ಸಿಎಂ, ಡಿಸಿಎಂಗೆ ಗೊತ್ತಿದ್ದೇ ಹಗರಣ ನಡೆದಿದೆ, ಇಷ್ಟೆಲ್ಲಾ ಕೇವಲ ಒಬ್ಬ ಮಂತ್ರಿಯಿಂದ ಆಗಿರುವುದಲ್ಲ : ಹೆಚ್ಡಿಕೆ
Valmiki Corp scam : ಸಿಎಂ, ಡಿಸಿಎಂ ಹೇಳಿಕೆಗಳನ್ನು ನಾನು ಗಮನಿಸಿದೆ. ರಾಜೀನಾಮೆ ನೀಡುವುದಕ್ಕೆ ಸಚಿವರಿಗೆ ನಾನು ಹೇಳಿಲ್ಲ, ನಾನು ಹೇಳಿಲ್ಲ ಎನ್ನುತ್ತಿದ್ದರು. ಇದು ಬರೀ ಡ್ರಾಮಾ ಅಷ್ಟೇ. ಆ ಮಂತ್ರಿಗೆ ರಾಜೀನಾಮೆ ನೀಡಿ ಅನ್ನುವ ಧೈರ್ಯ ಇವರಿಗೆ ಇರಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಕರ್ಮಕಾಂಡವು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರಿಗೆ ಗೊತ್ತಿದ್ದೇ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ದೂರಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳು ಸಚಿವ ನಾಗೇಂದ್ರ ಅವರ ರಾಜೀನಾಮೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಈಗಾಗಲೇ ಪ್ರಕರಣದಲ್ಲಿ ಸುಮಾರು ₹80 ರಿಂದ ₹85 ಕೋಟಿ ರವಾನೆ ಆಗಿರುವ ಮಾಹಿತಿ ಇದೆ. ರಾಜೀನಾಮೆ ನಿರ್ಧಾರ ಮೊದಲೇ ಆಗಬೇಕಿತ್ತು. ಇಷ್ಟೆಲ್ಲಾ ಕೇವಲ ಒಬ್ಬ ಮಂತ್ರಿಯಿಂದ ಆಗಿರುವುದಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರೂ ಸೇರಿಯೇ ಮಾಡಿರುವುದು ಎಂದರು ಕುಮಾರಸ್ವಾಮಿ ಅವರು.
ರಾಜೀನಾಮೆ ಸಂಬಂಧ ಸಿಎಂ, ಡಿಸಿಎಂ ಹೇಳಿಕೆಗಳನ್ನು ನಾನು ಗಮನಿಸಿದೆ. ರಾಜೀನಾಮೆ ನೀಡುವುದಕ್ಕೆ ಸಚಿವರಿಗೆ ನಾನು ಹೇಳಿಲ್ಲ, ನಾನು ಹೇಳಿಲ್ಲ ಎನ್ನುತ್ತಿದ್ದರು. ಇದು ಬರೀ ಡ್ರಾಮಾ ಅಷ್ಟೇ. ಆ ಮಂತ್ರಿಗೆ ರಾಜೀನಾಮೆ ನೀಡಿ ಅನ್ನುವ ಧೈರ್ಯ ಇವರಿಗೆ ಇರಲಿಲ್ಲ. ಅದಕ್ಕೆ ಕಾರಣ, ಹಗರಣದಲ್ಲಿ ದೊಡ್ಡ ಮಟ್ಟದ ಕೈಗಳಿವೆ. ಕಳೆದ ಮಾರ್ಚ್ ತಿಂಗಳಿನಲ್ಲಿಯೇ ಈ ಹಗರಣ ನಡೆದಿದೆ. ಅದನ್ನು ಇವರೆಲ್ಲರೂ ಸೇರಿ ಮುಚ್ಚಿಟ್ಟಿದ್ದಾರೆ! ಯಾಕೆ? ಆ ಅಧಿಕಾರಿ ಸಾವಿನಿಂದ, ಮಾಧ್ಯಮಗಳ ಮೂಲಕ ಇದು ಹೊರ ಬರದೇ ಇದ್ದಿದ್ದರೆ ಮುಚ್ಚಿ ಹಾಕುತ್ತಿದ್ದರು ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಇದನ್ನೂ ಓದಿ:ಹನೂರಲ್ಲಿ ಮುಂಗಾರು ಆರ್ಭಟ: ಕರ್ನಾಟಕ- ತಮಿಳುನಾಡು ಸಂಪರ್ಕ ರಸ್ತೆ 3 ಗಂಟೆ ಬಂದ್
ಹಗರಣದ ಒಳಹೊಕ್ಕು ತನಿಖೆ ನಡೆಸಬೇಕು. ಸರ್ಕಾರ ಮತ್ತು ಸಿಎಂ, ಡಿಸಿಎಂ ಗಮನಕ್ಕೆ ಒಂದೇ ಈ ಅಕ್ರಮ ನಡೆದಿದೆ. ಕೇವಲ ಒಂದು ಗಂಟೆಯಲ್ಲಿ ಹಣ ಬಿಡುಗಡೆಯಾಗಲು ಸಹಾಯ ಮಾಡಿದ್ದು ಯಾರು? ಅದೆಲ್ಲಾ ಹೊರಗೆ ಬರಬೇಕು. ತೆಲಂಗಾಣದ ಚುನಾವಣೆಗೆ ಹೋಗಿರುವ ಹಣ ಇದು. ಅಲ್ಲಿಗೆ ಹೋಗಿ ಚುನಾವಣೆ ಉಸ್ತುವಾರಿ, ಜವಾಬ್ದಾರಿ ನಿರ್ವಹಿಸಿದವರು ಯಾರು? ಯಾರ ಯಾರ ಪಾತ್ರ ಏನಿದೆ? ಎಲ್ಲವೂ ಹೊರಗೆ ಬರಬೇಕು. ವಾಲ್ಮೀಕಿ ನಿಗಮ ಹಣ ತೆಲಂಗಾಣಕ್ಕೆ ಹೋಗಿದೆ ಎನ್ನುವುದು ತನಿಖೆ ಬಳಿಕ ಗೊತ್ತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.
ತಂತ್ರ, ಕುತಂತ್ರ ನಡೆಸಿ ಚುನಾವಣೆಯಲ್ಲಿ ಗೆಲುವು ಪಡೆದಿಲ್ಲ : ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯ ದೊಡ್ಡ ಗೆಲುವು ಜನರು ಕೊಟ್ಟ ತೀರ್ಪು. ಯಾವ ತಂತ್ರ ಕುತಂತ್ರದ ಮೂಲಕವೂ ಚುನಾವಣೆ ನಡೆಸಿಲ್ಲ. ಜನ ಗೆಲ್ಲಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮಾರ್ಮಿಕವಾಗಿ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ಕೇಂದ್ರ ಸಚಿವ ಸ್ಥಾನದ ವಿಚಾರ : ದೆಹಲಿಗೆ ಹೋಗಿ ಸಚಿವನಾಗುವುದಕ್ಕಿಂತ ನಾಡಿನ ಜನತೆಯ ಸಮಸ್ಯೆಗೆ ಪರಿಹಾರ ನೀಡಬೇಕು. ನೀರಾವರಿ ವಿಷಯದಲ್ಲಿ ನ್ಯಾಯ ಪಡೆಯಬೇಕು. ಮಂತ್ರಿ ಸ್ಥಾನ ಅನಂತರದ ಮಾತು. ನನ್ನ ಕಡೆಯಿಂದ ಕೇಂದ್ರಕ್ಕೆ ಯಾವ ಮುಜುಗರವೂ ಇರುವುದಿಲ್ಲ. ಮೈತ್ರಿ ಧರ್ಮ ಪಾಲನೆ ಮಾಡುತ್ತೇವೆ. ರಾಜ್ಯದ ಎಲ್ಲಾ ಸಂಸದರ ಜತೆ ಒಟ್ಟಾಗಿ ಕೆಲಸ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದರು ಕುಮಾರಸ್ವಾಮಿ.
ಚನ್ನಪಟ್ಟಣ ಉಪ ಚುನಾವಣೆ ವಿಚಾರ : ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಇನ್ನೂ ಸಮಯಾವಕಾಶವಿದೆ. ಆರು ತಿಂಗಳು ಸಮಯವಿದೆ. ಈ ಬಗ್ಗೆ ನಾನು ಮತ್ತು ಸಿ.ಪಿ.ಯೋಗೇಶ್ವರ್ ಕುಳಿತು ಮಾತನಾಡಿ ತೀರ್ಮಾನ ಮಾಡುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.