪಸರಿಸಲಿದೆ ಕಂಬಳದ ಪರಿಮಳ: ಸುಗಮ ಸಂಚಾರಕ್ಕಾಗಿ ಟ್ರಾಫಿಕ್ ಪೊಲೀಸರ ಹೊಸ ಮಾರ್ಗಸೂಚಿ


ಹೆದರಿಸಿ, ಬೆದರಿಸಿ ಅಕ್ರಮವಾಗಿ ಬೇಲಿ ಹಾಕಿಕೊಂಡಿರುವ ಎಲ್ಲಾ ಭೂಮಿಗಳ ಪೋಡಿ ಮಾಡಿಸುವುದಕ್ಕೆ, ಲೂಟಿ ಮಾಡುವುದಕ್ಕೆ ಹೀಗೆ ಮಾಡ್ತಿದ್ದಾರೆ. ಅದೆಂತದ್ದೋ ಗ್ಲೋಬಲ್ ಸಿಟಿ ಮಾಡಲು, ಲೂಟಿ ಮಾಡೋಕೆ ಈ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಯಾರ ಹೆಸರನ್ನೂ ಹೇಳದೆ ಅವರು ಕಟುವಾಗಿ ಟೀಕಿಸಿದರು.


ಇದನ್ನೂ ಓದಿ- ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನ ಐತಿಹಾಸಿಕ ಕಂಬಳ


ಅಕ್ಕಿ ಕಳವು; ಕ್ರಮಕ್ಕೆ ಆಗ್ರಹ!
ಚನ್ನಪಟ್ಟಣದಲ್ಲಿ ಅನ್ನಭಾಗ್ಯದ ಅಕ್ಕಿ ಕಳವು ವಿಚಾರದ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು, ಮೊದಲು ಈ ಬಗ್ಗೆ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲಿ. ಇದು ಕೇವಲ ಚನ್ನಪಟ್ಟಣದಲ್ಲಿ ಮಾತ್ರವಲ್ಲ, ರಾಜ್ಯದ ಹಲವೆಡೆ ನಡೆಯುತ್ತಿದೆ. ಸರಕಾರ  ಜವಾಬ್ದಾರಿಯಿಂದ ಕ್ರಮ ವಹಿಸಲಿ ಎಂದು ಅವರು ಕಿವಿಮಾತು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.